Film News

ಲೂಸಿಫರ್ ಚಿತ್ರದಲ್ಲಿ ನಟಿಸಲಿದ್ದಾರೆ ಮೆಗಾಸ್ಟಾರ್

ಹೈದರಾಬಾದ್: ಮಲಯಾಳಂ ಭಾಷೆಯಲ್ಲಿ ಸೂಪರ್ ಹಿಟ್ ಆಗಿರುವ ಲೂಸಿಫರ್ ಚಿತ್ರವನ್ನು ತೆಲುಗು ಭಾಷೆಯಲ್ಲಿ ರಿಮೇಕ್ ಮಾಡಲಾಗುತ್ತಿದ್ದು, ಈ ಚಿತ್ರದಲ್ಲಿ ಮೆಗಾಸ್ಟಾರ್ ಚಿರಂಜೀವಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

ಮೆಗಾಸ್ಟಾರ್ ಚಿರು ಪ್ರಸ್ತುತ ಆಚಾರ್ಯ ಚಿತ್ರದ ಶೂಟಿಂಗ್ ನಲ್ಲಿ ಬ್ಯೂಸಿಯಾಗಿದ್ದು, ಕಾಜಲ್ ಅಗರ್ವಾಲ್ ಆಚಾರ್ಯ ಚಿತ್ರದಲ್ಲಿ ನಾಯಕಿಯಾಗಿ ನಟಿಸಲಿದ್ದಾರೆ. ಕಾಜಲ್ ಮದುವೆ ಬಳಿಕ ಚಿತ್ರೀಕರಣಕ್ಕೆ ಹಾಜರಾದ ಅವರನ್ನು ಮೆಗಾಸ್ಟಾರ್ ಸೇರಿದಂತೆ ಚಿತ್ರತಂಡ ಭರ್ಜರಿಯಾಗಿ ಸ್ವಾಗತಿಸಿದ್ದಾರೆ. ಜೊತೆಗೆ ಚಿತ್ರೀಕರಣ ಭರ್ಜರಿಯಾಗಿ ನಡೆಯುತ್ತಿರುವಾಗಲೇ ಮೆಗಾಸ್ಟಾರ್ ರವರ ಮತ್ತೊಂದು ಚಿತ್ರದ ಕುರಿತು ಚರ್ಚೆಯಾಗುತ್ತಿರುವುದು ಕೂತೂಹಲ ಕೆರಳಿಸಿದೆ.

ಇನ್ನೂ ಈ ಚಿತ್ರವನ್ನು ಯಾರು ನಿರ್ದೇಶಿಸಲಿದ್ದಾರೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದ್ದು, ಚಿರಂಜೀವಿ ಯವರ ೧೫೩ನೇ ಸಿನೆಮಾದ ನಿರ್ದೇಶಕ ಜವಾಬ್ದಾರಿಯನ್ನು ತಮಿಳು ಖ್ಯಾತ ನಿರ್ದೇಶಕ ಮೋಹನ್ ರಾಜ ನಿರ್ದೇಶಿಸಲಿದ್ದಾರೆ. ಈಗಾಗಲೇ ಮೋಹನ್ ರಾಜ್ ೨೦೦೧ ರಲ್ಲಿ ಹನುಮಾನ್ ಜಂಕ್ಷನ್ ಚಿತ್ರವನ್ನು ನಿರ್ದೇಶಿಸಿ, ಅಭಿಮಾನಿಗಳ ಮನ ಗೆದಿದ್ದರು. ಪ್ರಸ್ತುತ ಲೂಸಿಫರ್ ಚಿತ್ರವನ್ನು ಮೋಹನ್ ರಾಜ್ ನಿರ್ದೇಶಿಸಲಿದ್ದು, ಚಿರಂಜೀವಿ ಅಭಿಮಾನಿಗಳಿಗೆ ಸಂತಸ ತಂದಿದೆ. ಇದಕ್ಕೂ ಮೊದಲು ಮೋಹನ್ ರಾಜ್ ಮೆಗಾಸ್ಟಾರ್ ನಟನೆಯ ಹಿಟ್ಲರ್ ಚಲನಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿಯೂ ಕೆಲಸ ಮಾಡಿದ್ದರು ಎನ್ನಲಾಗಿದೆ.

ಈ ಹಿಂದೆ ಲೂಸಿಫರ್ ಚಿತ್ರವನ್ನು ವಿ.ವಿ.ವಿನಾಯಕ್, ಸಾಹೋ ಚಿತ್ರದ ನಿರ್ದೇಶಕ ಸುಜಿತ್ ನಿರ್ದೇಶಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಈ ಅವಕಾಶ ಮೋಹನ್ ರಾಜ್ ಪಾಲಾಗಿದೆ. ಇನ್ನೂ ಈ ಸಿನೆಮಾ ಸಂಕ್ರಾಂತಿ ಬಳಿಕ ಅಧಿಕೃತವಾಗಿ ಪ್ರಾರಂಭವಾಗಲಿದ್ದು, ಎನ್.ವಿ.ಆರ್ ಬ್ಯಾನರ್ ನಲ್ಲಿ, ರಾಮ್ ಚರಣ್ ಮಾಲೀಕತ್ವದ ಕೊನಿಡೆಲಾ ಪ್ರೋಡಕ್ಷನ್ ನಲ್ಲಿ ನಿರ್ಮಾಣವಾಗಲಿದೆ ಎನ್ನಲಾಗುತ್ತಿದೆ.

Trending

To Top