ಹೈದರಾಬಾದ್: ಟಾಲಿವುಡ್ ನ ಮೇರು ನಟ ಮೆಗಾಸ್ಟಾರ್ ಚಿರಂಜೀವಿ ಸಿನಿರಂಗದಲ್ಲಿ ಅತ್ಯುತ್ತಮ ಸ್ಥಾನದಲ್ಲಿದ್ದಾರೆ. ಇದೀಗ ಇಂತಹ ನಟನೇ ಮತ್ತೋರ್ವ ನಟನಿಗೆ ದೇಶದ ನಂ.1 ನಟ ಎಂದು ಕಾಲಿವುಡ್ ನಟ ವಿಜಯ್ ಸೇತುಪತಿಯವರನ್ನು ಮನಸಾರೆ ಹೊಗಳಿದ್ದಾರೆ.
ಇತ್ತೀಚಿಗಷ್ಟೆ ನಡೆದ ಉಪ್ಪೆನ ಎಂಬ ಸಿನೆಮಾದ ಪ್ರೀ ರಿಲೀಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಟ ಚಿರಂಜೀವಿ, ನಟ ವಿಜಯ್ ಸೇತುಪತಿ ರವರನ್ನು ಮನಸಾರೆ ಹೊಗಳಿದ್ದಾರೆ. ವಿಜಯ್ ಸೇತುಪತಿ ತುಂಬಾ ಸರಳವಾಗಿ ಬದುಕುವ ವ್ಯಕ್ತಿಯಾಗಿದ್ದು, ಮಾನವೀಯತೆಯುಳ್ಳ ವ್ಯಕ್ತಿಯಾಗಿದ್ದಾರೆ. ಇಷ್ಟೊಂದು ಖ್ಯಾತಿ ಹಣವಿದ್ದರೂ ಕೂಡ ಸರಳವಾಗಿ ಬದುಕುವ ಅವರ ಜೀವನಶೈಲಿಯನ್ನು ಮೆಚ್ಚಬೇಕಾದುದೇ ಎಂದಿದ್ದಾರೆ. ಇನ್ನೂ ದೇಶದ ನಂ.1 ನಟ ವಿಜಯ್ ಸೇತುಪತಿ ಎಂದಿರುವ ಚಿರು, ತಮಿಳು ಭಾಷೆಯಲ್ಲಿ ಅನೇಕರು ಸಿನೆಮಾಗಳಲ್ಲಿ ನಾಯಕರಾಗಿ ನಟಿಸಿದ್ದಾರೆ. ಆದರೆ ವಿಜಯ್ ಸೇತುಪತಿ ಮಾತ್ರ ನಾಯಕನಾಗಿಯೇ ನಟಿಸಬೇಕೆಂಬ ಹಂಬಲ ಅವರಿಗಿಲ್ಲ. ಒಳ್ಳೆಯ ಪಾತ್ರಗಳಲ್ಲಿ ನಟಿಸಬೇಕೆಂಬ ಆಸೆ ಅವರಲ್ಲಿದೆ. ಆದರೆ ಎಂತಹಾ ಪಾತ್ರವಾದರೂ ಸರಿಯೇ, ಪಾತ್ರಕ್ಕೇ ಜೀವ ಕೊಟ್ಟು ಪೋಷಣೆ ಮಾಡುತ್ತಾರೆ ಎಂದು ಹೊಗಳಿದ್ದಾರೆ.
ಇನ್ನೂ ಚಿರು ಸೈರಾ ನರಸಿಂಹರೆಡ್ಡಿ ಸಿನೆಮಾದ ಶೂಟಿಂಗ್ ವೇಳೆ ನಡೆದ ಒಂದು ಪ್ರಸಂಗವನ್ನು ನೆನಪಿಸಿಕೊಂಡಿದ್ದಾರೆ. ಸೈರಾ ನರಸಿಂಹರೆಡ್ಡಿ ಸಿನೆಮಾ ಶೂಟಿಂಗ್ ಜಾರ್ಜಿಯಾ ದಲ್ಲಿ ನಡೆಯುತ್ತಿದ್ದಾಗ, ಈ ವೇಳೆ ಹೊಟೆಲ್ ಬಳಿ ಗದ್ದಲ ಆರಂಭವಾಗಿತ್ತು. ಕೆಳಗೇ ಹೋಗಿ ನೋಡಿದರೇ ವಿಜಯ್ ಸೇತುಪತಿ ಅಭಿಮಾನಿಗಳೊಂದಿಗೆ ಮಾತನಾಡುತ್ತಿದ್ದರು. ಅಲ್ಲಿಯೂ ಸಹ ವಿಜಯ್ ಸೇತುಪತಿಯವರಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ ಅಂತಹ ಪಾಪುಲರ್ ವ್ಯಕ್ತಿ ವಿಜಯ್ ಸೇತುಪತಿ ಎಂದಿದ್ದಾರೆ.
ಅಷ್ಟೇ ಅಲ್ಲದೇ ಮಾಸ್ಟರ್ ಸಿನೆಮಾ ಕುರಿತು ಕೂಡ ಮಾತನಾಡಿದ್ದು, ನಾನು ಇತ್ತೀಚಿಗಷ್ಟೆ ಮಾಸ್ಟರ್ ಸಿನೆಮಾ ವೀಕ್ಷಣೆ ಮಾಡಿದ್ದೇ, ಸಿನೆಮಾದಲ್ಲಿ ಭವಾನಿ ಪಾತ್ರದಲ್ಲಿ ನಟಿಸಿದ್ದ ವಿಜಯ್ ಸೇತುಪತಿ ಅವರ ನಟನೆ ನನಗೆ ತುಂಬಾ ಇಷ್ಟವಾಯಿತು ಎಂದಿದ್ದಾರೆ.
