ಸೌತ್ ಸಿನಿರಂಗದಲ್ಲಿ ಸುಮಾರು ವರ್ಷಗಳಿಂದ ಸ್ಟಾರ್ ನಟಿಯಾಗಿ ಮುನ್ನುಗ್ಗುತ್ತಿರುವ ನಟಿಯರಲ್ಲಿ ತಮನ್ನಾ ಭಾಟೀಯಾ ಸಹ ಒಬ್ಬರಾಗಿದ್ದಾರೆ. ಆಕೆಯ ಸ್ಕಿನ್ ಟೋನ್ ಗೆ ಫಿದಾ ಆಗಿ ಆಕೆಗೆ ಮಿಲ್ಕಿ ಬ್ಯೂಟಿ ಎಂತಲೂ ಸಹ ಕರೆಯಲಾಗುತ್ತದೆ. ಆಕೆ ಸ್ಕಿನ್ ಟೋನ್ ಪ್ರದರ್ಶನದಲ್ಲಿ ರೋಲ್ ಮಾಡೆಲ್ ಎಂತಲೇ ಕರೆಯಬಹುದಾಗಿದೆ. ಇದೀಗ ಆಕೆ ತನ್ನ ಕೆರಿಯರ್ ನಲ್ಲಿ ನಡೆದ ಕೆಲವೊಂದು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆಯ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿವೆ.
ದಕ್ಷಿಣದ ಸಿನಿರಂಗದಲ್ಲಿ ಸ್ಟಾರ್ ನಟಿಯಾಗಿ ದೊಡ್ಡ ಖ್ಯಾತಿ ಪಡೆದುಕೊಂಡಿರುವ ತಮನ್ನಾ ಎರಡು ದಶಕಗಳಿಂದ ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗಷ್ಟೆ ಆಕೆ ತಮ್ಮ 33ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಈ ಸಮಯದಲ್ಲೇ ಆಕೆ ಮಿಡಿಯಾ ಒಂದಕ್ಕೆ ಸಂದರ್ಶನ ಕೊಟ್ಟಿದ್ದಾರೆ. ಈ ಸಂದರ್ಶನದಲ್ಲಿ ಆಕೆ ಕೆರಿಯರ್ ಬಗ್ಗೆ ಕೆಲವೊಂದು ಇಂಟ್ರಸ್ಟಿಂಗ್ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಆಕೆ ಮುಂಬೈನಲ್ಲಿ ಓದುತ್ತಿರುವಾಗಲೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿದ್ದಾಗಿ ಹೇಳಿದ್ದಾರೆ. ದ್ವಿತೀಯ ಪಿಯು ಓದುವ ಸಮಯದಲ್ಲಿ ಆಕೆ ಸಿನಿರಂಗಕ್ಕೆ ಎಂಟ್ರಿ ಕೊಟ್ಟರಂತೆ. ಆಕೆ 15 ನೇ ವರ್ಷದಲ್ಲೇ ಸಿನಿಮಾ ರಂಗಕ್ಕೆ ಎಂಟ್ರಿ ಕೊಟ್ಟರು. ಅದೇ ಸಮಯದಲ್ಲೇ ಆಕೆ ತನ್ನ ಸಿನಿ ಕೆರಿಯರ್ ಮುಗೀತು ಎಂದು ಕೊಂಡಿದ್ದರಂತೆ.
ನಟಿ ತಮನ್ನಾ 15ನೇ ವರ್ಷದಲ್ಲಿ ಮೊದಲ ಬಾರಿಗೆ ಸಾಂದ್ ಸಾ ರೋಷನ್ ಷಹಾನಾ ಎಂಬ ಹಿಂದಿ ಸಿನೆಮಾದಲ್ಲಿ ನಟಿಸಿದ್ದರಂತೆ. ಆದರೆ ಈ ಸಿನೆಮಾ ಡಿಜಾಸ್ಟರ್ ಆಗಿತ್ತು. ಅದೇ ಸಮಯದಲ್ಲಿ ಆಕೆ ತೆಲುಗಿನಲ್ಲಿ ಶ್ರೀ ಎಂಬ ಸಿನೆಮಾದಲ್ಲಿ ನಟಿಸಿದ್ದರಂತೆ. ಆ ಸಿನೆಮಾ ಸಹ ಫ್ಲಾಪ್ ಆಗಿತ್ತಂತೆ. ಒಂದೇ ವರ್ಷದಲ್ಲಿ ಎರಡೂ ಸಿನೆಮಾಗಳು ಪ್ಲಾಫ್ ಆದ ಹಿನ್ನೆಲೆಯಲ್ಲಿ ತನ್ನ ಕೆರಿಯರ್ ಅಂದಿಗೇ ಮುಗಿತು ಎಂದುಕೊಂಡರಂತೆ ತಮನ್ನಾ. ಬಳಿಕ ಆಕೆಗೆ ತೆಲುಗು ನಿರ್ದೇಶಕ ಶೇಖರ್ ಕಮ್ಮುಲ ಸಾರಥ್ಯದಲ್ಲಿ ಮೂಡಿಬಂದ ಹ್ಯಾಪಿಡೇಸ್ ಸಿನೆಮಾ ಸಕ್ಸಸ್ ಬಳಿಕ ಆಕೆಗೆ ಬ್ಯಾಕ್ ಟು ಬ್ಯಾಕ್ ಅವಕಾಶಗಳು ಬಂದವು. ಜೊತೆಗೆ ಸ್ಟಾರ್ ನಟರ ಜೊತೆಗೆ ನಟಿಸುವ ಅವಕಾಶ ದೊರೆಯಿತು. ಅಷ್ಟೇಅಲ್ಲದೇ ಸ್ಪೇಷಲ್ ಸಾಂಗ್ ಗಳಲ್ಲೂ ಸಹ ನಟಿಸುವ ಅವಕಾಶ ಬಂತೆಂದು ತಮನ್ನಾ ಹೇಳಿದ್ದಾರೆ. ಸದ್ಯ ಆಕೆಯ ಹೇಳಿಕೆಗಳು ಎಲ್ಲಾ ಕಡೆ ವೈರಲ್ ಆಗುತ್ತಿವೆ.
ತಮನ್ನಾ ಇದೀಗ ಮೆಗಾಸ್ಟಾರ್ ಚಿರಂಜೀವಿ ಅಭಿನಯಿಸುತ್ತಿರುವ ಭೋಳಾ ಶಂಕರ್ ಸಿನೆಮಾದಲ್ಲಿ ನಟಿಸುತ್ತಿದ್ದಾರೆ. ಇನ್ನೂ ಚಿರು ಹಾಗೂ ತಮನ್ನಾ ಕಾಂಬಿನೇಷನ್ ನಲ್ಲಿ ಮೂಡಿಬರಲಿರುವ ಈ ಸಿನೆಮಾ ಯಾವ ರೀತಿಯಲ್ಲಿ ಮೋಡಿ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ತಮನ್ನಾ ನಟಿಯಾಗಿ ಹಾಗೂ ಕೆಲವೊಂದು ಸಿನೆಮಾಗಳಲ್ಲಿ ಐಟಂ ಸಾಂಗ್ ಗಳಲ್ಲೂ ಸಹ ಹೆಜ್ಜೆ ಹಾಕುತ್ತಾ ಫೇಂ ಸಹ ಗಿಟ್ಟಿಸಿಕೊಂಡಿದ್ದಾರೆ.