Film News

ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ ಮೇಘನಾ ರಾಜ್

ನಟಿ ಮೇಘನಾ ರಾಜ್ ಸರ್ಜಾ ತಾಯಿಯಾದ ಬಳಿಕ ಮೊದಲ ಬಾರಿಗೆ ಕ್ಯಾಮರ ಫೇಸ್ ಮಾಡಿರುವ ಸಂತಸದ ವಿಚಾರವನ್ನ ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಕ್ಯಾಮರ ಮುಂದೆ ಸ್ಕ್ರಿಪ್ಟ್ ಓದುತ್ತಿರುವ ಫೋಟೋ ಶೇರ್ ಮಾಡಿದ್ದಾರೆ.

ಇದರಿಂದಾಗಿ ಸಂತೋಷಗೊಂಡ ಮೇಘನಾ ಅವರ ಆಪ್ತರು ಮತ್ತು ಅಭಿಮಾನಿಗಳು ಮೇಘನಾ ಅವರಿಗೆ ಶುಭಾಷಯ ತಿಳಿಸುತ್ತಿದ್ದಾರೆ.
ಮೇಘನಾ ಸರ್ಜಾ ತಾಯಿಯಾದ ಬಳಿಕ ಶೀಘ್ರದಲ್ಲೇ ಬಣ್ಣದ ಲೋಕಕ್ಕೆ ಹಿಂದಿರುಗುವ ಸುಳಿವನ್ನ ಕೆಲವು ದಿನಗಳ ಹಿಂದೆಯೇ ನೀಡಿದ್ದರು.

https://www.instagram.com/p/CRoHdKCL-up/?utm_medium=copy_link

ಇದೀಗ ಕ್ಯಾಮರ ಫೇಸ್ ಮಾಡಿ ಮತ್ತೆ ಹಳೆಯ ಜೀವನದ ಹಾಗೆ ಮಾಡುತ್ತಿದ್ದಾರೆ. ಇವತ್ತು ಜ್ಯೂನಿಯರ್ ಚಿರುವಿಗೆ ಒಬ್ಬತ್ತು ತಿಂಗಳು ವರ್ಷದ ಬಳಿಕ ಕ್ಯಾಮರ ಫೇಸ್ ಮಾಡುತ್ತಿದ್ದೇನೆ ಎಂದು ಬರೆದು ಹಾರ್ಟ್ ಎಮೋಜಿ ಹಾಕಿ ಬ್ಯಾಕ್ ಟು ಬೇಸಿಕ್ಸ್ ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಇನ್ನು ಮೇಘನಾ ಸರ್ಜಾ ಪೋಸ್ಟ್ ಗೆ ರಾಗಿಣಿ ಪ್ರಜ್ವಲ್, ಸಿಂಪಲ್ ಸುನಿಲ್ ಸೇರಿದಂತೆ ಹಲವರು ಶುಭ ಹಾರೈಕೆಯನ್ನ ತಿಳಿಸಿದ್ದಾರೆ.

Trending

To Top