Cinema

ಮೇಘನಾ ರಾಜ್ ಅವರು ಈ ವರ್ಷ ಯಾವೆಲ್ಲ ಸಿನಿಮಾಗಳಲ್ಲಿ , ಯಾರೆಲ್ಲ ನಟರ ಜೊತೆ ನಟಿಸಿದ್ದಾರೆ ಗೊತ್ತಾ!

ನಟಿ ಮೇಘನಾ ರಾಜ್ ಅವರು ಇನ್ನೂ ಕೂಡ ಪತಿ ಚಿರಂಜೀವಿ ಸರ್ಜಾ ಅವರ ಅಗಲಿಕೆಯ ನೋವಿನಿಂದ ಹೊರಬಂದಿಲ್ಲ! ಚಿರು ಸರ್ಜಾ ನಮ್ಮನೆಲ್ಲ ಆಗಲಿ ಒಂದು ತಿಂಗಳೇ ಕಳೆದಿವೆ. ಒಂದು ಕಡೆ ಚಿರು ಸರ್ಜಾ ಅವರ ಚಿತ್ರಗಳಿಗೆ ಧ್ರುವ ಸರ್ಜಾ ಅವರು ಡಬ್ಬಿಂಗ್ ಮಾಡಿ ಹಿರಿತನ ಮೆರೆದಿದ್ದಾರೆ! ಇನ್ನೊಂದು ಕಡೆ ನಟಿ ಮೇಘನಾ ರಾಜ್ ಅವರದ್ದು ಕೂಡ ಕನ್ನಡ ಸಿನಿಮಾಗಳು ಬಿಡುಗಡೆ ಆಗಲು ಸಿದ್ಧವಾಗಿವೆ. ಕಳೆದ ವರ್ಷ ನಟಿ ಮೇಘನಾ ರಾಜ್ ಅವರು “ಒಂಟಿ” ಹಾಗು “ಕುರುಕ್ಷೇತ್ರ” ಕನ್ನಡ ಚಿತ್ರಗಳಲ್ಲಿ ನಟಿಸಿದ್ದರು. ಈ ವರ್ಷ ನಟಿ ಮೇಘನಾ ರಾಜ್ ಅವರು ನಟಿಸಿರುವ , ಹಾಗು ಬಿಡುಗಡೆಗೆ ಸಿದ್ದವಾಗಿರುವ ಚಿತ್ರಗಳು ಯಾವುದು ಗೊತ್ತಾ? ಮುಂದೆ ಓದಿರಿ
ಹೌದು ನಟಿ ಮೇಘನಾ ರಾಜ್ ಅವರು 2020 ರಲ್ಲಿ ಇಲ್ಲಿಯ ತನಕ ಎರಡು ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ. ಮೊದಲನೆಯದು ನಟ ಸೃಜನ್ ಲೋಕೇಶ್ ಅವರ ಜೊತೆ “ಸೆಲ್ಫಿ ಮಮ್ಮಿ ಗೂಗಲ್ ಡ್ಯಾಡಿ” ಚಿತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರದ ಚಿತ್ರೀಕರಣ ಮುಗಿದಿದ್ದು ಬಿಡುಗಡೆಗೆ ಸಿದ್ಧವಾಗಿದೆ ಎಂದು ತಿಳಿದು ಬಂದಿದೆ. ಲಾಕ್ ಡೌನ್ ನಿಂದಾಗಿ ಚಿತ್ರ ಇದೇ ವರ್ಷದ ಕೊನೆಗೆ ಬಿಡುಗಡೆ ಆಗಬಹುದು ಎಂದು ಹೇಳಲಾಗುತ್ತಿದೆ. ಈ ಚಿತ್ರದಲ್ಲಿ ಮೇಘನಾ ರಾಜ್ , ಸೃಜನ್ ಲೋಕೇಶ್, ಅಚ್ಯುತ್ ಕುಮಾರ್, ಗಿರಿಜಾ ಲೋಕೇಶ್, ದತ್ತಣ್ಣ ಅವರು ನಟಿಸಿದ್ದಾರೆ.
ಮೇಘನಾ ರಾಜ್ ಅವರು ಈ ವರ್ಷ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದಾರೆ ಅದು ಯಾವುದು ಎಂದರೆ “Buddhivanta 2”. ಹೌದು ರಿಯಲ್ ಸ್ಟಾರ್ ಉಪೇಂದ್ರ ಅವರ ಬುದ್ದಿವಂತ 2 ಚಿತ್ರದಲ್ಲಿ ಮೇಘನಾ ರಾಜ್ ಅವರು ಒಂದು ಮುಖ್ಯ ಪಾತ್ರದಲ್ಲಿ ನಟಿಸಬೇಕಾಗಿತ್ತು. ಲಾಕ್ ಡೌನ್ ಕಾರಣ, ಚಿರು ಅಗಲಿಕೆಯ ಕಾರಣ ಈ ಚಿತ್ರದ ಚಿತ್ರೀಕರಣವನ್ನು ಪೋಸ್ಟ್ ಫೋನ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಚಿತ್ರದಲ್ಲಿ ಉಪೇಂದ್ರ, ಮೇಘನಾ ರಾಜ್ ಹಾಗು ಸೋನಲ್ ಅವರು ನಟಿಸುತ್ತಿದ್ದಾರೆ.
ಸದ್ಯ ಲಾಕ್ ಡೌನ್ ನಿಂದಾಗಿ, ಯಾವುದೇ ಚಿತ್ರ ಮಂದಿರಗಳು ಓಪನ್ ಆಗಿಲ್ಲ! ಹಾಗು ಚಿತ್ರ ಮಂದಿರಗಳು ಓಪನ್ ಆದರೂ, ಜನರು ಥಿಯೇಟರ್ ಗಳಿಗೆ ಬರಲು ಹಿಂಜರಿಯುತ್ತಿದ್ದಾರೆ! ಮುಂದೆ ಏನಾಗುತ್ತೋ ದೇವರೇ ಬಲ್ಲ! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ ಎಲ್ಲಾ ಮಾಹಿತಿಗಾಗಿ ತಪ್ಪದೆ ತಮ್ಮ ಪೇಜನ್ನು ಲೈಕ್ ಮಾಡಿ ಹಾಗು ಇದನ್ನು ಶೇರ್ ಮಾಡಿರಿ.

Trending

To Top