Kannada Cinema News

ಮೇಘನಾ ಕೈ ಹಿಡಿದು ಹೆಜ್ಜೆ ಹಾಕಿದ ಚಿರು! ಕಲಾವಿದನ ಕೈ ಚಳಕಕ್ಕೆ ಅಭಿಮಾನಿಗಳು ಫಿದಾ

ಒಂದೆರಡು ದಿನಗಳ ಹಿಂದೆಯಷ್ಟೇ ಸರ್ಜಾ ಕುಟುಂಬದ ಸೊಸೆ ಮೇಘನಾ ರಾಜ್ ಅವರ ಸೀಮಂತ ಶಾಸ್ತ್ರ ನೆರವೇರಿತು. ಸಂಪ್ರದಾಯದ ಪ್ರಕಾರ ಶಾಸ್ತ್ರೋಕ್ತವಾಗಿ ಮೇಘನಾ ರಾಜ್ ರ ಸೀಮಂತ ನೆರವೇರಿತು. ಬೆಂಗಳೂರಿನಲ್ಲಿ ಖಾಸಗಿಯಾಗಿ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬದವರು ಹಾಗೂ ಕೆಲವೇ ಕೆಲವು ಆಪ್ತರಿಗೆ ಮಾತ್ರ ಆಮಂತ್ರಣ ನೀಡಲಾಗಿತ್ತು. ಭಾನುವಾರ ಸರಳವಾಗಿ ಮೇಘನರ ಸೀಮಂತ ಶಾಸ್ತ್ರ ನಡೆದಿತ್ತು. ಜೊತೆಗೆ ಸೋಮವಾರ ರಾತ್ರಿ ಬಹಳ ಅದ್ಧೂರಿಯಾಗಿ ಶಾಸ್ತ್ರವನ್ನು ನಡೆಸಲಾಯಿತು. ಸರ್ಜಾ ಕುಟುಂಬದ ಎಲ್ಲರೂ ಸಹ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆದರೆ ಈ ಶುಭ ಸಂದರ್ಭದಲ್ಲಿ ಚಿರು ಇಲ್ಲ ಎನ್ನುವ ನೋವು ಎಲ್ಲರನ್ನು ಕಾಡಿತ್ತು. ಸಾಮಾನ್ಯವಾಗಿ ಪ್ರತಿಯೊಬ್ಬ ಹೆಣ್ಣಿಗೂ ಸಹ ಸೀಮಂತ ಶಾಸ್ತ್ರದಲ್ಲಿ ಪತಿ ತನ್ನ ಜೊತೆಯಲ್ಲಿರಬೇಕು ಎಂಬ ಆಸೆ ಇರುತ್ತದೆ.

ಆದರೆ ಮೇಘನಾರ ವಿಷಯದಲ್ಲಿ ಅದು ಸಾಧ್ಯವಿಲ್ಲ. ಪತಿಯ ಮೇಲಿನ ಪ್ರೀತಿಯಿಂದ, ಚಿರು ದೊಡ್ಡ ಪೋಸ್ಟರ್ ಒಂದನ್ನು ಇರಿಸಿ ಅದರ ಪಕ್ಕದಲ್ಲಿಯೇ ಕುಳಿತು ಶಾಸ್ತ್ರಗಳನ್ನು ಮಾಡಿಸಿಕೊಂಡಿದ್ದರು ಮೇಘನಾ. ಜೊತೆಗೆ ಸೀಮಂತ ಶಾಸ್ತ್ರದ ಇನ್ನೊಂದಷ್ಟು ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಇದೀಗ ಮೇಘನಾ ಒಂಟಿಯಾಗಿದ್ದ ಫೋಟೋಗೆ ಕಲಾವಿದನ ಕುಂಚವು ಜೀ’ವ ತುಂಬಿ, ಹೊಸರೂಪ ನೀಡಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ವೈ’ರಲ್ ಆಗಿದೆ. ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕಲಾವಿದ ಕರಣ್ ಆಚಾರ್ಯ ಅವರ ಹೆಸರನ್ನು ಕೇಳಿರುತ್ತೀರಿ. ಅಭಿಮಾನಿಯೊಬ್ಬರು ಕರಣ್ ಆಚಾರ್ಯರಿಗೆ ಮೇಘನಾ ರಾಜ್ ರ ಫೋಟೋ ಒಂದನ್ನು ಪೋಸ್ಟ್ ಮಾಡಿ ಇದಕ್ಕೆ ಜೀ’ವ ನೀಡಿ ಎಂದು ಕೇಳಿಕೊಂಡಿದ್ದಾರೆ. ಮೇಘನಾ ಒಂಟಿಯಾಗಿರುವ ಫೋಟೋದಲ್ಲಿ ಮೇಘನಾ ಪಕ್ಕ ಚಿರು ಇರುವ ಹಾಗೆ ಆ ಫೋಟೋಗೆ ಜೀವ ತುಂಬಲಾಗಿದೆ.

ಚಿರು ಹಾಗೂ ಮೇಘನಾ ಮದುವೆ ಸಮಯದಲ್ಲಿ ತೆಗೆದಿರುವ ಚಿರು ಅವರ ಫೋಟೋವನ್ನು ಮೇಘನಾರ ಫೋಟೋ ಜೊತೆ ಸೇರಿಸಲಾಗಿದ್ದು ಇದು ಬಹಳ ನೈಜವಾಗಿ ಕಾಣಿಸುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಫೋಟೋ ಸಖತ್ ವೈರಲ್ ಆಗ್ತಿದೆ. ಇದೊಂದೇ ಅಲ್ಲ ಇದರ ಜೊತೆಗೆ ಮೇಘನಾ ಹಾಗೂ ಚಿರು ಅವರ ಇನ್ನು ಕೆಲವು ಫೋಟೋ ಗಳನ್ನು ಹೀಗೆ ಎಡಿಟ್ ಮಾಡಲಾಗಿದ್ದು ಕರಣ್ ಆಚಾರ್ಯರ ಕಲೆಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ಕಾಮೆಂಟ್ ಮಾಡಿ! ಕನ್ನಡ ಚಿತ್ರಗಳ ಬಗ್ಗೆ ಕನ್ನಡ ನಾಡಿನ ಬಗ್ಗೆ ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಫಾಲೋ ಮಾಡಿರಿ.

Trending

To Top