Film News

ದಿಗಂತ್ ಹುಟ್ಟುಹಬ್ಬದಂದು ರಿಲೀಸ್ ಆಯ್ತು: ಮಾರಿ ಗೋಲ್ಡ್ ಫಸ್ಟ್ ಲುಕ್

ಬೆಂಗಳೂರು: ಇಂದು ಚಂದನವನದಲ್ಲಿ ದೂಡ್ ಪೇಡ ಎಂತಲೇ ಪ್ರಸಿದ್ದವಾಗಿರುವ ನಟ ದಿಗಂತ್ ರವರ ಹುಟ್ಟುಹಬ್ಬ. ದಿಗಂತ್ ಹುಟ್ಟುಹಬ್ಬದಂದೇ ಅವರು ಅಭಿನಯಿಸಲಿರುವ ಮಾರಿ ಗೋಲ್ಡ್ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ರಿಲೀಸ್ ಮಾಡಿದೆ ಚಿತ್ರತಂಡ.

೩೬ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿಕೊಳ್ಳುತ್ತಿರುವ ನಟ ದಿಗಂತ್ ರವರಿಗೆ ಅಭಿಮಾನಿಗಳು, ನಟರು, ಸ್ನೇಹಿತರು ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಷಯಗಳನ್ನು ತಿಳಿಸುತ್ತಿದ್ದಾರೆ. ಜೊತೆಗೆ ಮಾರಿ ಗೋಲ್ಡ್ ಫಸ್ಟ್ ಲುಕ್ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಹುಟ್ಟುಹಬ್ಬವನ್ನು ಇನಷ್ಟು ಕಲರ್ ಪುಲ್ ಮಾಡಿದೆ. ಗನ್ ಮತ್ತು ಗೋಲ್ಡ್ ಜೊತೆ ದಿಗಂತ್ ನೋಟ ಅಭಿಮಾನಿಗಳ ಗಮನ ಮತಷ್ಟು ಸೆಳೆಯುತ್ತಿದೆ ಎನ್ನಲಾಗುತ್ತಿದೆ.

ಇನ್ನೂ ರಾಘವೇಂದ್ರ ರವರ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬರಲಿದ್ದು, ತಕ್ಷಣವಾಗಿ ಗೋಲ್ಡ್ ಬಿಸ್ಕೆಟ್ ಸಿಕ್ಕರೇ ಏನಾಗುತ್ತದೆ ಎಂಬ ಸಸ್ಪೆನ್ಸ್ ನಿಂದ ಕೂಡಿದ ಸಿನೆಮಾ ಇದಂತೆ. ಜೊತೆಗೆ ಚಿತ್ರದಲ್ಲಿ ರೊಮ್ಯಾಂಟಿಕ್, ಕಾಮಿಡಿ ಸಹ ಇರಲಿದ್ದು, ದಿಂಗತ್ ರವರಿಗೆ ನಾಯಕಿಯಾಗಿ ಸಂಗೀತ ಶೃಂಗೇರಿ ಅಭಿನಯಿಸಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಸಹ ನಡೆಯುತ್ತಿದೆ ಎನ್ನಲಾಗಿದೆ.

ಇನ್ನೂ ದಿಗಂತ್ ರವರ ಕೈಯಲ್ಲಿ ಅನೇಕ ಚಿತ್ರಗಳಿವೆ. ಗಾಳಿಪಟ-೨, ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ, ವೇರ್ ಈಸ್ ಮೈ ಕನ್ನಡಕ ಸೇರಿದಂತೆ ಅನೇಕ ಸಿನೆಮಾಗಳಲ್ಲಿ ದಿಗಂತ್ ರವರು ಬ್ಯುಸಿಯಾಗಿದ್ದಾರೆ ಎನ್ನಲಾಗಿದೆ.

Trending

To Top