Saturday, May 21, 2022
HomeKannada Cinema Newsಮಾರ್ಟಿನ್ ಸಿನಿಮಾ ಫಸ್ಟ್ ಲುಕ್ ಗೆ ಪ್ರೇಕ್ಷಕರು ಫಿದಾ!

ಮಾರ್ಟಿನ್ ಸಿನಿಮಾ ಫಸ್ಟ್ ಲುಕ್ ಗೆ ಪ್ರೇಕ್ಷಕರು ಫಿದಾ!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಮೊದಲ ಬಾರಿಗೆ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟ ಸಿನಿಮಾ ಅದ್ಧೂರಿ. ಈ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಧ್ರುವ ಸರ್ಜಾ ಅವರಂತಹ ಪ್ರತಿಭೆಯನ್ನು ಪರಿಚಯಿಸಿದ ಕ್ರೆಡಿಟ್ ನಿರ್ದೇಶಕ ಎಪಿ ಅರ್ಜುನ್ ಅವರಿಗೆ ಸೇರುತ್ತದೆ.

ಅದ್ಧೂರಿ ನಂತರ ಇವರಿಬ್ಬರ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ಬರಬೇಕು ಎನ್ನುವುದು ಎಲ್ಲಾ ಅಭಿಮಾನಿಗಳ ಆಸೆ ಆಗಿತ್ತು. ಇದೀಗ ಧ್ರುವ ಸರ್ಜಾ ಅಭಿಮಾನಿಗಳ ಆಸೆ ಈಡೇರಿದೆ. ಧ್ರುವ ಸರ್ಜಾ ಮತ್ತು ಎ ಪಿ ಅರ್ಜುನ್ ಕಾಂಬಿನೇಷನ್ ನ ಹೊಸ ಸಿನಿಮಾ ಸೆಟ್ಟೇರಿದ್ದು . ಈ ಸಿನಿಮಾಗೆ ಮಾರ್ಟಿನ್ ಎಂದು ಶೀರ್ಷಿಕೆ ಇಡಲಾಗಿದೆ.

ಮಾರ್ಟಿನ್ ಸಿನಿಮಾದಲ್ಲಿ ಅದ್ಧೂರಿ ಸಿನಿಮಾದಲ್ಲಿ ಎಲ್ಲಾ ತಂತ್ರಜ್ಞರು ಕೆಲಸ ಮಾಡಲಿದ್ದಾರೆ ಎನ್ನಲಾಗುತ್ತಿದೆ. ಇಂದು ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಾರ್ಟಿನ್ ಸಿನಿಮಾದ ಮುಹೂರ್ತ ನಡೆದಿದ್ದು ಜೊತೆಗೆ ಮಾರ್ಟಿನ್ ಸಿನಿಮಾದ ಫಸ್ಟ್ ಲುಕ್ ಟೀಸರ್ ಸಹ ಬಿಡುಗಡೆ ಆಗಿದೆ.

ಮಾರ್ಟಿನ್ ಸಿನಿಮಾ ಕನ್ನಡ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿ ತೆರೆಕಾಣಲಿದೆ ಎಂದು ನಟ ಧ್ರುವ ಸರ್ಜಾ ಮತ್ತು ನಿರ್ದೇಶಕ ಎ ಪಿ ಅರ್ಜುನ್ ತಿಳಿಸಿದ್ದಾರೆ. ಹಾಗೂ ಮಾರ್ಟಿನ್ ಸಿನಿಮಾ ಮುಹೂರ್ತಕ್ಕೆ ಕ್ರೇಜಿಸ್ಟಾರ್ ವಿ.ರವಿಚಂದ್ರನ್ ಅತಿಥಿಯಾಗಿ ಬಂದಿದ್ದರು.

- Advertisement -

You May Like

More