Film News

ನಿಹಾರಿಕಾಗೆ 2 ಕೋಟಿ ಬೆಲೆಬಾಳುವ ಗಿಫ್ಟ್ ನೀಡಿದ ಮೆಗಾಸ್ಟಾರ್!

ಹೈದರಾಬಾದ್: ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ತಮ್ಮ ಸಹೋದರ ನಾಗೇಂದ್ರ ಬಾಬು ಪುತ್ರಿ ನಿಹಾರಿಕಾ ಮದುವೆ ನಡೆಯುತ್ತಿದ್ದು, ಸುಮಾರು ೨ ಕೋಟಿ ಮೌಲ್ಯದ ಮದುವೆಯ ಗಿಫ್ಟ್ ನ್ನು ಮೆಗಾಸ್ಟಾರ್ ಚಿರಂಜೀವಿ ನಿಹಾರಿಕಾಗೆ ನೀಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.

ಡಿ.9ರ ಸಂಜೆ ರಾಜಸ್ಥಾನದ ಉದಯಪುರದಲ್ಲಿ ಉದ್ಯಮಿ ಚೈತನ್ಯ ಜೊನ್ನಲಗಡ್ಡ ರವರ ಜೊತೆ ನಿಹಾರಿಕಾ ಮದುವೆಯಾಗಲಿದ್ದಾರೆ. ಮೆಗಾಸ್ಟಾರ್ ಕುಟುಂಬದ ಏಕೈಕ ನಟಿ ಎಂದೇ ಖ್ಯಾತಿ ಪಡೆದಿರುವ ನಿಹಾರಿಕಾ ರವರಿಗೆ ಚಿರಂಜೀವಿ ೨ ಕೋಟಿ ಬೆಲೆಬಾಳುವ ಉಡುಗೊರೆ ಕೊಟ್ಟಿದ್ದಾರಂತೆ. ೨ ಕೋಟಿ ನೆಕ್ಲೇಸ್ ನೀಡುವ ಮೂಲಕ ತಮ್ಮ ಪ್ರೀತಿಯ ಮಗಳಿಗೆ ಶುಭಾಷಯಗಳನ್ನು ಕೋರಿದ್ದಾರೆ.

ಇನ್ನೂ ಚಿರುಗೆ ನಿಹಾರಿಕಾ ಅಂದರೇ ಬಲು ಪ್ರೀತಿ ಎನ್ನಲಾಗುತ್ತಿದ್ದು, ನಿಹಾರಿಕಾ ರವರಿಗೂ ಕೂಡ ಚಿರು ಅಂದರೇ ಪಂಚಪ್ರಾಣವಂತೆ, ಈಗಾಗಲೇ ಕೆಲವು ಹಿಂದಿನ ಸಂದರ್ಶನಗಳಲ್ಲಿ ನನಗೆ ದೊಡ್ಡಪ್ಪ ಅಂದರೇ ಪಂಚಪ್ರಾಣ, ನಾನು ಅವರನ್ನು ಅಪ್ಪ ಅಂತಲೇ ಕರೆಯುವುದು ಎಂದು ಹೇಳಿಕೊಂಡಿದ್ದರು.

ಮೆಗಾಸ್ಟಾರ್ ಚಿರಂಜೀವಿ ನವಜೋಡಿಗೆ ಭಾವುಕವಾಗಿ ಶುಭ ಹಾರೈಸಿದ್ದಾರೆ. ನನ್ನ ತೋಳುಗಳಲ್ಲಿ ಆಡಿ ಬೆಳೆದ ನಿಹಾರಿಕಾಳನ್ನು, ಚೈತನ್ಯನ ಕೈಗೆ ಒಪ್ಪಿಸುತ್ತಿದ್ದೇನೆ, ದೇವರ ಆರ್ಶಿವಾದ ನಿಮ್ಮ ಮೇಲಿರಲಿ, ನವಜೋಡಿಗೆ ಶುಭಾಷಯಗಳು ಎಂದು ಟ್ವಿಟರ್ ನಲ್ಲಿ ಭಾವುಕವಾಗಿ ಶುಭಾಷಯಗಳನ್ನು ತಿಳಿಸಿದ್ದಾರೆ. ಮೆಗಾಸ್ಟಾರ್ ಕುಟಂಬವೆಲ್ಲಾ ನಿಹಾರಿಕಾ ಮದುವೆ ಹಬ್ಬದಲ್ಲಿ ಸಂಭ್ರಮಿಸುತ್ತಿದ್ದಾರೆ.

Trending

To Top