ಗೋವಾ ಫಿಲಂ ಫೆಸ್ಟಿವಲ್ ನಲ್ಲಿ ಚಿರು ಇಂಟ್ರಸ್ಟಿಂಗ್ ಕಾಮೆಂಟ್ಸ್, ಸಿನಿರಂಗ ಬಿಟ್ಟು ಬಂದ ಬಳಿಕ ಅದರ ಬೆಲೆ ತಿಳಿಯಿತು ಎಂದ ನಟ…!

ತೆಲುಗು ಸಿನಿರಂಗದಲ್ಲಿ ಸ್ಟಾರ್‍ ನಟನಾಗಿ ಅನೇಕ ಸಿನೆಮಾಗಳ ಮೂಲಕ ಖ್ಯಾತಿ ಪಡೆದುಕೊಂಡಿರುವ ಮೆಗಾಸ್ಟಾರ್‍ ಚಿರಂಜೀವಿ ಇಂಡಿಯನ್ ಬೆಸ್ಟ್ ಫಿಲಂ ಪರ್ಸನಾಲಿಟಿ ಆಫ್ ದಿ ಇಯರ್‍ 2022 ಎಂಬ ಅವಾರ್ಡ್ ಪಡೆದುಕೊಂಡಿದ್ದಾರೆ. ಈ ಅವಾರ್ಡ್ ಪಡೆದುಕೊಂಡ ಮೆಗಾಸ್ಟಾರ್‍ ರವರಿಗೆ ಪ್ರಧಾನಿಗಳಿಂದ ಅನೇಕ ಸ್ಟಾರ್‍ ಗಳು ಶುಭಾಷಯ ಕೋರಿದ್ದರು. ಇದೀಗ ಸೋಮವಾರ ಈ ಪುರಸ್ಕಾರವನ್ನು ಪಡೆದುಕೊಂಡಿದ್ದು, ಪ್ರಶಸ್ತಿ ಪಡೆದುಕೊಂಡು ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ.

ನಟ ಮೆಗಾಸ್ಟಾರ್‍ ಚಿರಂಜೀವಿ ಕೇಂದ್ರ ಸರ್ಕಾರ ಇಂಡಿಯನ್ ಬೆಸ್ಟ್ ಫಿಲಂ ಪರ್ಸನಾಲಿಟಿ ಆಫ್ ದಿ ಇಯರ್‍ 2022 ಎಂಬ ಅವಾರ್ಡ್ ನೀಡಿ ಗೌರವಿಸಿದೆ. ಈ ಅವಾರ್ಡ್ ಅನ್ನು ಕೇಂದ್ರ ಮಂತ್ರಿ ಅನುರಾಗ್ ಠಾಕೂರ್‍ ಗೋವಾ ಫಿಲ್ಮಂ ಫೆಸ್ಟಿವಲ್ ಕಾರ್ಯಕ್ರಮ ಪ್ರಾರಂಭದಲ್ಲಿ ಘೋಷಣೆ ಮಾಡಿದ್ದರು. ಈ ಅವಾರ್ಡ್ ಪಡೆದುಕೊಂಡ ಮೆಗಾಸ್ಟಾರ್‍ ಚಿರಂಜೀವಿಯವರಿಗೆ ರಾಜಕೀಯ ಗಣ್ಯರು ಹಾಗೂ ಸಿನೆಮಾ ಸೆಲೆಬ್ರೆಟಿಗಳಿಂದಲೂ ಶುಭಾಷಯಗಳು ಹರಿದು ಬಂದಿತ್ತು. ಇದೀಗ ಚಿರು ರವರಿಗೆ ಈ ಅವಾರ್ಡ್ ಪ್ರಧಾನ ಮಾಡಲಾಗಿದೆ. ಅವಾರ್ಡ್ ಪಡೆದುಕೊಂಡ ಮೆಗಾಸ್ಟಾರ್‍ ಕೆಲವೊಂದು ಇಂಟ್ರಸ್ಟಿಂಗ್ ಕಾಮೆಂಟ್ ಗಳನ್ನು ಹಂಚಿಕೊಂಡಿದ್ದಾರೆ. ಸಿನೆಮಾ ರಂಗದ ಬೆಲೆ ಏನು ಎಂಬುದು ರಾಜಕೀಯಕ್ಕೆ ಹೋಗಿ ಬಂದ ಬಳಿಕ ತಿಳಿದು ಬಂದಿದೆ ಎಂದಿದ್ದಾರೆ.

ಇನ್ನೂ ಅವಾರ್ಡ್ ಪಡೆದುಕೊಂಡು ಮಾತನಾಡಿದ ಮೆಗಾಸ್ಟಾರ್‍ ಚಿರಂಜೀವಿ ಈ ಅವಾರ್ಡ್ ಗೆ ನನ್ನನ್ನು ಆಯ್ಕೆ ಮಾಡಿದಂತಹ ಸರ್ಕಾರಕ್ಕೆ, ಅನುರಾಗ್ ಠಾಕೂರ್‍ ಹಾಗೂ ಗೋವಾ ಫಿಲಂ ಫೆಸ್ಟಿವಲ್ ಗೆ ಧನ್ಯವಾದಗಳನ್ನು ತಿಳಿಸುತ್ತಾ, ಈ ಅವಾರ್ಡ್ ಪಡೆದುಕೊಳ್ಳುತ್ತಿರುವುದು ತುಂಭಾನೆ ಸಂತೋಷವಾಗಿದೆ. ಟ್ಯಾಲೆಂಟ್ ಇರುವಂತಹವರು ಮಾತ್ರ ಈ ರಂಗದಲ್ಲಿ ಬೆಳೆಯಲು ಸಾಧ್ಯ. ಟ್ಯಾಲೆಂಟ್ ಇಲ್ಲದೇ ಹೋದರೇ ತುಂಬಾನೆ ಕಷ್ಟ, ಪ್ರತಿಭೆಯಿದ್ದವರು ಯಾರೂ ಬೇಕಾದರೂ ಈ ರಂಗಕ್ಕೆ ಬರಬಹುದು ಅಂತಹವರಿಗೆ ನಾನು ಸದಾ ಬೆಂಬಲಿಸುತ್ತೇನೆ. ನನಗೆ ಸಿನಿರಂಗದ ಬೆಲೆ ಏನು ಎಂಬುದು ರಾಜಕೀಯಕ್ಕೆ ಹೋಗಿ ಬಂದ ಬಳಿಕ ತಿಳಿದು ಬಂತು. ತೆಲುಗು ಪ್ರೇಕ್ಷಕರು, ಅಭಿಮಾನಿಗಳು ಇಡೀ ಪ್ರಪಂಚದಲ್ಲಿ ಎಲ್ಲೇ ಇದ್ದರೂ ಸಹ ಅವರ ಪ್ರೀತಿಗೆ ನಾನು ಚಿರ ಋಣಿಯಾಗಿರುತ್ತೇನೆ. ಅಭಿಮಾನಿಗಳ ಪ್ರೀತಿ, ಅಭಿಮಾನದಿಂದಲೇ ನಾನು ಇಂತಹ ಅವಾರ್ಡ್‌ಗಳು ಖ್ಯಾತಿ ಪಡೆದುಕೊಳ್ಳಲು ಸಾಧ್ಯವಾಯಿತು ಎಂದಿದ್ದಾರೆ.

ಇನ್ನೂ ಕಾರ್ಯಕ್ರಮದಲ್ಲಿ ಚಿರಂಜೀವಿ ಬಗೆಗಿನ ಸ್ಪೇಷಲ್ ಎ.ವಿ ವಿಡಿಯೋ ಎಲ್ಲರನ್ನೂ ಆಕರ್ಷಣೆ ಮಾಡಿತ್ತು. 53ನೇ ಇಂಟರ್‍ ನ್ಯಾಷನಲ್ ಫಿಲಂ ಫೆಸ್ಟಿವಲ್ ಆಫ್ ಇಂಡಿಯಾ 2022 ಗೋವಾದಲ್ಲಿ ಅದ್ದೂರಿಯಾಗಿ ನಡೆಯುತ್ತಿದೆ. ನ.20 ರಿಂದ ಈ ಕಾರ್ಯಕ್ರಮ ಆರಂಭವಾಗಿದ್ದು, ಸೋಮವಾರ ಮುಕ್ತಾಯಗೊಂಡಿದೆ. ಈ ಸಮಾರೋಪ ಸಮಾರಂಭದಲ್ಲೇ ಚಿರಂಜೀವಿ ಯವರಿಗೆ ಇಂಡಿಯನ್ ಬೆಸ್ಟ್ ಫಿಲಂ ಪರ್ಸನಾಲಿಟಿ ಆಫ್ ದಿ ಇಯರ್‍ 2022 ಅವಾರ್ಡ್ ಪ್ರಧಾನ ಮಾಡಲಾಗಿದೆ.

Previous articleತಂದೆ ನೋಡಿದ ಹುಡುಗನನ್ನೇ ಮದುವೆಯಾಗಲಿದ್ದಾರಂತೆ ಸ್ಟಾರ್ ನಟಿ ಕೀರ್ತಿ ಸುರೇಶ್…!
Next articleಬಾಲಯ್ಯ ಅಭಿಮಾನಿಗಳಿಗೆ ಗುಡ್ ನ್ಯೂಸ್, ಶೀಘ್ರದಲ್ಲೇ ಅಖಂಡ-2 ಸಿನೆಮಾ, ಈ ಬಗ್ಗೆ ಚಿತ್ರತಂಡ ಹೇಳಿದ್ದೇನು?