ರಾಮ್ ಚರಣ್, ಅಲ್ಲು ಅರ್ಜುನ್ ರನ್ನು ನೋಡಿದರೇ ತುಂಬಾ ಅಸೂಯೆಯಾಗುತ್ತೆ ಎಂದ ಮೆಗಾಸ್ಟಾರ್ ಚಿರು…!

ತೆಲುಗು ಸಿನಿರಂಗದ ಸ್ಟಾರ್‍ ನಟ ಮೆಗಾಸ್ಟಾರ್‍ ಚಿರಂಜೀವಿ ರಾಮ್ ಚರಣ್ ಹಾಗೂ ಐಕಾನ್ ಸ್ಟಾರ್‍ ಅಲ್ಲು ಅರ್ಜುನ್ ಕುರಿಂತೆ ಶಾಕಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ. ಅವರನ್ನು ನೋಡಿದರೇ ತುಂಬಾ ಅಸೂಯೆಯಾಗುತ್ತದೆ ಎಂದು ಹೇಳಿದ್ದು, ಚಿರು ರವರ ಹೇಳಿಕೆಗಳು ಇದೀಗ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಇನ್ನೂ ಚಿರಂಜೀವಿ ಈ ಹೇಳಿಕೆಗಳನ್ನು ನೀಡಲು ಕಾರಣವಾದರೂ ಏನು, ಚೆರಿ ಹಾಗೂ ಬನ್ನಿ ಯನ್ನು ನೋಡಿದರೇ ಅಸೂಯೆ ಯಾಕೆ ಎಂಬುದನ್ನು ತಿಳಿಯಲು ಮುಂದೆ ಓದಿ..

ಸುಮಾರು ನಲವತ್ತು ವರ್ಷಗಳಿಂದ ತೆಲುಗು ಸಿನಿರಂಗದಲ್ಲಿ ಸ್ಟಾರ್‍ ನಟನಾಗಿ ಖ್ಯಾತಿ ಪಡೆದುಕೊಂಡ ಚಿರಂಜೀವಿ ಸಿನೆಮಾಗಳ ಮೂಲಕ ತೆಲುಗು ಸಿನೆಮಾಗಳ ಖ್ಯಾತಿ ಬೆಳೆಸಲು ಅವಿರಥವಾಗಿ ಶ್ರಮಿಸುತ್ತಿದ್ದಾರೆ. ಇನ್ನೂ ಮೆಗಾ ಕುಟುಂಬದಿಂದಲೂ ಯಂಗ್ ಹಿರೋಗಳೂ ಸಹ ಚಿರಂಜೀವಿರವಂತೆ ಇಂಡಸ್ಟ್ರಿಯಲ್ಲಿ ದೊಡ್ಡ ಕ್ರೇಜ್ ಪಡೆದುಕೊಳ್ಳುತ್ತಿದ್ದಾರೆ. ಜೊತೆಗೆ ಸಿನಿರಂಗದ ಅನೇಕ ಯಂಗ್ ಟ್ಯಾಲೆಂಟ್ ಗಳನ್ನು ಸಹ ಪ್ರೋತ್ಸಾಹಿಸುವ ಕೆಲಸ ಚಿರು ನಿರಂತರವಾಗಿ ಮಾಡುತ್ತಲೇ ಇರುತ್ತಾರೆ. ಇನ್ನೂ ಚಿರುವರನ್ನು ಕಂಡರೇ ಕೇವಲ ಪ್ರೇಕ್ಷಕರಿಗೆ ಮಾತ್ರವಲ್ಲ ಸಿನಿರಂಗದ ಅನೇಕ ಪ್ರಮುಖರಿಗೂ ನಟ. ನಟಿಯರಿಗೂ ಸಹ ತುಂಬಾನೆ ಅಭಿಮಾನ. ದಿನೇ ದಿನೇ ಚಿರು ರವರ ಫಾಲೋಯಿಂಗ್ ಬೆಳೆಯುತ್ತಲೇ ಇದೆ. ಇನ್ನೂ ಇತ್ತೀಚಿಗೆ ಚಿರಂಜೀವಿ ಕಾರ್ಯಕ್ರಮವೊಂದರಲ್ಲಿ ಕೆಲವೊಂದು ಶಾಕಿಂಗ್ ಕಾಮೆಂಟ್ ಗಳನ್ನು ಮಾಡಿದ್ದಾರೆ.

ಇನ್ನೂ ಇತ್ತಿಚಿಗೆ ನಟ ಚಿರಂಜೀವಿ ಅನೇಕ ಕಾರ್ಯಕ್ರಮಗಳಲ್ಲಿ ಹಾಜರಾಗುತ್ತಿದ್ದಾರೆ. ಈ ಹಾದಿಯಲ್ಲೇ ಆತ ಇತ್ತಿಚಿಗೆ ಶ್ಯೂನಂ ನುಂಚಿ ಶಿಖರಾಗರಾಲಕು ಎಂಬ ತೆಲುಗು ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಕಾರ್ಯಕ್ರಮದಲ್ಲಿ ಚಿರಂಜೀವಿ ಮಾತನಾಡುತ್ತಾ,  ರಾಮ್ ಚರಣ್ ಹಾಗೂ ಅಲ್ಲು ಅರ್ಜುನ್ ರವರನ್ನು ನೋಡಿದ ಅಸೂಯೆಯಾಗುತ್ತದೆ ಎಂದಿದ್ದಾರೆ. ಬನ್ನಿ ಹಾಗೂ ರಾಮ್ ಚರಣ್ ರವರಿಂದ ನನಗೆ ಮನೆಯಲ್ಲಿ ನನ್ನ ಅಸ್ತಿತ್ವ ಕಡಿಮೆಯಾಗುತ್ತಿದೆ. ನಾನು ಎಷ್ಟೇ ದೊಡ್ಡ ನಟನಾಗಿ ಬೆಳೆದರೂ ಸಹ ಮನೆಯಲ್ಲಿನ ಮಕ್ಕಳೇ ನನ್ನನ್ನು ಗುರ್ತಿಸುವುದು ಕಡಿಮೆಯಾಗಿದೆ. ರಾಮ್ ಚರಣ್ RRR ಹಾಗೂ ಅಲ್ಲು ಅರ್ಜುನ್ ರವರ ಪುಷ್ಪಾ ಸಿನೆಮಾದ ಬಳಿಕ ಈಗಿನ ಮಕ್ಕಳು ಅವರನ್ನೇ ದೊಡ್ಡ ನಟರಂತೆ ಗುರ್ತಿಸುತ್ತಾರೆ. ಆ ಕಾರಣದಿಂದ ನನ್ನ ಕ್ರೇಜ್ ಕಡಿಮೆಯಾಗುತ್ತಿದೆ ಎಂದಿದ್ದಾರೆ.

ಈ ಕಾರಣದಿಂದಾಗಿ ನನ್ನ ಸೂಪರ್‍ ಹಿಟ್ ಸಿನೆಮಾಗಳ ಬಗ್ಗೆ ನಾನೇ ಹೊಗಳಿಕೊಳ್ಳುವ ಸ್ಥಿತಿ ಬಂದಿದೆ. ಇನ್ನೂ ಇತ್ತಿಚಿಗೆ ಬಿಡುಗಡೆಯಾದ ಗಾಡ್ ಫಾದರ್‍ ಸಿನೆಮಾ ನಮ್ಮ ಮನೆಯಲ್ಲಿ ಮಕ್ಕಳು ನಾಲ್ಕೈದು ಬಾರಿ ನೋಡಿದ್ದಾರೆ. ಸದ್ಯ ಸಿನಿರಂಗದಲ್ಲಿ ಟ್ರೆಂಡ್ ಬದಲಾಗುತ್ತಿದ್ದು, ಅಂದಿನ ಕಾಲದ ನಟರು ಎದುರಿಸಿದ್ದಂತಹ ಸವಾಲುಗಳೂ ಸಹ ಕಣ್ಮರೆಯಾಗಿದೆ ಎಂದಿದ್ದಾರೆ. ಇನ್ನೂ ಇಂತಹ ಸಮಯದಲ್ಲಿ ಶೂನ್ಯಂ ನುಂಡಿ ಶಿಖರಾಗರಾಲಕು ಎಂಬ ಪುಸ್ತಕಗಳು ಮತಷ್ಟು ಬರಬೇಕು ಎಂದ ಅವರು, ಸ್ಟಾರ್‍ ಆಗಿ ಫೇಮ್ ತೆಗೆದುಕೊಂಡರೂ ಸಹ ಸೆಲ್ಫ್ ಡಬ್ಬಾ ಹೊಡೆದುಕೊಳ್ಳಬೇಕು ಎಂದು ಫನ್ನಿಯಾಗಿ ಕಾಮೆಂಟ್ ಮಾಡಿದ್ದಾರೆ.

Previous articleಆ ವಿಧಿ ನನಗೆ ಮತ್ತೊಂದು ಸವಾಲ್ ಹಾಕಿದೆ ಎಂದ ಸಮಂತಾ, ಎಮೋಷನಲ್ ಹೇಳಿಕೆಗಳನ್ನು ಕೊಟ್ಟ ಸ್ಯಾಮ್….!
Next articleಮದುವೆಗೂ ಮುಂಚೆಯೇ ಆಲಿಯಾ ಭಟ್ ಗರ್ಭಿಣಿಯಾಗಿದ್ರಾ, ವೈರಲ್ ಆದ ಸುದ್ದಿ….!