ಮೆಗಾಸ್ಟಾರ್ ಚಿರಂಜೀವಿ ಗಾಡ್ ಫಾದರ್ ಫಸ್ಟ್ ಲುಕ್ ರಿವೀಲ್.. ನೆವರ್ ಬಿಪೋರ್ ಅನ್ನೊ ಲುಕ್ಸ್ ಫ್ಯಾನ್ ಹಬ್ಬ…!

ದೇಶದ ಸಿನಿರಂಗದಲ್ಲಿ ದೊಡ್ಡ ಸ್ಟಾರ್‍ ನಟರಲ್ಲಿ ಮೆಗಾಸ್ಟಾರ್‍ ಚಿರಂಜೀವಿ ಸಹ ಒಬ್ಬರಾಗಿದ್ದಾರೆ. ಅವರ ನಟನೆ, ಅದ್ಬುತವಾದ ಡ್ಯಾನ್ಸ್ ಗೆ ಅನೇಕರು ಅವರ ಅಭಿಮಾನಿಗಳಾಗಿದ್ದಾರೆ. ಸಿನಿರಂಗದಲ್ಲಿ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ ನಟರಲ್ಲಿ ಟಾಪ್ ಸ್ಥಾನದಲ್ಲಿ ಮೆಗಾಸ್ಟಾರ್‍ ಚಿರಂಜೀವಿಯವರಿದ್ದಾರೆ. ಇನ್ನೂ ವಯಸ್ಸಾದರೂ ಆತ ಯುವ ನಟರಿಗೂ ಕಡಿಮೆಯಿಲ್ಲ ಎಂಬಂತೆ ಇನ್ನೂ ಸಿನೆಮಾಗಳಲ್ಲಿ ಭರ್ಜರಿಯಾಗಿ ನೃತ್ಯ ಮಾಡುತ್ತಿದ್ದಾರೆ. ಇದೀಗ ಅವರು ಗಾಡ್ ಫಾದರ್‍ ಸಿನೆಮಾ ಮೂಲಕ ಅವರ ಅಭಿಮಾನಿಗಳನ್ನು ರಂಜಿಸಲಿದ್ದಾರೆ. ಸದ್ಯ ಸಿನೆಮಾದ ಫಸ್ಟ್ ಲುಕ್ ಪೋಸ್ಟರ್‍ ಬಿಡುಗಡೆ ಮಾಡಿದ್ದು, ಸಿನೆಮಾದ ಪೋಸ್ಟರ್‍ ನೆವರ್‍ ಬಿಫೊರ್‍ ಅನ್ನೋ ಹಾಗೆ ಇದೆ ಎಂದು ಅಭಿಮಾನಿಗಳು ಪ್ರಶಂಸೆ ಮಾಡುತ್ತಿದ್ದಾರೆ.

ಗಾಡ್ ಫಾದರ್‍ ಸಿನೆಮಾದಲ್ಲಿ ಚಿರು ಹೊಸ ಗೆಟಪ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಕೊಂಚ ಬಿಳಿಕೂದಲು, ಸೈಡ್ ಹಾಗೂ ಇಂಟೆನ್ಸ್ ಲುಕ್ ನೊಂದಿಗೆ ಚೇರ್‍ ಮೇಲೆ ಕುಳಿತುಕೊಂಡ ಪೋಸ್ಟರ್‍ ಎಲ್ಲರನ್ನೂ ಫಿದಾ ಮಾಡಿದೆ. ಜೊತೆಗೆ ಮೆಗಾಸ್ಟಾರ್‍ ಅವರ ಈ ಹೊಸ ಪೋಸ್ಟರ್‍ ಗೆ ಅಭಿಮಾನಿಗಳು ಸಹ ಹಬ್ಬ ಮಾಡಿಕೊಳ್ಳುತ್ತಿದ್ದಾರೆ. ಇನ್ನೂ ಮೆಗಾಸ್ಟಾರ್‍ ಈ ಹಿಂದೆ ಎಂದೂ ಕಾಣಿಸಿದ ಹೊಸ ಲುಕ್ಸ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಚಿರಂಜೀವಿಯವರು ಗಾಡ್ ಫಾದರ್‍ ನಲ್ಲಿ ಕಾಣಿಸಿಕೊಳ್ಳುವ ವಿಧಾನಕ್ಕೆ ಎಲ್ಲರನ್ನೂ ಆಕರ್ಷಣೆ ಮಾಡಿದ್ದಾರೆ. ಇನ್ನೂ ಅವರ ಲುಕ್ಸ್ ಫ್ಯಾನ್ಸ್ ಗೆ ಗೂಸ್ ಬಂಪ್ಸ್ ತರಿಸುವಂತಿದೆ ಎನ್ನಲಾಗುತ್ತಿದೆ. ಇನ್ನೂ ಈ ಸಿನೆಮಾದಲ್ಲಿ ಚಿರಂಜೀವಿ ರಾಜಕೀಯ ರಂಗವನ್ನು ಆಳುವಂತಹ ಮಾಫಿಯಾ ನಾಯನಕನಾಗಿ ಕಾಣಿಸಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಇನ್ನೂ ರಾಜಕೀಯ ವಲಯವನ್ನು ಆಳುವಂತಹ ಕಥೆಯಾದ್ದರಿಂದ ಈ ಸಿನೆಮಾಗೆ ಗಾಡ್ ಫಾದರ್‍ ಎಂಬ ಟೈಟಲ್ ಇಡಲಾಗಿದೆ ಎನ್ನಲಾಗುತ್ತಿದೆ. ಮೆಗಾಸ್ಟಾರ್‍ ಚಿರಂಜೀವಿ ಈ ಹಿಂದೆ ಅನೇಕ ಆಕ್ಷನ್ ಸಿನೆಮಾಗಳನ್ನು, ಕಮರ್ಷಿಯಲ್ ಸಿನೆಮಾಗಳನ್ನು ಸಹ ಮಾಡಿದ್ದಾರೆ. ಜೊತೆಗೆ ಫನ್, ಫ್ಯಾಮಿಲಿ ಎಂಟರ್‌ಟ್ರೈನರ್‍ ಸಿನೆಮಾಗಳು ಕೆಲವೊಂದು ಕಾಮಿಡಿ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡಿದ್ದಾರೆ. ಆದರೆ ಗಾಡ್ ಫಾದರ್‍ ನಂತಹ ಸಿನೆಮಾ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಈ ಸಿನೆಮಾದಲ್ಲಿ ಚಿರು ತಮ್ಮಲ್ಲಿನ ಹೊಸ ರೂಪವನ್ನು ತಾಳಲಿದ್ದಾರೆ ಎನ್ನಲಾಗುತ್ತಿದೆ. ಈ ಸಿನೆಮಾದಲ್ಲಿ ತುಂಬಾ ಪವರ್‍ ಪುಲ್ ಪಾತ್ರವನ್ನು ಪೋಷಣೆ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಗಾಡ್ ಫಾದರ್‍ ಮಲಯಾಳಂ ನಲ್ಲಿ ಮೋಹನಲಾಲ್ ನಟಿಸಿರುವ ಸಿನೆಮಾದ ರಿಮೇಕ್ ಆಗಿದ್ದು, ಮಲಯಾಳಂ ನಲ್ಲಿ ಸೂಪರ್‍ ಹಿಟ್ ಆಗಿದೆ.

ನಿರ್ದೇಶಕ ಮೋಹನರಾಜ್ ಸಾರಥ್ಯದಲ್ಲಿ ಮೂಡಿಬರಲಿರುವ ಗಾಡ್ ಫಾದರ್‍ ಸಿನೆಮಾದಲ್ಲಿ ಚಿರು ಜೊತೆಗೆ ಸತ್ಯದೇವ್, ಸಲ್ಮಾನ್ ಖಾನ್ ಸಹ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜೊತೆಗೆ ಲೇಡಿ ಸೂಪರ್‍ ಸ್ಟಾರ್‍ ಎಂದು ಕರೆಯುವ ನಯನತಾರಾ ಚಿರಂಜೀವಿ ತಂಗಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇನ್ನೂ ಈ ಸಿನೆಮಾದಲ್ಲಿ ಚಿರುಗೆ ಜೋಡಿ ಯಾರು ಇಲ್ಲ ಎಂದು ಹೇಳಲಾಗುತ್ತಿದೆ. ಸದ್ಯ ಮೆಗಾಸ್ಟಾರ್‍ ಅಭಿನಯಿಸುತ್ತಿರುವ ಗಾಡ್ ಫಾದರ್‍ ಫಸ್ಟ್ ಲುಕ್ ಪೋಸ್ಟರ್‍ ಇದೀಗ ಟ್ರೆಂಡಿಂಗ್ ಆಗಿದ್ದು, ಅಭಿಮಾನಿಗಳು ಶಿಳ್ಳೆ ಹೊಡೆದು ಕೇಕೆಗಳನ್ನು ಹಾಕುತ್ತಾ ಸಂಭ್ರಮಿಸಿದ್ದಾರೆ. ಇನ್ನೂ ಆಚಾರ್ಯ ಸಿನೆಮಾ ಬಾಕ್ಸ್ ಆಫೀಸ್ ನಲ್ಲಿ ಮಕಾಡೆ ಮಲಗಿತ್ತು. ಇದೀಗ ಗಾಡ್ ಫಾದರ್‍ ಬಾಕ್ಸ್ ಆಫೀಸ್ ಲೂಟಿ ಹೊಡೆಯುತ್ತಾ ಎಂಬುದನ್ನು ಕಾದು ನೋಡಬೇಕಿದೆ.

Previous articleಬಾಲಿವುಡ್ ನಟಿಯರಿಗೂ ಮೀರಿ ಬೋಲ್ಸ್ ಆಗಿ ಕಾಣಿಸಿಕೊಂಡ ಕಿರುತೆರೆ ನಟಿ…!
Next articleಬಾಲಿವುಡ್ ನಲ್ಲಿ ಲೀಡ್ ಹಿರೋಯಿನ್ ಆಗಿ ಮಾಡಲಿರುವ ಸಿನೆಮಾಗೆ ಟಾಪ್ ನಟಿ ಪ್ರೊಡ್ಯೂಸರ್, ಯಾರು ಗೊತ್ತಾ?