Film News

ಬಿಗ್ ಬಾಸ್ ಗೆ ಬರ್ತಾರ ಮಂಗ್ಲಿ?

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾದ ತೆಲುಗು ವರ್ಷನ್ ನಲ್ಲಿದ್ದ ಕಣ್ಣೆ ಅದಿರಿಂದಿ ಹಾಡು ಸಕ್ಕತ್ ಹಿಟ್ ಆಗಿತ್ತು.ಆ ಹಾಡಿನ ಜೊತೆ ಗಾಯಕಿ ಮಂಗಲಿ ಕೂಡ ಫೇಮಸ್ ಆಗಿದ್ದರು.ರಾಬರ್ಟ್ ಸಿನಿಮಾದ ಪ್ರಚಾರದಲ್ಲಿ ಮಂಗಲಿ ಹಾಡಿದ ವಿಡಿಯೋ ತುಣುಕು ವೈರಲ್ ಆಗುವ ಮೂಲಕ ರಾತ್ರೋರಾತ್ರಿ ಮಂಗಲಿ ಕನ್ನಡಿಗರಿಗೆ ಸ್ಟಾರ್ ಸಿಂಗರ್ ಆಗಿ ಪರಿಚಯ ಅಗುತ್ತಾರೆ.

ಇದಾದ ಬಳಿಕ ಗಾಯಕಿ ಮಂಗಲಿ ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರ ಜೊತೆ ತೆರೆ ಅಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.ಇದೀಗ ಮಂಗಲಿ ಕುರಿತಾಗಿ ಟಾಲಿವುಡ್ ಅಂಗಳದಲ್ಲಿ ಹೊಸ ಸುದ್ದಿಯೊಂದು ಕೇಳಿ ಬರುತ್ತಿದೆ.

ಸದ್ಯ ಕಣ್ಣೆ ಅದಿರಿಂದಿ ಹಾಡಿನ ಮೂಲಕ ಜನಪ್ರಿಯತೆ ಗಳಿಸಿರುವ ಮಂಗಲಿ ಇದೀಗ ಬಿಗ್ ಬಾಸ್ ಮನೆಗೆ ಕಾಲಿಡಲಿದ್ದಾರೆ ಎಂದು ಹೇಳಲಾಗುತ್ತಿದೆ.ಕನ್ನಡ ಹಾಗೂ ತೆಲುಗಿನಲ್ಲಿ ಜನಪ್ರಿಯತೆ ಪಡೆದಿರುವ ಮಂಗಳಿಯನ್ನ ಈ ಬಾರಿ ಬಿಗ್ ಬಾಸ್ ಮನೆಗೆ ಕರೆ ತರಲು ಆಯೋಜಕರು ಮುಂದಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.

Trending

To Top