ನಿರ್ದೇಶಕ ಹೇಳಿದ್ದನ್ನೇ ನಾವು ಮಾಡಿದ್ದೇವೆ ಎಂದು ಆಚಾರ್ಯ ಕುರಿತು ಶಾಕಿಂಗ್ ಹೇಳಿಕೆ ಕೊಟ್ಟ ಮೆಗಾಸ್ಟಾರ್…!

ಮೆಗಾಸ್ಟಾರ್‍ ಚಿರಂಜೀವಿ ಅಭಿನಯದ ಆಚಾರ್ಯ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇನ್ನೂ ಈ ಸಿನೆಮಾ ಸೋಲಲು ಮುಖ್ಯ ಕಾರಣ ನಿರ್ದೇಶಕ ಕೊರಟಾಲ ಶಿವ ಎಂದು ಅನೇಕ ಬಾರಿ ಮೆಗಾಸ್ಟಾರ್‍ ಚಿರಂಜೀವಿ ಹೇಳುತ್ತಲೇ ಇದ್ದಾರೆ. ಇದೀಗ ಮತ್ತೊಮ್ಮೆ ಚಿರಂಜೀವಿ ಆಚಾರ್ಯ ಸಿನೆಮಾ ಫೇಲ್ ಆಗಲು ನಿರ್ದೇಶಕನೇ ಕಾರಣ ಎಂದು ಕೊರಟಾಲ ಶಿವ ಬಗ್ಗೆ ವಿಮರ್ಶೆಗಳ ಸುರಿಮಳೆಗೈದಿದ್ದಾರೆ.

ತುಂಬಾ ನಿರೀಕ್ಷೆಯಿಂದ ಆಚಾರ್ಯ ಸಿನೆಮಾವನ್ನು ಕೊರಟಾಲ ಶಿವ ನಿರ್ದೇಶನ ಮಾಡಿದ್ದರು. ಆದರೆ ಆ ಸಿನೆಮಾ ಚಿರಂಜೀವಿ ಕೆರಿಯರ್‍ ನಲ್ಲಿ ಬಿಗೆಸ್ಟ್ ಡಿಜಾಸ್ಟರ್‍ ಸಿನೆಮಾ ಆಗಿ ಚಿರು ಇಮೇಜ್ ಅನ್ನು ಸಹ ಡ್ಯಾಮೇಜ್ ಮಾಡಿತ್ತು. ಈ ಕಾರಣದಿಂದ ಮೆಗಾಸ್ಟಾರ್‍ ಚಿರಂಜೀವಿ ಸಮಯ ದೊರೆತಾಗಲೆಲ್ಲಾ ನಿರ್ದೇಶಕ ಕೊರಟಾಲ ಶಿವ ಮೇಲೆ ವಿಮರ್ಶೆಗಳನ್ನು ಮಾಡುತ್ತಲೇ ಇದ್ದಾರೆ. ಈಗಾಗಲೇ ಅನೇಕ ಬಾರಿ ಆಚಾರ್ಯ ಸಿನೆಮಾ ಸೋಲಿನ ಬಗ್ಗೆ ಮಾತನಾಡಿದ್ದಾರೆ. ಆಚಾರ್ಯ ಸೋಲಲು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಶಿವಾ ಕೊರಾಟಲ ರವರದ್ದೇ ತಪ್ಪು ಎಂಬಂತೆ ಮಾತನಾಡುತ್ತಿದ್ದಾರೆ. ಇದೀಗ ಮತ್ತೊಮ್ಮೆ ಚಿರಂಜೀವಿ ಕೊರಟಾಲ ಶಿವ ಬಗ್ಗೆ ವಿಮರ್ಶೆ ಮಾಡಿದ್ದಾರೆ.

ಇನ್ನೂ ಈ ಕುರಿತು ಚಿರಂಜೀವಿ ಮಾತನಾಡುತ್ತಾ, ಆಚಾರ್ಯ ಸಿನೆಮಾ ಸೋಲು ನನ್ನ ಮೇಲೆ ಯಾವುದೇ ಪ್ರಭಾವ ತೋರುವುದಿಲ್ಲ. ಆಚಾರ್ಯ ಸಿನೆಮಾದ ನಿರ್ದೇಶಕ ಏನು ಹೇಳಿದರೇ ಅದನ್ನೇ ಮಾಡಿದ್ದೇವೆ. ನನಗೂ ಹಾಗೂ ಚರಣ್ ಮೇಲೂ ಸಹ ಆಚಾರ್ಯ ಸಿನೆಮಾ ಸೋಲು ಯಾವುದೇ ರೀತಿಯಲ್ಲೂ ಪ್ರಭಾವ ತೋರದು. ಒಂದು ಸಿನಿಮಾ ಫಲಿತಾಂಶ ತನ್ನ ಕೈಯಲ್ಲಿ ಇರುವುದಿಲ್ಲ ಎಂದು ಚರಣ್ ಗೂ ಸಹ ತಿಳಿದಿದೆ. ಆಚಾರ್ಯ ಸಿನೆಮಾದಲ್ಲಿ ನಾನು ದುಃಖ ಪಡುವ ವಿಷಯ ಒಂದಿದೆ. ಅದು ಏನು ಅಂದರೇ ನಾನು ಚರಣ್ ಜೊತೆಗೆ ಮಾಡಿದ ಮಲ್ಟಿಸ್ಟಾರರ್‍ ಆಗಿದ್ದು, ಭವಿಷ್ಯತ್ ನಲ್ಲಿ ನಾವು ಯಾವಾಗ ಜೊತೆಗೆ ಮಲ್ಟಿಸ್ಟಾರರ್‍ ಸಿನೆಮಾ ಮಾಡಿದರೂ ಸಹ ಆ ಥ್ರಿಲ್ ಅನ್ನೋದು ಮಿಸ್ ಆಗುವ ದುಃಖ ಇದೆ ಎಂದಿದ್ದಾರೆ.

ಇನ್ನೂ ಆಚಾರ್ಯ ಸೋಲಿನ ಸಂಪೂರ್ಣ ಜವಾಬ್ದಾರಿಯನ್ನು ನಿರ್ದೇಶಕ ಕೊರಟಾಲ ಶಿವ ಮೇಲೆ ಹಾಕಿದ್ದಾರೆ. ಇನ್ನೂ ಆಚಾರ್ಯ ಸಿನೆಮಾ ಸೋಲು ಕೊರಟಾಲ ಶಿವರವರಿಗೆ ತುಂಬಾ ಸಂಕಷ್ಟ ತಂದುಕೊಟ್ಟಿದೆ. ಆರ್ಥಿಕ ಲೇವಾದೇವಿಯಲ್ಲಿ ತಲೆಹಾಕಿದ ಕೊರಟಾಲ ಶಿವ ತನ್ನ ಆಸ್ತಿಯನ್ನು ಸಹ ಕಳೆದುಕೊಂಡಿದ್ದಾರೆ. ಸಿನೆಮಾ ಡಿಸ್ಟ್ರಿಬ್ಯೂಟರ್ಸ್ ಗಳಿಗೆ ನಷ್ಟವನ್ನು ತುಂಬಿಕೊಡುವ ಸಂದರ್ಭ ಒದಗಿಬಂತು. ಚಿರಂಜೀವಿ ಕೆರಿಯರ್‍ ನಲ್ಲಿ ಅನೇಕ ಸಿನೆಮಾಗಳು ಸೋಲನ್ನು ಕಂಡಿವೆ. ಆದರೆ ಆಚಾರ್ಯ ಸಿನೆಮಾ ವಿಚಾರದಲ್ಲಿ ಮಾತ್ರ ಚಿರಂಜೀವಿ ಕೊರಟಾಲ ಶಿವರವರನ್ನು ದೂಷಣೆ ಮಾಡುತ್ತಿರುವುದು ಏಕೆ ಎಂಬ ವಿಚಾರ ಮಾತ್ರ ತಿಳಿಯುತ್ತಿಲ್ಲ.

Previous articleಮಿಲ್ಕಿ ಟೂ ಮಚ್ ಹಾಟ್ ಗುರು, ನೆವರ್ ಬಿಫೋರ್ ಅನ್ನೋ ತರಹ ಎಕ್ಸ್ ಪೋಸ್ ಕೊಟ್ಟ ತಮನ್ನಾ….!
Next articleಮುದ್ದಾದ ಹೆಣ್ಣು ಮಗುವಿಗೆ ಜನ್ಮ ಕೊಟ್ಟ ಪ್ರೇರಣಾ ಸರ್ಜಾ, ಸರ್ಜಾ ಕುಟುಂಬಕ್ಕೆ ಮತ್ತೊಂದು ಕುಡಿ ಎಂಟ್ರಿ..!