ಅನ್ ಲಿಮಿಟೆಡ್ ಆಗಿ ವೆಕೇಷನ್ ಎಂಜಾಯ್ ಮಾಡುತ್ತಿರುವ ಮೆಗಾ ಡಾಟರ್ ನಿಹಾರಿಕಾ, ವೈರಲ್ ಆದ ಪೊಟೋಸ್…!

ಟಾಲಿವುಡ್ ನ ಮೆಗಾ ಕುಟುಂಬದ ಏಕೈಕ ನಟಿಯಾಗಿರುವ ನಿಹಾರಿಕಾ ಕೊಣಿದೆಲಾ ಟರ್ಕಿಯ ಪ್ರವಾಸ ಕೈಗೊಂಡಿದ್ದು. ವೆಕೇಷನ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೆಲವು ದಿನಗಳ ಹಿಂದೆಯಷ್ಟೆ ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಾಟ್ ಪೊಟೋಶೂಟ್ ಮೂಲಕ ಸದ್ದು ಮಾಡಿದ್ದರು. ಇದೀಗ ಆಕೆ ಟರ್ಕಿಯ ಸುಂದರವಾದ ಸ್ಥಳಗಳಲ್ಲಿ ಎಂಜಾಯ್ ಮಾಡುತ್ತಿರುವ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ನಟಿ ನಿಹಾರಿಕಾ ಇತ್ತೀಚಿಕೆ ನೆವರ್‍ ಬಿಪೋರ್‍ ಅನ್ನೋತರಹ ಹಾಟ್ ಪೊಟೋಗಳನ್ನು ಶೇರ್‍ ಮಾಡಿದ್ದರು. ಆಕೆಯ ಈ ಹಾಟ್ ಪೊಟೋಗಳನ್ನು ನೋಡಿ ಮೆಗಾ ಅಭಿಮಾನಿಗಳೂ ಸಹ ಶಾಕ್ ಆಗಿದ್ದರು. ಈ ಪೊಟೋಗಳಲ್ಲಿ ಆಕೆ ತನ್ನ ಎದೆಯ ಸೌಂದರ್ಯವನ್ನು ಪ್ರದರ್ಶನ ಮಾಡಿದ್ದು, ಪೊಟೋಗಳೂ ಸಹ ವೈರಲ್ ಆಗಿತ್ತು. ಆಂಕರ್‍ ಆಗಿ ಕೆರಿಯರ್‍ ಪ್ರಾರಂಭಿಸಿದ ನಿಹಾರಿಕಾ ಕಿರುತೆರೆಯಲ್ಲಿ ಕೆಲವೊಂದು ಶೋಗಳನ್ನು ನಡೆಸಿಕೊಟ್ಟರು. ಬಳಿಕ ಒಕ ಮನಸು ಎಂಬ ಸಿನೆಮಾದ ಮೂಲಕ ನಟಿಯಾದರು. ಆದರೆ ಈ ಸಿನೆಮಾ ಮಾತ್ರ ಆಕೆಯ ನಿರೀಕ್ಷೆಯನ್ನು ಹುಸಿ ಮಾಡಿತ್ತು. ಬಳಿಕ ಆಕೆ ಹ್ಯಾಪಿ ವೆಡ್ಡಿಂಗ್, ಸೂರ್ಯಕಾಂತಂ ಎಂಬ ಸಿನೆಮಾಗಳಲ್ಲೂ ಸಹ ಕಾಣಿಸಿಕೊಂಡರು. ಆದರೆ ಆಕೆಗೆ ಈ ಸಿನೆಮಾಗಳೂ ಸಹ ನಿರಾಸೆಯನ್ನು ತಂದುಕೊಟ್ಟಿತ್ತು. ಈ ಕಾರಣದಿಂದ ಆಕೆ ಸಿನೆಮಾಗಳಿಂದ ದೂರವೇ ಉಳಿದರು. ಇದೀಗ ಮತ್ತೆ ಸಿನಿರಂಗದತ್ತ ಕಮ್ ಬ್ಯಾಕ್ ಮಾಡಿದ್ದು, ವೆಬ್ ಸಿರೀಸ್ ಗಳತ್ತ ಮುಖ ಮಾಡಿದ್ದಾರೆ.

ಸದ್ಯ ನಿಹಾರಿಕಾ ವೆಕೇಷನ್ ನಲ್ಲಿದ್ದು ಟರ್ಕಿಯ ಸುಂದರ ತಾಣಗಳಲ್ಲಿ ವಿಹರಿಸುತ್ತಿದ್ದಾರೆ. ಟರ್ಕಿಯಲ್ಲಿ ಜೆರೋಮ್, ಕಪ್ಪಕೊಡಿಯಾ ಎಂಬ ಪ್ರಾಂತ್ಯಗಳಲ್ಲಿ ಸುತ್ತಾಡುತ್ತಾ ಹಲ್ ಚಲ್ ಮಾಡುತ್ತಿದ್ದಾರೆ. ಅದರಲ್ಲೂ ಆಕೆ ಪ್ಯಾರಾಚೂಟ್ ನಲ್ಲಿ ಪಯಣಿಸುತ್ತಾ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಇನ್ನೂ ಪ್ಯಾರಾಚೂಟ್ ನಲ್ಲಿ ಎಂಜಾಯ್ ಮಾಡುವ ಸಂತಸದ ಕ್ಷಣಗಳನ್ನು ಕ್ಯಾಮೆರಾ ಕಣ್ಣುಗಳಲ್ಲಿ ಚಿತ್ರೀಕರಿಸಿದ್ದು, ಆ ಪೊಟೋಗಳನ್ನು ಆಕೆ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇನ್ನೂ ಆಕೆ ಡೆನಿಮ್ ಜಾಕೆಟ್ ಧರಿಸಿ ಪೋಸ್ ಕೊಟ್ಟಿದ್ದಾರೆ. ಸದ್ಯ ಆಕೆಯ ಈ ಪೊಟೋಗಳು ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.

ಇನ್ನೂ ಸಿನೆಮಾಗಳಲ್ಲಿ ಸಕ್ಸಸ್ ಕಂಡುಕೊಳ್ಳದ ಹಿನ್ನೆಲೆಯಲ್ಲಿ ನಟಿ ನಿಹಾರಿಕಾ ಮದುವೆಯಾದರು. ಮದುವೆಯಾದ ಬಳಿಕ ಸಿನೆಮಾಗಳಿಂದ ದೂರವುಳಿದರು. ಇದೀಗ ಆಕೆ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪಿಂಕ್ ಎಲಿಫೆಂಟಾ ಪಿಕ್ಚರ್ಸ್ ಎಂಬ ನಿರ್ಮಾಣ ಸಂಸ್ಥೆಯ ಮೂಲಕ ಆಕೆ ವೆಬ್ ಸೀರಿಸ್ ಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಜೊತೆಗೆ ಆಗಾಗ ಬೋಲ್ಟ್ ಪೊಟೋಗಳ ಮೂಲಕ ಸಹ ಸೋಷಿಯಲ್ ಮಿಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ.

Previous articleಸಿನೆಮಾಗಳನ್ನು ಆಯ್ಕೆ ಮಾಡುವ ಬಗ್ಗೆ ಇಂಟ್ರಸ್ಟಿಂಗ್ ವಿಚಾರ ರಿವೀಲ್ ಮಾಡಿದ ನ್ಯಾಚುರಲ್ ಬ್ಯೂಟಿ ಸಾಯಿ ಪಲ್ಲವಿ..!
Next articleಎರಡನೇ ಮದುವೆಯ ಚಿಂತೆಯಲ್ಲಿ ಬಿದ್ದ ಸ್ಟಾರ್ ಆಂಕರ್ ಅನಸೂಯ, ಕಾರಣ ಏನು ಗೊತ್ತಾ?