Saturday, May 21, 2022
HomeEntertainmentಪ್ರೇರಣಾ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಮಾಡಿದ್ದೇನು ಗೊತ್ತಾ?

ಪ್ರೇರಣಾ ಹುಟ್ಟುಹಬ್ಬಕ್ಕೆ ಮೇಘನಾ ರಾಜ್ ಮಾಡಿದ್ದೇನು ಗೊತ್ತಾ?

ಸರ್ಜಾ ಕುಟುಂಬದ ಸೊಸೆ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯಿ ಅವರ ಮುದ್ದಿನ ಮಗಳು ಮೇಘನಾ ರಾಜ್ ಕನ್ನಡ ಚಿತ್ರರಂಗದ ಖ್ಯಾತ ನಟಿ.ಕನ್ನಡ ಮಾತ್ರವಲ್ಲದೆ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಹ ಫ್ಹೇಮಸ್ ಆಗಿದ್ದಾರೆ ನಟಿ ಮೇಘನಾ ರಾಜ್.

ಕೆಲವು ತಿಂಗಳುಗಳಿಂದ ಮೇಘನಾ ರಾಜ್ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದಾರೆ, ಅಲ್ಲದೆ ಮನೆಯಿಂದ ಹೊರ ಬಂದು ತಮ್ಮನ್ನು ತಾವು ಸಹಜ ಜೀವನದಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ತಮ್ಮ ಮುದ್ದಿನ ಮಗ ರಾಯನ್ ರಾಜ್ ಸರ್ಜಾ ಮಾತನಾಡಲು ಪ್ರಯತ್ನಿಸುತ್ತಿರುವ ವಿಡಿಯೋ ಶೇರ್ ಮಾಡಿದ ಮೇಘನಾ ರಾಜ್ ಇದೀಗ ಒಂದು ಸ್ಪೆಷಲ್ ಫೋಟೋ ಶೇರ್ ಮಾಡಿದ್ದಾರೆ.

ದೃವ ಸರ್ಜಾ ಅವರ ಪತ್ನಿ ಪ್ರೇರಣ ಶಂಕರ್ ಅವರ ಹುಟ್ಟುಹಬ್ಬದ ಸಲುವಾಗಿ ಪ್ರೇರಣ ಅವರ ಫೋಟೋ ಶೇರ್ ಮಾಡಿ ಹ್ಯಾಪಿ ಬರ್ತ್ ಡೇ ಸಿಸ್ಟರ್ ಇನ್ ಲಾ ಎಂದು ಬರೆದುಕೊಂಡಿದ್ದಾರೆ.ಅಲ್ಲದೆ ಮೇಘನಾ ಅವರು ಪ್ರೇರಣ ಅವರಿಗೆ ದುಬಾರಿ ಗಿಫ್ಟ್ ಕೊಟ್ಟು ವಿಶ್ ಮಾಡಿದ್ದಾರೆ. ಈ ಫೋಟೋ ಗೆ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.

- Advertisement -

You May Like

More