Film News

ವಿದೇಶದಲ್ಲೂ ಮಾಸ್ಟರ್ ಆರ್ಭಟ: ದಾಖಲೆಯ ಗಳಿಕೆ

ಚೆನೈ: ಕಾಲಿವುಡ್‌ನ ಬಿಗ್ ಬಜೆಟ್ ಸಿನೆಮಾ ಮಾಸ್ಟರ್ ಚಿತ್ರ ದೇಶ ಸೇರಿದಂತೆ ವಿದೇಶದಲ್ಲೂ ಬಿಡುಗಡೆಯಾಗಿದ್ದು, ವಿದೇಶದಲ್ಲಿ ದಿನೇ ದಿನೇ ತನ್ನ ಗಳಿಕೆಯನ್ನು ಹೆಚ್ಚಿಸಿಕೊಳ್ಳುತ್ತಿದೆ. ಬಿಡುಗಡೆಯಾದ ಮೂರು ದಿನದಲ್ಲಿ ಆಸ್ಟ್ರೇಲಿಯಾ ದೇಶದಲ್ಲಿ ಸುಮಾರು ೩.೬೦ ಕೋಟಿಗೂ ಹೆಚ್ಚು ಆದಾಯ ಗಳಿಸಿದೆ ಎನ್ನಲಾಗಿದೆ.

ಕೊರೋನಾ ಲಾಕ್ ಡೌನ್ ನಿಮಿತ್ತ ಚಿತ್ರಮಂದಿರಗಳಲ್ಲಿ ಶೇ.5೦ ರಷ್ಟು ಆಸನಗಳಿಗೆ ಮಾತ್ರ ಅವಕಾಶ ನೀಡಿದೆ ಸರ್ಕಾರ. ಈ ಹಿನ್ನೆಲೆಯಲ್ಲಿ ಬಿಗ್ ಬಜೆಟ್ ಚಿತ್ರಗಳನ್ನು ರಿಲೀಸ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ ನಿರ್ಮಾಪಕರು. ಆದರೂ ಕೂಡ ಧೈರ್ಯ ಮಾಡಿ ಮಾಸ್ಟರ್ ಚಿತ್ರ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದ್ದು, ನೀರಿಕ್ಷೆಗಿಂತ ಹೆಚ್ಚಿನ ಮಟ್ಟದಲ್ಲೇ ಆದಾಯ ಗಳಿಸುತ್ತಿದೆ. ಇನ್ನೂ ವಿದೇಶದಲ್ಲೂ ಸಹ ಮಾಸ್ಟರ್ ಹವಾ ಹೆಚ್ಚಿದ್ದು, ಅಲ್ಲಿಯೂ ಕೂಡ ದಾಖಲೆಯ ಮಟ್ಟದಲ್ಲಿ ಆದಾಯ ಗಳಿಸುತ್ತಿದೆ.

ಕಾಲಿವುಡ್ ಸ್ಟಾರ್ ಥಳಪತಿ ವಿಜಯ್ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಅಮೇರಿಕಾ, ನ್ಯೂಜಿಲೆಂಡ್, ಅಮೇರಿಕಾ ಸೇರಿದಂತೆ ಇನ್ನೂ ಅನೇಕ ದೇಶಗಳಲ್ಲಿ ಮಾಸ್ಟರ್ ಚಿತ್ರ ಬಿಡುಗಡೆಯಾಗಿದೆ. ಸುಮಾರು ೨೭ ಲಕ್ಷಕ್ಕೂ ಹೆಚ್ಚ ಗಳಿಕೆಯನ್ನು ನ್ಯೂಜಿಲೆಂಡ್ ನಲ್ಲಿ ಗಳಿಸಿದೆ. ಇನ್ನೂ ಭಾರತದಲ್ಲಿಯೂ ಸಹ ೪೦ ಕೋಟಿಗೂ ಹೆಚ್ಚು ಹಣ ಗಳಿಸಿದೆ. ಒಂದೇ ದಿನದಲ್ಲಿ ತಮಿಳುನಾಡಿನಲ್ಲಿ ಸುಮಾರು ೨೭ ಕೋಟಿ ಗಳಿಕೆ ಕಂಡಿದೆ, ಜೊತೆಗೆ ಕರ್ನಾಟಕ, ಕೇರಳ, ತೆಲಂಗಾಣ, ಆಂಧ್ರಪ್ರದೇಶದಲ್ಲೂ ದಾಖಲೆಯ ಮಟ್ಟದಲ್ಲಿ ಆದಾಯ ಗಳಿಸುತ್ತಿದೆ.

ಇನ್ನೂ ಬಿಡುಗಡೆಯ ದಿನವೇ ಚಿತ್ರದ ಪೈರಸಿ ಕಾಫಿ ಅಂತರ್ಜಾಲದಲ್ಲಿ ಬಿಡುಗಡೆಯಾಗಿದ್ದರೂ ಕೂಡ ದಾಖಲೆಯ ಮಟ್ಟದಲ್ಲಿ ಆದಾಯ ಗಳಿಸುತ್ತಿರುವುದು ವಿಶೇಷವಾಗಿದೆ. ಅಷ್ಟೇ ಅಲ್ಲದೇ ಚಿತ್ರಮಂದಿರಗಳಲ್ಲಿ ಶೇ.100 ರಷ್ಟು ಆಸನಗಳ ಭರ್ತಿಗೆ ಅವಕಾಶ ಕೊಟ್ಟರೇ ಇನಷ್ಟು ಆದಾಯ ಗಳಿಸಬಹುದಾಗಿತ್ತು ಎಂದು ಹೇಳಲಾಗುತ್ತಿದೆ.

Trending

To Top