Kannada Serials

ಅಭಿಮಾನಿ ಎಂದು ಹೇಳ್ಕೊಂಡು ಆತ ಮಾಡಿದ್ದೇನು ಗೊತ್ತಾ! ಪೊಲೀಸ್ ಠಾಣೆ ಮೆಟ್ಟಿಲೇರಿದ ಪಾರು ಧಾರಾವಾಹಿ ನಟಿ

ಇತ್ತೀಚಿನ ದಿನಗಳಲ್ಲಿ ಟ್ರೋಲ್ ಎನ್ನುವುದು ತಾರಕಕ್ಕೆ ಏರಿದೆ. ಯಾರಾದರೂ ಏನಾದರೂ ಸ್ವಲ್ಪ ತಪ್ಪು ಮಾಡಿದರೆ ಭಯಂಕರ ಟ್ರೋಲ್ ಗೆ ಒಳಗಾಗುತ್ತಾರೆ. ಕೆಲವರು ಏನೂ ತಪ್ಪು ಮಾಡದೆಯೇ ಟ್ರೋಲ್ ಗೆ ಒಳಗಾಗುತ್ತಾರೆ. ಏನೂ ತಪ್ಪು ಮಾಡದೇ ಕೆಲವು ಜನರ ಮನಸ್ಥಿತಿ ಸರಿ ಇಲ್ಲದ ಕಾರಣ ಟ್ರೋಲ್ ಆಗುವುದು ಎಷ್ಟು ಸರಿ ? ಇಂದಿನ ದಿನಗಳಲ್ಲಿ ಟೆಕ್ನಾಲಜಿ ಮುಂದುವರೆದಿರುವುದು ಒಂದು ರೀತಿ ವರವಾದರೆ ಮತ್ತೊಂದು ರೀತಿ ಶಾಪ ಎಂದು ಹೇಳಿದರೆ ತಪ್ಪಲ್ಲ. ಈ ಟ್ರೋಲಿಂಗ್ ಯುಗದಲ್ಲಿ ಅಮಾಯಕ ನಾಟಿಯೊಬ್ಬರು ಟ್ರೋಲ್ ಆಗಿದ್ದಾರೆ.
ಜೀಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಪಾರು. ಪಾರು ಧಾರಾವಾಹಿ ಜನಪ್ರಿಯತೆ ಜೊತೆಗೆ ಟಿ.ಆರ್.ಪಿ ಯಲ್ಲಿ ಸಹ ಒಳ್ಳೆಯ ಸ್ಥಾನ ಗಳಿಸಿದೆ. ಈ ಧಾರಾವಾಹಿಯ ಪಾತ್ರಧಾರಿ ನಟಿಮಾನ್ಸಿ ಜೋಶಿ ಅಭಿಮಾನಿಯೊಬ್ಬರ ವಿರುದ್ಧ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಾಮಾನ್ಯವಾಗಿ ಕಲಾವಿದರು ಎಂದರೆ ಅವರಿಗೆ ಅನೇಕ ಫ್ಯಾನ್ಸ್ ಪೇಜ್ ಗಳು ಇರುತ್ತವೆ. ಅವುಗಳನ್ನು ಅವರು ಸಪೋರ್ಟ್ ಮಾಡುತ್ತಾರೆ. ಅಭಿಮಾನಿಗಳ ಜೊತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಸಂಪರ್ಕದಲ್ಲಿರುತ್ತಾರೆ. ನಟಿ ಮಾನ್ಸಿ ಸಹ ಹಾಗೆಯೇ ಇದ್ದರು. ಸ್ನೇಹಿತರ ಜೊತೆ ಅಭಿಮಾನಿಗಳಿಗೂ ಸಹ ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದರು. ಹೀಗೆ ಒಬ್ಬ ಹುಡುಗ ತವು ಮಾನ್ಸಿ ಜೋಶಿ ಅವರ ಅಭಿಮಾನಿ ಎಂದು ಹೇಳಿಕೊಂಡು ಮೆಸೇಜ್ ಮಾಡಿ, ಮಾನ್ಸಿ ಅವರ ನಂಬರ್ ಪಡೆಯಲು ಪ್ರಯತ್ನಿಸಿದ್ದಾನೆ. ಮಾನ್ಸಿ ಅವರು ನಕಬರ್ ಕೊಡಲು ನಿರಾಕರಿಸಿದ ಕಾರಣ, ಬೇರೆ ಇನ್ನೆರಡು ಅಕೌಂಟ್ ಗಳಿಂದ ಮೆಸೇಜ್ ಮಾಡಿದ್ದಾನೆ, ಆಗಲೂ ಅವರು ನಿರಾಕರಿಸಿದ್ದಾರೆ.
ಈ ಕಾರಣಕ್ಕಾಗಿ ಮಾನ್ಸಿ ಅವರ ಫೋಟೋ ತೆಗೆದುಕೊಂಡು ಅವರ ವಿರುದ್ಧ ಕೆಟ್ಟ ಟ್ರೋಲ್ ಗಳನ್ನು ಮಾಡಿದ್ದಾನೆ. ಹಾಗಾಗಿ ಮಾನ್ಸಿ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯನ್ನೇ ಡಿಲೀಟ್ ಮಾಡಿದ್ದಾರೆ. ಈ ವಿಚಾರವನ್ನು ಫ್ಯಾನ್ಸ್ ಪೇಜ್ ಒಂದರ ಮೂಲಕ ತಿಳಿಸಿದ್ದಾರೆ..”ಎಲ್ಲರಿಗೂ ಗುಡ್‌ ಮಾರ್ನಿಂಗ್, ನನ್ನ ಇನ್‌ಸ್ಟಾಗ್ರಾಂ ಖಾನೆ ಕಾಣಿಸದೇ ಇರುವುದಕ್ಕೆ ನಿಮ್ಮಲ್ಲಿ ಹಲವರಿಗೆ ಆತಂಕ ಉಂಟಾಗಿರುವುದು ನನಗೆ ತಿಳಿದಿದೆ. ದಯವಿಟ್ಟು ಯಾರೂ ಗಾಬರಿ ಆಗಬೇಡಿ. ನನ್ನ ಹೆಸರಿನಲ್ಲಿ ಫ್ಯಾನ್‌ ಪೇಜ್‌ ತೆರೆದು ಅನುಮಾನಸ್ಪದ ಚಟುವಟಿಗಳು ನಡೆಯುತ್ತಿರುವ ಕಾರಣ ನಾನು ಮತ್ತು ನನ್ನ ಟೀಂ ಇದರ ಬಗ್ಗೆ ಕ್ರಮ ಕೈಗೊಳ್ಳುತ್ತಿದ್ದೇವೆ. ಈಗಾಗಲೇ ನಾನು ಸೈಬರ್ ಕ್ರೈಮ್‌ ಮೊರೆ ಹೋಗಿದ್ದೇನೆ. ಅವರ ಸಹಾಯದಿಂದ ಮುಂದಿನ ಕ್ರಮ ಕೈಗೊಳ್ಳುತ್ತೇನೆ. ಈ ಕಾರಣಕ್ಕಾಗಿ ನನ್ನ ಖಾತೆ ಡಿಆಕ್ಟಿವೇಟ್ ಆಗಿದೆ..ಸಂದರ್ಭವನ್ನು ಎಲ್ಲರೂ ಅರ್ಥ ಮಾಡಿಕೊಂಡು ಸಪೋರ್ಟ್ ಮಾಡುತ್ತಿರುವ ಎಲ್ಲರಿಗೂ ಧನ್ಯವಾದಗಳು..” ಎಂದು ಮಾಹಿತಿ ನೀಡಿದ್ದಾರೆ ನಟಿ ಮಾನ್ಸಿ ಜೋಶಿ. ಟೆಕ್ನಾಲಜಿ ಬೆಳೆದಷ್ಟು ಒಂದು ರೀತಿ ಸಮಸ್ಯೆ ಆಗುತ್ತಿದೆ ಎಂದರೆ ತಪ್ಪಾಗುವುದಿಲ್ಲ. ಅಭಿಮಾನಿ ಎಂದು ಹೇಳಿಕೊಂಡ ಆ ವ್ಯಕ್ತಿ ಈ ರೀತಿ ಟ್ರೋಲ್ ಮಾಡುವುದು ಎಷ್ಟು ಸರಿ ?

Trending

To Top