ಕ್ಷುಲಕ ಕಾರಣಕ್ಕೆ ಮುರಿದು ಬಿದ್ದ ಮದುವೆ, ನಿಶ್ಚಿತಾರ್ಥದ ದಿನ ಆ ಕಾರಣಕ್ಕಾಗಿ ಮುರಿದು ಬಿದ್ದ ಮದುವೆ, ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…!

ಅನೇಕ ಮದುವೆಗಳು ಅನೇಕ ಕಾರಣಗಳಿಂದ ಮುರಿದು ಬೀಳುತ್ತಿರುತ್ತದೆ. ವರದಕ್ಷಿಣೆ ಸೇರಿದಂತೆ ಕೆಲವೊಂದು ದೊಡ್ಡ ದೊಡ್ಡ ವಿಚಾರಗಳಿಂದ ಮದುವೆಗಳು ಮುರಿದು ಬೀಳುತ್ತಿರುತ್ತದೆ. ಆದರೆ ಇಲ್ಲೊಂದು ಮದುವೆ ಕ್ಷುಲಕ ಕಾರಣದಿಂದ ಮದುವೆ ಮುರಿದು ಬಿದ್ದಿದೆ. ನಿಶ್ಚಿತಾರ್ಥದ ದಿನವೇ…

ಅನೇಕ ಮದುವೆಗಳು ಅನೇಕ ಕಾರಣಗಳಿಂದ ಮುರಿದು ಬೀಳುತ್ತಿರುತ್ತದೆ. ವರದಕ್ಷಿಣೆ ಸೇರಿದಂತೆ ಕೆಲವೊಂದು ದೊಡ್ಡ ದೊಡ್ಡ ವಿಚಾರಗಳಿಂದ ಮದುವೆಗಳು ಮುರಿದು ಬೀಳುತ್ತಿರುತ್ತದೆ. ಆದರೆ ಇಲ್ಲೊಂದು ಮದುವೆ ಕ್ಷುಲಕ ಕಾರಣದಿಂದ ಮದುವೆ ಮುರಿದು ಬಿದ್ದಿದೆ. ನಿಶ್ಚಿತಾರ್ಥದ ದಿನವೇ ಮದುವೆ ಮುರಿದು ಬಿದ್ದಿರುವ ಘಟನೆ ನಡೆದಿದೆ. ಮದುವೆ ಮುರಿದು ಬೀಳಲು ಕಾರಣ ಏನು ಎಂಬುದನ್ನು ತಿಳಿದರೇ ನೀವು ಸಹ ಶಾಕ್ ಆಗ್ತೀರಾ. ಅಷ್ಟಕ್ಕೂ ಆಗಿದ್ದಾದರೂ ಏನು ಎಂಬ ವಿಚಾರಕ್ಕೆ ಬಂದರೇ,

ತೆಲಂಗಾಣದ ಜಿಗಿತ್ಯಾಲ ಜಿಲ್ಲೆ ಮೇಟಪಲ್ಲಿ ಎಂಬಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಮೇಟಪಲ್ಲಿ ತಾಲೂಕಿನ ಹುಡುಗನಿಗೆ ನಿಜಾಮಾಬಾದ್ ಜಿಲ್ಲೆಯ ಹುಡುಗಿಯೊಂದಿಗೆ ನಿಶ್ಷಿತಾರ್ಥ ನಡೆದಿದೆ. ಈ ವೇಳೆ ಎಲ್ಲಾ ಮಾತುಕತೆ ನಡೆದಿದ್ದು ಮದುವೆಯ ದಿನಾಂಕ ನಿಗಧಿಪಡಿಸಬೇಕಾಗಿತ್ತು ಅಷ್ಟೆ. ಇನ್ನೂ ನಿಶ್ಚಿತಾರ್ಥದ ಬಳಿಕ ವಧು ಕುಟುಂಬ ವರನ ಕುಟುಂಬ ಹಾಗೂ ಅವರ ಸಂಬಂಧಿಕರಿಗೆ ಮಾಂಸದ ಔತಣ ಕೂಟ ಏರ್ಪಡಿಸಿದ್ದರಂತೆ. ಈ ಸಮಯದಲ್ಲಿ ನಡೆದಂತಹ ಘಟನೆಯಿಂದಲೇ ಮದುವೆ ಮುರಿದು ಬಿದ್ದಿದೆ. ಅಷ್ಟಕ್ಕೂ ಮದುವೆ ಮುರಿದು ಬೀಳಲು ಕಾರಣ ನಲ್ಲಿ ಮೂಳೆಯಂತೆ. ಹೌದು ವರನ ಸಂಬಂಧಿಕರು ನಲ್ಲಿ ಮೂಳೆ ಹಾಕುವಂತೆ ಕೇಳಿದ್ದಾರೆ. ಈ ವೇಳೆ ವಧುವಿನ ಕಡೆಯವರು ನಲ್ಲಿ ಮೂಳೆಯನ್ನು ಬಳಸಿಲ್ಲ ಎಂದು ಹೇಳಿದ್ದರಂತೆ. ಇದೇ ವಿಚಾರವಾಗಿ ಎರಡೂ ಕುಟುಂಬಗಳ ನಡುವೆ ವಾಗ್ವಾದ ಆರಂಭವಾಗಿ ಪೊಲೀಸ್ ಠಾಣೆಯ ವರೆಗೂ ಹೋಗಿದೆ.

ನಮಗೆ ವಧು ಕಡೆಯವರು ಮಾಂಸಾಹಾರಿ ಊಟದಲ್ಲಿ ನಲ್ಲಿ ಮೂಳೆ ಬಡಿಸದೇ ನಮಗೆ ಅವಮಾನ ಮಾಡಿದ್ದಾರೆ ಎಂದು ವರನ ಕಡೆಯವರು ಆರೋಪಿಸಿದ್ದಾರೆ. ಈ ವಿಚಾರಕ್ಕೆ ವಧುವಿನ ಕಡೆಯವರು ಈ ವಿಚಾರ ವರನ ಕಡೆಯವರು ನಮಗೆ ಮೊದಲು ತಿಳಿಸಿಲ್ಲ. ಆದ್ದರಿಂದ ಊಟಕ್ಕೆ ನಲ್ಲಿ ಮೂಳೆ ಬಳಸಿಲ್ಲ ಎಂದು ವಧುವಿನ ಕಡೆಯವರು ತಿಳಿಸಿದ್ದಾರೆ. ಇನ್ನೂ ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ಹಾಗೂ ಸ್ಥಳೀಯರು ಶಾಕ್ ಆಗಿದ್ದಾರೆ. ಬಳಿಕ ಮದುವೆಯನ್ನು ರದ್ದುಪಡಿಸಿ ತಮ್ಮ ಊರಿಗೆ ವಾಪಸ್ಸಾಗಿದ್ದಾರೆ. ಒಟ್ಟಿನಲ್ಲಿ ಕ್ಷುಲ್ಲಕ ಕಾರಣದಿಂದ ಮದುವೆ ಮುರಿದು ಬಿದ್ದಿರುವ ಘಟನೆ ಇದಾಗಿದೆ.