Film News

ಚಿರು ಇಷ್ಟಪಟ್ಟ ಆ ಹುಡುಗಿ ಯಾರು? ಇಷ್ಟು ವರ್ಷಗಳ ಬಳಿಕ ರಿವೀಲ್ ಆಯ್ತು ಚಿರಂಜೀವಿ ಲವ್ ಫೈಯಲ್ಯೂರ್ ಸ್ಟೋರಿ…!

ದೇಶದ ಸಿನಿರಂಗದಲ್ಲಿ ದೊಡ್ಡ ಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿರುವ ನಟರಲ್ಲಿ ಟಾಪ್ ಸ್ಥಾನದಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಇರುತ್ತಾರೆ. ಇಂದಿಗೂ ಸಹ ಆತನ ಸಿನೆಮಾಗಳು ಬ್ಲಾಕ್ ಬ್ಲಸ್ಟರ್‍ ಹೊಡೆಯುತ್ತಿದೆ. ಆತ ಕಾಣಿಸಿಕೊಂಡ ಖೈದಿ ನಂ 150, ಸೈರಾ ನರಸಿಂಹರೆಡ್ಡಿ ಸಿನೆಮಾಗಳು ಬಾಕ್ಸ್  ಆಫೀಸ್ ನಲ್ಲಿ ಒಳ್ಳೆಯ ಕಲೆಕ್ಷನ್ ಮಾಡಿತ್ತು. ಸಿನೆಮಾಗಳಲ್ಲಿ ಅನೇಕ ವರ್ಷಗಳಿಂದ ಮುನ್ನುಗ್ಗುತ್ತಿರುವ ಚಿರಂಜೀವಿ ಹೊಸ ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ. ಸದ್ಯ ಟಾಲಿವುಡ್ ನಲ್ಲಿ ಈ ವಿಚಾರ ಹಾಟ್ ಟಾಪಿಕ್ ಆಗಿ ಹರಿದಾಡುತ್ತಿದೆ.

ನಟ ಚಿರಂಜೀವಿ ಬಾಲಿವುಡ್ ಮಿಸ್ಟರ್‍ ಫರ್ಪೆಕ್ಟ್ ಎಂದೇ ಕರೆಯಲಾಗುವ ಅಮೀರ್‍ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ ಸಿನೆಮಾವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಈ ಸಿನೆಮಾದಲ್ಲಿ ಪ್ರಮುಖ ಪಾತ್ರವೊಂದರಲ್ಲಿ ನಾಗಚೈತನ್ಯ ಸಹ ಕಾಣಿಸಿಕೊಳ್ಳಲಿದ್ದಾರೆ. ಅದ್ವೈತ್ ಚಂದನ್ ನಿರ್ದೇಶನದಲ್ಲಿ ಮೂಡಿಬಂದ ಈ ಸಿನೆಮಾ ಆಗಸ್ಟ್ 11 ರಂದು ಪ್ಯಾನ್ ಇಂಡಿಯಾ ಸಿನೆಮಾ ಆಗಿ ಬಿಡುಗಡೆಯಾಗಲಿದೆ. ಇನ್ನೂ ಈ ಸಿನೆಮಾದ ಪ್ರಮೋಷನ್ ಕೆಲಸಗಳೂ ಸಹ ಜೋರಾಗಿಯೇ ನಡೆಯುತ್ತಿದೆ. ಈ ಹಿಂದೆ ಎಂದೂ ಮಾಡದ ರೀತಿಯಲ್ಲಿ ಅಮೀರ್‍ ಖಾನ್ ಲಾಲ್ ಸಿಂಗ್ ಚಡ್ಡಾ ಸಿನೆಮಾವನ್ನು ಪ್ರಮೋಟ್ ಮಾಡುತ್ತಿದ್ದಾರೆ. ಇತ್ತೀಚಿಗಷ್ಟೆ ಮೆಗಾಸ್ಟಾರ್‍ ಚಿರಂಜೀವಿ ಅಮೀರ್‍ ಖಾನ್ ಜಂಟಿಯಾಗಿ ಪ್ರೆಸ್ ಮೀಟ್ ಮಾಡಿದ್ದರು. ಇದೀಗ ಸಿನೆಮಾ ಪ್ರಮೋಷನ್ ಭಾಗವಾಗಿಯೇ ನಾಗಾರ್ಜುನ್ ರವರು ಚಿರಂಜೀವಿ, ಅಮೀರ್‍ ಖಾನ್ ಹಾಗೂ ನಾಗಚೈತನ್ಯರವರನ್ನು  ತಮ್ಮದೇ ಆದ ಶೈಲಿಯಲ್ಲಿ ಸಂದರ್ಶನ ನಡೆಸಿದ್ದಾರೆ.

ಈ ಸಂದರ್ಶನಕ್ಕೆ ಸಂಬಂಧಿಸಿದಂತೆ ಪ್ರೊಮೋ ಸಹ ಬಿಡುಗಡೆಯಾಗಿದೆ. ಇನ್ನೂ ಪ್ರೊಮೋ ನೋಡಿದರೇ ಇಡೀ ಸಂದರ್ಶನ ತುಂಬಾ ಫನ್ನಿಯಾಗಿ ನಡೆದಿದೆ ಎನ್ನಬಹುದಾಗಿದೆ. ಅದರಲ್ಲೂ ಈ ಶೋ ನಲ್ಲಿ ಚಿರಂಜೀವಿ ಆಕಾಶದಲ್ಲಿ ನಕ್ಷತ್ರಗಳ ಸಮೂಹವನ್ನು ಗ್ಯಾಲಕ್ಸಿ ಎನ್ನುತ್ತಾರೆ, ನನ್ನ ಮುಂದೆ ಒಂದು ಗ್ಯಾಲಕ್ಸಿ ಇದೆ ಎಂದು ಅಮೀರ್‍ ಹಾಗೂ ಚೈತನ್ಯ ಬಗ್ಗೆ ಮಾತನಾಡಿದ್ದಾರೆ. ಇನ್ನೂ ಲಾಲ್ ಸಿಂಗ್ ಚಡ್ಡಾ ಸಿನೆಮಾದ ಬಗ್ಗೆ ಅನೇಕ ವಿಚಾರಗಳನ್ನು ಈ ಶೋ ನಲ್ಲಿ ರಿವೀಲ್ ಮಾಡಲಾಗಿದೆ. ಇನ್ನೂ ಸಿನೆಮಾದಲ್ಲಿನ ಲವ್ ಸ್ಟೋರಿ ಬಗ್ಗೆ ಮಾತನಾಡುವಾಗ ಚಿರಂಜೀವಿಯವರು ಶಾಕಿಂಗ್ ವಿಚಾರವೊಂದನ್ನು ಬಿಚ್ಚಿಟ್ಟಿದ್ದಾರೆ. ಸದ್ಯ ಈ ವಿಚಾರ ಸಿನಿರಂಗದಲ್ಲಿ ಚರ್ಚೆಗಳನ್ನು ಹುಟ್ಟುಹಾಕಿದೆ.

ಲಾಲ್ ಸಿಂಗ್ ಚಡ್ಡಾ ಸಿನೆಮಾದಲ್ಲಿನ ಲವ್ ಸ್ಟೋರಿ ಬಗ್ಗೆ ಮಾತನಾಡುವಾಗ ಅಮೀರ್‍ ಖಾನ್ ಚಿರಂಜೀವಿಯವರನ್ನು ಕೇಳುತ್ತಾ, ನೀವು ಮೊದಲ ಬಾರಿಗೆ ಯಾವಾಗ ಪ್ರೀತಿಗೆ ಬಿದ್ದಿದ್ದೀರಿ ಎಂದು ಕೇಳಿದ್ದಾರೆ. ಇದಕ್ಕೆ ಚಿರು ನಾಚಿಕೆಯಿಂದ ತಾನು ಮೊದಲಿಗೆ ಪ್ರೀತಿ ಮಾಡಿದ ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಚಿರು ತಾನು 7ನೇ ತರಗತಿಯಲ್ಲಿ ಓದುತ್ತಿರುವಾಗಲೇ ಪ್ರೀತಿಗೆ ಬಿದ್ದಿದ್ದರಂತೆ. ಮೊಗಲ್ತೂರು ಎಂಬ ಊರಿನಲ್ಲಿ ಚಿರು ಶಾಲೆಗೆ ಹೋಗುವಾಗ ಪ್ರೀತಿಗೆ ಬಿದ್ದಿದ್ದರಂತೆ. ಅಂದಿನ ಕಾಲದಲ್ಲಿ ಸೈಕಲ್ ತುಳಿಯುವುದು ಎಂದರೇ ಅದೇ ದೊಡ್ಡ ವಿಚಾರವಾಗಿದೆ. ಆಶ್ಚರ್ಯವಾಗಿಯೂ ಇತ್ತು. ಆ ಹುಡುಗಿ ಸಪೋರ್ಟ್ ನೀಡಿದರೇ ನಾನು ಸೈಕಲ್ ತುಳಿಯುತ್ತಿದ್ದೆ. ಆದರೆ ಆ ಹುಡುಗಿಯ ಕಡೆಗೆ ನಾನು ಹೆಚ್ಚಾಗಿ ನೋಡುತ್ತಿದ್ದೆ ಎಂದು ಚಿರಂಜೀವಿ ಮೊದಲನೇ ಪ್ರೇಮದ ಬಗ್ಗೆ ರಿವೀಲ್ ಮಾಡಿದ್ದಾರೆ.

Trending

To Top