Uncategorized

ಚಿರು ಕನಸಿನಂತೆ ಮಗನನ್ನ ಬೆಳೆಸಬೇಕು ಅದೇ ನನ್ನ ಗುರಿ​- ಮೇಘನಾ ರಾಜ್

ಚಿರು ಕನಸಿನಂತೆ ಮಗನನ್ನ ಬೆಳಿಸಬೇಕು ಅದೇ ನನ್ನ ಗುರಿ, ಅವರ ಆಸೆಯಂತೆ ಮಗನನ್ನು ಬೆಳೆಸಿದರೆ ಮಾತ್ರ ಅವರ ಕನಸುಗಳಿಗೆ ನಾನು ನ್ಯಾಯ ಕೊಡಿಸಿದಂತಾಗುತ್ತದೆ ಎಂದು ನಟಿ ಮೇಘನಾ ರಾಜ್​ ಹೇಳಿದ್ದಾರೆ. ಕೆಲವು ಘಟನೆಗಳು ಸಂಭವಿಸಿದ್ದ ದಿನಗಳಿಂದ ನಾನು ಬ್ಲಾಂಕ್​ ಆಗಿದ್ದೆ, ಈಗಲೂ ಹಾಗೇ ಇದ್ದೇನೆ. ಆದರೆ ನನ್ನ ಮುಂದಿನ ದಿನಗಳು ಅಂದ್ರೆ ಅದು ನನ್ನ ಮಗ, ಅವನೇ ನನ್ನ ಶಕ್ತಿ, ‘ಹಿ ಈಸ್​​ ಎವೆರಿಥಿಂಗ್​ ಟು ಮಿ’ ಎಂದಿದ್ದಾರೆ.

ಇಂದು ತಮ್ಮ ಮಗನ ತೊಟ್ಟಿಲು ಶಾಸ್ತ್ರದ ಹಿನ್ನೆಲೆ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಮೇಘನಾ, ಹಲವು ತಿಂಗಳುಗಳಿಂದ ನನಗೆ ಧೈರ್ಯ ನೀಡಿ ನನ್ನೊಂದಿಗಿರುವ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಇಂದು ತವರು ಮನೆ ಕಡೆಯಿಂದ ನಡೆಯ ಬೇಕಾದ ತೊಟ್ಟಿಲು ಶಾಸ್ತ್ರ ನಡೆದಿದೆ. ನಮ್ಮ ಮಗನಿಗಾಗಿ ಗದಗದಿಂದ ವಿಶೇಷವಾದ ಉಡುಗೊರೆಯಾಗಿ ಬಂದಿದ್ದ ಬಣ್ಣದ ತೊಟ್ಟಲನ್ನು ಪ್ರೀತಿಯಿಂದ ಸ್ವೀಕರಿಸಿದ್ದೇವೆ ಎಂದರು.

Trending

To Top