Film News

ಮೆಗಾಸ್ಟಾರ್ ಕುಟುಂಬದಲ್ಲಿ ಮದುವೆ ಸಂಭ್ರಮ

ಹೈದರಾಬಾದ್: ಖ್ಯಾತ ದಕ್ಷಿಣ ಭಾರತದ ಖ್ಯಾತ ನಟ ಮೆಗಾಸ್ಟಾರ್ ಚಿರಂಜೀವಿ ಮನೆಯಲ್ಲಿ ಮದುವೆ ಸಂಭ್ರಮ ಮನೆ ಮಾಡಿದ್ದು, ಚಿರು ಸಹೋದರ ನಾಗಬಾಬು ರವರ ಪುತ್ರಿ ನಿಹಾರಿಕಾ ಕೊನಿಡೇಲಾ ಮದುವೆ ಕಾಯಕ್ರಮದಲ್ಲಿ ಮೆಗಾಸ್ಟಾರ್ ಕುಟುಂಬ ಸಂಭ್ರಮದಲ್ಲಿ ತೇಲುತ್ತಿದೆ.

ಇನ್ನೂ ಮೆಗಾಸ್ಟಾರ್ ಕುಟುಂಬ ಏಕೈಕ ನಟಿಯಾಗಿರುವ ನಿಹಾರಿಕಾ ಕೊನಿಡೇಲ ಹಾಗೂ ಚೈತನ್ಯ ಮದುವೆಯ ಹಿಂದಿನ ಶಾಸ್ತ್ರಗಳಲ್ಲಿ ಮಿಂಚುತ್ತಿದ್ದಾರೆ. ಈ ಪೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇನ್ನೂ ಈ ಮದುವೆ ರಾಜಸ್ಥಾನದ ಉದಯಪುರ ಎಂಬಲ್ಲಿ ನಡೆಯುತ್ತಿದ್ದು, ಮೆಗಾಸ್ಟಾರ್ ಕುಟುಂಬ ಖಾಸಗಿ ವಿಮಾನದಲ್ಲಿ ರಾಜಸ್ಥಾನಕ್ಕೆ ತೆರಳಿದ್ದಾರೆ.

ಈಗಾಗಲೇ ಮದುವೆ ಶಾಸ್ತ್ರಗಳು ಭರ್ಜರಿಯಾಗಿ ನಡೆಯುತ್ತಿದ್ದು, ಇದೀಗ ಸಂಗೀತ ಸಮಾರಂಭದಲ್ಲಿ ಜೋಡಿ ಹಾಗೂ ಮೆಗಾಸ್ಟಾರ್ ಕುಟುಂಬ ಎಂಜಾಯ್ ಮಾಡಿದ ವೀಡಿಯೋ ಹಾಗೂ ಪೋಟೊಗಳು ವೈರಲ್ ಆಗುತ್ತಿದೆ. ಮದುವೆಯಾಗಲಿರುವ ಜೋಡಿ ಹಿಂದಿ ಹಾಡಿಗೆ ನೃತ್ಯ ಮಾಡಿದ ವಿಡಿಯೋ ಅಂತೂ ಸಖತ್ ವೈರಲ್ ಆಗುತ್ತಿದೆಯಂತೆ.

ಇನ್ನೂ ನಿಹಾರಿಕಾ ನೀಲಿ ಬಣ್ಣದ ಗೌನ್, ಸ್ಟೈಲಿಷ್ ನೆಕ್ಲೇಸ್ ಧರಸಿದ್ದು, ಚೈತನ್ಯ ಬಿಳಿ ವರ್ನದ ಶೇರ್ವಾನಿ ಧರಿಸಿ ವೇದಿಕೆ ಮೇಲೆ ನೃತ್ಯ ಮಾಡಿದ್ದಾರೆ. ಇನ್ನೂ ನಿಹಾರಿಕಾ ಅವರ ತಾಯಿ ಪದ್ಮಜಾ ಅವರ ಸೀರೆಯನ್ನು ಧರಿಸಿ ಸಂಭ್ರಮ ಪಟ್ಟಿದ್ದಾರೆ. 32 ವರ್ಷದ ಹಳೇಯ ಸೀರೆ ಇದಾಗಿದ್ದು, ತನ್ನ ತಾಯಿ ಪದ್ಮಜ ನಿಶ್ಚಿತಾರ್ಥದಲ್ಲಿ ಧರಿಸಿದ ಪೊಟೋ ಹಾಗೂ ತನ್ನ ಹಳೇಯ ಪೋಟೊ ಎರಡನ್ನು ಶೇರ್ ಮಾಡಿದ್ದಾರೆ. ಡಿಸೆಂಬರ್ 9 ರಂದು ರಾಜಸ್ಥಾನದ ಉದಯಪುರ ಪಟ್ಟಣದಲ್ಲಿರುವ ಉದಯ್ ವಿಲಾಸ್ ಅರಮನೆಯಲ್ಲಿ ಮದುವೆ ನಡೆಯಲಿದೆ.

Trending

To Top