Film News

ದೇವರು ನಿಜವಾಗಲೂ ಕ್ರೂರಿ ಎಂದಿದ್ದೇಕೆ ಮೇಘನಾ ರಾಜ್?

ಸ್ಯಾಂಡಲ್ ವುಡ್ ನಟ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ನಿಧನ ಸದ್ಯ ಇಡೀ ಚಿತ್ರರಂಗವನ್ನೇ ದಂಗು ಬಡಿಸಿದೆ. ಎಲ್ಲರೊಂದಿಗೆ ಅನ್ಯೋನ್ಯವಾಗಿದ್ದ ನಟನನ್ನು ಕಳೆದುಕೊಂಡ ಸ್ಯಾಂಡಲ್ ವುಡ್ ಮಂದಿ ಅವಕ್ ಆಗಿದ್ದಾರೆ.ಅಂತೆಯೆ ನಟಿ ಮೇಘನಾ ರಾಜ್ ಕೂಡ ಬೇಸರ ವ್ಯಕ್ತ ಪಡಿಸಿದ್ದಾರೆ.

ನಟ ಚಿರಂಜೀವಿ ಅಕಾಲಿಕ ಮರಣ ಇಡೀ ಚಿತ್ರರಂಗವೇ ಕಣ್ಣೀರು ಹಾಕುವಂತೆ ಮಾಡಿತ್ತು. ಸೆಲೆಬ್ರೆಟಿಗಳು ರಾಜಕೀಯ ನಾಯಕರು ಹಾಗೂ ಅಭಿಮಾನಿಗಳು ಕೂಡ ಕಣ್ಣೀರು ಸುರಿಸಿದ್ದರು. ಇಂದಿಗೂ ಅಭಿಮಾನಿಗಳು ಚಿರುವನ್ನು ಯಾವುದಾದರೂ ಒಂದು ವಿಚಾರದಲ್ಲಿ ಪದೇ ಪದೇ ನೆನಪು ಮಾಡಿಕೊಳ್ಳುತ್ತಿರುತ್ತಾರೆ. ಚಿರು ತೀರಿಕೊಂಡ ಹಲವು ದಿನಗಳ ಬಳಿಕ ಮೇಘನಾ ರಾಜ್ ಅವರು ಚಿರು ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ವಿಜಯ್ ನಾವೆಲ್ಲರೂ ನಿಮ್ಮ ಜೊತೆ ಇದ್ದೇವೆ ದೇವರು ಕೂಡ ನಮ್ಮ ಜೊತೆ ಇದ್ದಾನೆ ಎಂದು ಹೇಳುವ ಮೂಲಕ ಮೇಘನಾ ಬೆನ್ನಿಗೆ ನಿಂತಿದ್ದರು. ಆದರೆ ಇಂದು ವಿಜಯ್ ಕೂಡ ನಮನ್ನು ಅಗಲಿದ್ದಾರೆ, ಹಾಗಾಗಿ ವಿಜಯ್ ಅವರ ಈ ಮಾತನ್ನು ಮೇಘನಾ ನೆನಪಿಸಿಕೊಂಡಿದ್ದಾರೆ, ತಾವು ಬರೆದಿರುವ ಬರಹಕ್ಕೆ ವಿಜಯ್ ಪ್ರತಿಕ್ರಿಯಿಸಿದನ್ನು ಇನ್ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿರುವ ಮೇಘನಾ ದೇವರು ನಿಜವಾಗಲೂ ಕ್ರೂರಿ ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.ಈ ಮೂಲಕ ವಿಜಯ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

https://instagram.com/stories/megsraj/2595962921509804519?utm_source=ig_story_item_share&utm_medium=share_sheet

Trending

To Top