Film News

ಮೇಘನಾರಿಗೆ ಚಿರು ಇಲ್ಲದೆ ಮೊದಲ ಹುಟ್ಟುಹಬ್ಬ! ಹೇಗಿತ್ತು ನೋಡಿ

ಯುವಸಾಮ್ರಾಟ್ ಚಿರಂಜೀವಿ ಸರ್ಜಾ ದಿಢೀರ್ ಮರಣ ಹೊಂದಿ ಈಗ 10 ತಿಂಗಳು ಕಳೆದಿದೆ. ಮೇಘನಾ ರಾಜ್ ಅವರು ಮದುವೆ ಆಗಿ ಎರಡು ವರ್ಷಗಲಿಗೆ ಗಂಡನನ್ನು ಕಳೆದುಕೊಂಡ ನೋವಿನಲ್ಲಿದ್ದರು. ಕಳೆದ ವರ್ಷ ಆಕ್ಟೊಬರ್ ತಿಂಗಳಿನಲ್ಲಿ ಜ್ಯೂನಿಯರ್ ಚಿರು ಜನಿಸಿದ ನಂತರ ಚಿರು ಇಲ್ಲದ ನೋವು ಒಂದು ಮಟ್ಟಕ್ಕೆ ಕಡಿಮೆ ಆಗುತ್ತಾ ಬಂದಿದೆ.

ಮಗುವನ್ನು ನೋಡುತ್ತಾ ತಮ್ಮ ನೋವನ್ನು ಮರೆಯುವ ಪ್ರಯತ್ನದಲ್ಲಿದ್ದಾರೆ ಮೇಘನಾ ರಾಜ್. ಇಂದು ಮೇಘನಾ ರಾಜ್ ಅವರ ಹುಟ್ಟುಹಬ್ಬ. ಇದು ಚಿರು ಇಲ್ಲದೆ ಮೇಘನಾ ಆಚರಿಸುತ್ತಿರುವ ಮೊದಲನೇ ಹುಟ್ಟುಹಬ್ಬ ಆಗಿದೆ. ಈ ದಿನದಂದು ಮಗನ ವಿಶೇಷವಾದ ವಿಡಿಯೋ ಶೇರ್ ಮಾಡಿದ್ದಾರೆ ಮೇಘನಾ. ಜ್ಯೂನಿಯರ್ ಚಿರುವಿಗೆ ತಂದೆಯ ಫೋಟೋ ತೋರಿಸುತ್ತಾ ಅಪ್ಪನ್ನ ನೋಡು ಎನ್ನುತ್ತಿದ್ದಾರೆ ಮೇಘನಾ.

ಅಪ್ಪನ ಫೋಟೋವನ್ನು ಗುರುತಿಸಿ ಜ್ಯೂನಿಯರ್ ಚಿರು ಅಪ್ಪನ ಫೋಟೋ ಮೇಲೆ ಕೈಯಿಟ್ಟು ಅನಂದಿಸುತ್ತಿದ್ದಾರೆ. ಈ ಮುದ್ದಾದ ವಿಡಿಯೋ ಪೋಸ್ಟ್ ಮಾಡಿರುವ ಮೇಘನಾ “ನಮ್ಮ ಮಿರಾಕಲ್.. ಎಂದೆಂದಿಗೂ.. ಯಾವಾಗಲೂ..” ಎಂದು ಕ್ಯಾಪ್ಶನ್ ಬರೆದು ಪೋಸ್ಟ್ ಮಾಡಿದ್ದಾರೆ ಮೇಘನಾ ರಾಜ್.

https://www.instagram.com/p/COX8mliFuXY/?igshid=1sa17khy873i4

Trending

To Top