Kannada Serials

ಜೊತೆಜೊತೆಯಲಿ ಅನು – ಮೇಘಾ ಶೆಟ್ಟಿ ಅವರ ಕಾಲೇಜಿನ ಅಪರೂಪದ ಫೋಟೋಗಳನ್ನು ನೋಡಿ!

ಮೂಲತಃ ಕರಾವಳಿ ಭಾಗದವರಾದ ಖ್ಯಾತ ಕನ್ನಡದ ಕಿರುತೆರೆ ನಟಿಯಾದ ಮೇಘಾ ಶೆಟ್ಟಿ ಅವರು ಸದ್ಯ ಜೊತೆಜೊತೆಯಲಿ ದಾರಾವಾಹಿಯಿಂದ ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ. ಸದ್ಯ ಕನ್ನಡ ಕಿರುತೆರೆಯಲ್ಲಿ ಜೊತೆಜೊತೆಯಲ್ಲಿ ಧಾರಾವಾಹಿ ಅತೀ ಹೆಚ್ಚು TRP ಯಿಂದ ಮುನ್ನುಗ್ಗುತ್ತಿದೆ. ನೀವು ಮೇಘಾ ಶೆಟ್ಟಿ ಅವರ ಫೋಟೋಗಳನ್ನು, ವಿಡಿಯೋ ಗಳನ್ನೂ ಸಾಮಾಜಿಕ ಜಾಲತಾಣಗಳಲ್ಲಿ ನೋಡಿರುತ್ತೀರಿ. ಆದರೆ ಮೇಘ ಶೆಟ್ಟಿ ಅವರು ಕಾಲೇಜು ಓದುವ ಸಮಯದಲ್ಲಿ ಹೇಗಿದ್ದಾರೆ ಗೊತ್ತಾ! ಇಲ್ಲಿದೆ ನಟಿ ಮೇಘ ಶೆಟ್ಟಿ ಅವರ ಬಹಳ ಅಪರೂಪದ, ಎಲ್ಲೂ ನೋಡಿರದ ಫೋಟೋಗಳು. ಸ್ಕ್ರೋಲ್ ಡೌನ್ ಮಾಡಿ ಫೋಟೋಗಳನ್ನು ನೋಡಿ

ಮೇಘ ಶೆಟ್ಟಿ ಅವರು ಮಂಗಳೂರಿನಲ್ಲಿಯೇ ತಮ್ಮ ವಿದ್ಯಾಭ್ಯಾಸ ವನ್ನು ಮುಗಿಸಿ, ನಂತರ ಮಾಡೆಲ್ಲಿಂಗ್ ಗಾಗಿ ಬೆಂಗಳೂರಿಗೆ ಬಂದರು. ಮೇಘ ಶೆಟ್ಟಿ ಅವರಿಗೆ ಹಾರ್ದಿಕ ಶೆಟ್ಟಿ, ಶುಷ್ಮಾ ಶೆಟ್ಟಿ ಎಂಬ ಸಹೋದರಿಯರು ಕೂಡ ಇದ್ದಾರೆ. ಒಂದು ಸಾಮಾನ್ಯ ಕುಟುಂಬದಿಂದ ಬಂದಿರುವ ಮೇಘ ಶೆಟ್ಟಿ ಅವರು ಸದ್ಯ ಕನ್ನಡದ ಮಟ್ಟಿಗೆ ದೊಡ್ಡ ನಟಿ ಆಗಿ ಮಿಂಚುತ್ತಿದ್ದಾರೆ. ಜೊತೆಜೊತೆಯಲಿ ಧಾರಾವಾಹಿ ಮೂಲಕ ತಮ್ಮ ಕರಿಯರ್ ಶುರು ಮಾಡಿದ ಮೇಘ ಶೆಟ್ಟಿ ಅವರಿಗೆ ಸದ್ಯ ಬಹಳಷ್ಟು ಕನ್ನಡ ಸಿನಿಮಾಗಳಿಗೆ ಆಫರ್ ಕೂಡ ಬರುತ್ತಿದೆ. ಅವರ ಅಪರೂಪದ ಫೋಟೋಗಳನ್ನು ನೋಡಿ

ಮೇಘಾ ಶೆಟ್ಟಿ ಅವರಿಗೆ ಜೊತೆಜೊತೆಯಲಿ ಧಾರಾವಾಹಿಯ ಒಂದು ಎಪಿಸೋಡ್ ಗೆ ಬರೋಬ್ಬರಿ 25000 ರಿಂದ 30000 ಸಂಭಾವನೆ ಪಡೆಯುತ್ತಾರೆ. ಸದ್ಯ ಮೇಘಾ ಶೆಟ್ಟಿ ಅವರಿಗೆ ಕನ್ನಡ ಅಲ್ಲದೆ ತಮಿಳು ಹಾಗು ತೆಲುಗು ಧಾರಾವಾಹಿಗಳಿಗೆ ಕೂಡ ಆಫ಼ರ್ ಗಳು ಬರುತ್ತಿವೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮೇಘ ಶೆಟ್ಟಿ ಅವರಿಗೆ ಅವರದ್ದೇ ಆದ ಒಂದು ದೊಡ್ಡ ಅಭಿಮಾನಿ ಬಳಗವೇ ಇದೆ. ಮೇಘ ಶೆಟ್ಟಿ ಅವರ ಕಾಲೇಜಿನ ಸಮಯದ ಅಪರೂಪದ ಫೋಟೋಗಳನ್ನು ನೀವು ಇಲ್ಲಿ ನೋಡಬಹುದು.ಅದರಲ್ಲೂ ಅನು ಸಿರಿಮನೆ ಪಾತ್ರ ನಿರ್ವಹಿಸುತ್ತಿರುವ ನಟಿ ಮೇಘಾ ಶೆಟ್ಟಿ ಅಂತೂ ಕರ್ನಾಟಕದ ಮನೆಮನೆಗಳಲ್ಲೂ ಜನಪ್ರಿಯರಾಗಿದ್ದಾರೆ. ಮುದ್ದಾದ ಮಾತುಗಳು, ಮುಗ್ಧವಾದ ನಟನೆಯಿಂದ ಎಲ್ಲರ ಗಮನ ಸೆಳೆದಿದ್ದಾರೆ. ಮೂಲತಃ ಮಂಗಳೂರಿನವರಾದ ಮೇಘಾ ಶೆಟ್ಟಿ ಅವರ ಕನಸು ಐ.ಎ.ಎಸ್ ಅಧಿಕಾರಿ ಆಗಬೇಕು ಎಂಬುದು.

ಆದರೆ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದ ನಂತರ ಇವರ ದಿನಕ್ಕೆ 25,000 ಆಗಿದೆ ಎನ್ನಲಾಗುತ್ತಿದೆ. ಧಾರಾವಾಹಿ ಜನಪ್ರಿಯತೆ ಗಳಿಸಿದ ನಂತರ ಮೇಘಾ ಶೆಟ್ಟಿ ಅವರ ಸಂಭಾವನೆ ಸಹ ಹೆಚ್ಚಾಗಿದೆ ಎನ್ನುವ ಮಾತುಗಳು ಕಿರುತೆರೆ ರಂಗದಲ್ಲಿ ಕೇಳಿ ಬರುತ್ತಿದೆ…ಮೇಘ ಶೆಟ್ಟಿ ಅವರಿಗೆ ಮುಂದಿನ ಎಲ್ಲಾ ಪ್ರಾಜೆಕ್ಟ್ಸ್ ಗಳಿಗೆ ಒಳ್ಳೇದ್ ಆಗಲಿ ಎಂದು ಶುಭ ಹಾರೈಸೋಣ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ ಎಲ್ಲಾ ಲೇಟೆಸ್ಟ್ ಮಾಹಿತಿಗಾಗಿ ನಮ್ಮ ಪೇಜನ್ನು ಇಂದೇ ಫಾಲೋ ಮಾಡಿರಿ. ಈ ಸುದ್ದಿ ಇಷ್ಟವಾಗಿದ್ದಲ್ಲಿ ಇದನ್ನು ಮರೆಯದೆ ಶೇರ್ ಮಾಡಿರಿ.

Trending

To Top