Saturday, May 21, 2022
HomeFilm Newsರೆಡ್ ಡ್ರೆಸ್ ನಲ್ಲಿ ಮಿಂಚುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ…. ಫಿದಾ ಆದ್ರು ಫ್ಯಾನ್ಸ್…

ರೆಡ್ ಡ್ರೆಸ್ ನಲ್ಲಿ ಮಿಂಚುತ್ತಿರುವ ಮಿಲ್ಕಿ ಬ್ಯೂಟಿ ತಮನ್ನಾ…. ಫಿದಾ ಆದ್ರು ಫ್ಯಾನ್ಸ್…

ದಕ್ಷಿಣ ಭಾರತದ ಬಹುಬೇಡಿಕೆ ನಟಿ ತಮನ್ನಾ ತಮ್ಮ ಬ್ಯೂಟಿ ಮೂಲಕವೇ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. ಅನೇಕ ಹಿಟ್ ಸಿನೆಮಾಗಳ ಮೂಲಕ ದೊಡ್ಡ ಅಭಿಮಾನಿ ಬಳಗವನ್ನು ಗಳಿಸಿಕೊಂಡಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲೂ ಸಹ ಸಕ್ರಿಯಾರಾಗಿರುವ ನಟಿ ತಮನ್ನಾ ಅಭಿಮಾನಿಗಳಿಗಾಗಿ ಆಗಾಗ ಹಾಟ್ ಪೊಟೋಗಳನ್ನು ಶೇರ್‍ ಮಾಡುತ್ತಿರುತ್ತಾರೆ.

ಇತ್ತೀಚಿಗಷ್ಟೆ ನಟಿ ತಮನ್ನಾ ಕೆಂಪು ಡ್ರೆಸ್ ನಲ್ಲಿ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ತಮ್ಮ ಅಂದವನ್ನು ಪ್ರದರ್ಶನ ಮಾಡುತ್ತಾ ಅಭಿಮಾನಿಗಳ ಹಾಗೂ ಪಡ್ಡೆಹುಡುಗರ ನಿದ್ದೆಗೆಡಿಸುತ್ತಿದ್ದಾರೆ. ಎಲ್ಲರ ಮತಿ ಭ್ರಮಣೆಯಾಗುವಂತಹ ಪೊಟೋಗಳನ್ನು ನಟಿ ತಮನ್ನಾ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಪೊಟೋಗಳನ್ನು ಅಭಿಮಾನಿಗಳು ಮೆಚ್ಚಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಈ ಪೊಟೋಗಳು ಸಖತ್ ವೈರಲ್ ಆಗುತ್ತಿವೆ.

ತಮನ್ನಾ ತಮ್ಮ ಬ್ಯೂಟಿ, ನಟನೆಯ ಮೂಲಕ ದಶಕಗಳಿಂದಲೂ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಟೀನೇಜ್ ವಯಸ್ಸಿನಲ್ಲಿಯೇ ಸಿನಿರಂಗಕ್ಕೆ ಕಾಲಿಟ್ಟ ನಟಿ ಮಿಲ್ಕಿ ಬ್ಯೂಟಿ ತಮನ್ನಾ ಸಾಲು ಸಾಲು ಸಿನೆಮಾಗಳ ಹಿಟ್ ಕೊಟ್ಟಿದ್ದಾರೆ. ಕಡಿಮೆ ಸಮಯದಲ್ಲೇ ದೊಡ್ಡ ದೊಡ್ಡ ಸ್ಟಾರ್‍ ನಟರ ಜೊತೆ ತೆರೆ ಹಂಚಿಕೊಂಡರು. ಇತ್ತೀಚಿಗೆ ಮೆಗಾಸ್ಟಾರ್‍ ಅಭಿನಯದ ಸೈರಾ ನರಸಿಂಹ ನಾಯ್ಡು ಸಿನೆಮಾದ ಬಳಿಕ ವೆಬ್ ಸೀರಿಸ್ ಗಳಲ್ಲೂ ಸಹ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ.

ಖ್ಯಾತ ನಿರ್ದೇಶಕ ಶೇಖರ್‍ ಕಮ್ಮುಲ ನಿರ್ದೇಶನದ ಹ್ಯಾಪಿ ಡೇಸ್ ಸಿನೆಮಾ ಮೂಲಕ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ತಮನ್ನ, ಬಳಿಕ ಅನೇಕ ಸಿನೆಮಾಗಳಲ್ಲಿ ಅವಕಾಶ ಗಿಟ್ಟಿಸಿಕೊಂಡರು. ಸದ್ಯ ಕನ್ನಡ, ತಮಿಳು, ಹಿಂದಿ ಸೇರಿದಂತೆ ತೆಲುಗು ಸಿನಿರಂಗದಲ್ಲಿ ತಮ್ಮದೇ ಆದ ಚಾಪು ಮೂಡಿಸಿದ್ದಾರೆ. ಜೊತೆಗೆ 11th ಅವರ್‍, ನವೆಂಬರ್‍ ಸ್ಟೋರಿ ಮೊದಲಾದ ವೆಬ್ ಸಿರೀಸ್ ಗಳ ಮೂಲಕವೂ ಒಟಿಟಿಯಲ್ಲಿ ಸಹ ಎಂಟ್ರಿ ಕೊಟ್ಟರು. ಸದ್ಯ ಬಾಲಿವುಡ್ ನ ಬೊಲೆ ಚೂಡಿಯನ್ಸ್, ಪ್ಲಾನ್ ಎ ಪ್ಲಾನ್ ಬಿ, ಬಬ್ಲಿ ಬೌನ್ಸರ್‍ ಎಂಬ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜೊತೆಗೆ ಮೆಗಾಸ್ಟಾರ್‍ ಚಿರಂಜೀವಿ ಜೊತೆ ಭೋಳಾ ಶಂಕರ್‍ ಎಂಬ ಸಿನೆಮಾದಲ್ಲೂ ಸಹ ನಟಿಸುತ್ತಿದ್ದಾರೆ.

ಸದ್ಯ ವಿಕ್ಟರಿ ವೆಂಕಟೇಶ್ ಹಾಗೂ ವರುಣ್ ತೇಜ್ ಕಾಂಬಿನೇಷನ್ ನಲ್ಲಿ ಶೀಘ್ರದಲ್ಲೇ ತೆರೆಗೆ ಬರಲಿರುವ F3 ಸಿನೆಮಾದಲ್ಲಿ ತಮನ್ನಾ ನಟಿಸಿದ್ದು, ಈ ಸಿನೆಮಾದ ಪ್ರಮೋಷನ್ ಕಾರ್ಯಕ್ರಮಗಳಲ್ಲಿ ನಟಿ ತಮನ್ನಾ ತಮ್ಮ ಬ್ಯೂಟಿ ಪ್ರದರ್ಶನ ಮಾಡಿದ್ದಾರೆ. ರೆಡ್ ಡ್ರೆಸ್ ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಎಲ್ಲರ ನಿದ್ದೆಗೆಡಿಸುತ್ತಿದೆ. ಇನ್ನೂ ತಮನ್ನಾ ಬ್ಯೂಟಿಯೊಂದಿಗೆ ನಟಿ ಸೊನಾಲ್ ಚೌಹಾಣ್, ಪೂಜಾ ಹೆಗ್ಡೆ ಬಲವಾದ ಫೈಟ್ ನೀಡಲು ಸಿದ್ದರಾಗಿದ್ದಾರೆ ಎನ್ನಲಾಗುತ್ತಿದೆ.

- Advertisement -

You May Like

More