Kannada Serials

ಮನಸಾರೆ ಧಾರಾವಾಹಿಯಿಂದ ಹೊರ ಬಂದ ನಟ ಸಾಗರ್! ಅಸಲಿ ಕಾರಣ ಏನು ಗೊತ್ತಾ

ಟಿವಿ ನೋಡುವ ವೀಕ್ಷಕರು ಹೆಚ್ಚಾಗಿ ಇಷ್ಟಪಡುವುದು ಧಾರಾವಾಹಿಗಳನ್ನು. ಮೊದಲಿಗೆ ಡಿಡಿ ಚಂದನ ಧಾರಾವಾಹಿಯಲ್ಲಿ ಮಾತ್ರ ಧಾರಾವಾಹಿಗಳು ಪ್ರಸಾರವಾಗುತ್ತಿದ್ದವು. ಆದರೆ ಈಗ ಹಲವಾರು ವಾಹಿನಿಗಳು ಲಭ್ಯವಿದೆ. ಎಲ್ಲಾ ವಾಹಿನಿಗಳಲ್ಲಿ ಸಾಕಷ್ಟು ಧಾರಾವಾಹಿಗಳು ಪ್ರಸಾರವಾಗುತ್ತವೆ. ಹಾಗಂತ ವೀಕ್ಷಕರು ಎಲ್ಲಾ ಧಾರಾವಾಹಿಗಳನ್ನು ನೋಡುತ್ತಾರೆ ಎಂದು ಅಂದುಕೊಳ್ಳಲು ಸಾಧ್ಯವಿಲ್ಲ. ಯಾವ ಧಾರಾವಾಹಿಯನ್ನು ವೀಕ್ಷಕರು ಹೆಚ್ಚಾಗಿ ಇಷ್ಟ ಪಡುತ್ತಾರೆ ಎಂದು ತಿಳಿದುಕೊಳ್ಳಲು ಟಿ.ಆರ್.ಪಿ ರೇಟಿಂಗ್ ವ್ಯವಸ್ಥೆ ಇದೆ.

ಈ ರೇಟಿಂಗ್ ಮೂಲಕ ವೀಕ್ಷಕರು ಹೆಚ್ಚಾಗಿ ಇಷ್ಟಪಟ್ಟು ವೀಕ್ಷಿಸುವ ಕಾರ್ಯಕ್ರಮ ಹಾಗೂ ಧಾರಾವಾಹಿಗಳು ಯಾವುವು ಎಂದು ತಿಳಿಯಬಹುದು. ನಮಗೆಲ್ಲ ತಿಳಿದಿರುವ ಹಾಗೆ ಟಿವಿ ಮಾಧ್ಯಮದಲ್ಲಿ ವಿವಿ’ಧ ಚಾನೆಲ್ ಗಳು ಶುರುವಾದ ಸಮಯದಿಂದಲೂ ಇರುವ ವಾಹಿನಿ ಉದಯ ಟಿವಿ. 2 ದಶಕಗಳಿಗೂ ಹೆಚ್ಚಿನ ಸಮಯದಿಂದ ಉದಯ ಟಿವಿ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಬಂದಿದೆ. ಇಂದಿಗೂ ಸಹ ಈ ವಾಹಿನಿಯಲ್ಲಿ ಪ್ರಸಾರವಾಗುವ ಧಾರಾವಾಹಿಗಳಿಗೆ ಅಷ್ಟೇ ಬೇಡಿಕೆ ಇದೆ. ಉದಯ ಟಿವಿಯಲ್ಲಿ ಪ್ರಸಾರವಾಗಿ ವೀಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಗಳಿಸಿದ್ದ ಧಾರಾವಾಹಿಗಳಲ್ಲಿ ಒಂದು ಮನಸಾರೆ. ಒಳ್ಳೆಯ ಕಥಾವಸ್ತು ಇದ್ದು, ಉತ್ತಮ ಕಲಾವಿದರನ್ನು ಒಳಗೊಂಡಿದ್ದ ಈ ಧಾರಾವಾಹಿ ಯಶಸ್ಸು ಗಳಿಸಿತ್ತು. ಜೊತೆಗೆ ಸಾಕಷ್ಟು ಅಭಿಮಾನಿಗಳನ್ನು ಸಹ ಪಡೆದಿತ್ತು.

ಇದೀಗ, ಮನಸಾರೆ ಧಾರಾವಾಹಿ ಅಭಿಮಾನಿಗಳಿಗೆ ಒಂದು ಬೇ’ಸರದ ಸಂಗತಿ ಇದೆ. ಅದೇನೆಂದರೆ, ಈ ಧಾರಾವಾಹಿಯ ಮುಖ್ಯ ಪಾತ್ರಧಾರಿ ಸಾಗರ್ ಮನಸಾರೆ ತಂಡದಿಂದ ಹೊರ ಬಂದಿದ್ದಾರೆ ಎಂಬ ವಿಷಯ ಸಿಕ್ಕಿದೆ. ಆದರೆ ಯಾವ ಕಾರಣದಿಂದಾಗಿ ಸಾಗರ್ ಧಾರಾವಾಹಿಯನ್ನು ತ್ಯಜಿಸಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಆದರೆ ಅಭಿಮಾನಿಗಳೆಲ್ಲರು ಸಾಗರ್ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಪ್ರಶ್ನೆ ಕೇಳಿದ್ದಾರೆ. ಧಾರಾವಾಹಿಯಿಂದ ಹೊರಬಂದಿದ್ದರ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ನಟ ಸಾಗರ್.

“ಶೂ’ಟಿಂಗ್ ಹಾಗೂ ಡ್ಯಾನ್ಸ್ ರಿಹರ್ಸಲ್ ಸಮಯದಲ್ಲಿ ನಾವೆಲ್ಲರೂ ಒಟ್ಟಾಗಿ ಕಳೆದ ಕ್ಷಣಗಳನ್ನು ನಾನು ಯಾವಾಗಲೂ ನೆನೆಯುತ್ತೇನೆ.. ಇಂತಹ ಕ್ಷಣಗಳು ಮತ್ತೆ ಬರುತ್ತದೆಯೇ ಎಂದು ನನಗೆ ತಿಳಿದಿಲ್ಲ, ಮತ್ತೆ ಈ ರೀತಿ ಸಿಗುತ್ತೇವೆಯೋ ತಿಳಿದಿಲ್ಲ.. ನಾವೆಲ್ಲರೂ ಒಳ್ಳೆ ಸಮಯ ಕಳೆದಿದ್ದೇವೆ, ನಮ್ಮ ಧಾರಾವಾಹಿಯ ಟಿ.ಆರ್.ಪಿ 6.5 ರೇಟಿಂಗ್ ಗಳಿಸಿತ್ತು, ಮನಸಾರೆ ಯಾವಾಗಲೂ ಮೊದಲನೇ ಸ್ಥಾನದಲ್ಲಿರಲಿ.. ಶೂಟಿಂಗ್ ನಲ್ಲಿ ಕಳೆದ ಅದೆಷ್ಟೋ ಕ್ಷಣಗಳಲ್ಲಿ ನೀವಿಬ್ಬರೂ ನನ್ನ ಸ್ನೇಹಿತರಾಗಿ ನನ್ನ ಜೊತೆ ಇದ್ಧಿರಿ. ಈಗ ನಾವೆಲ್ಲರೂ ನಮ್ಮದೇ ಆದ ದಾರಿಗಳನ್ನು ಹುಡುಕಿಕೊಳ್ಳುವ ಸಮಯ, ಆದರೆ ನೆನಪಿಡಿ ನಾವೆಲ್ಲರೂ ಒಂದೇ ಸೂರ್ಯನ ಕೆಳಗೆ ಇರುತ್ತೇವೆ..” ಎಂದು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಮಾಡಿದ್ದಾರೆ ನಟ ಸಾಗರ್. ಈ ಪೋಸ್ಟ್ ನೋಡಿದ ಅಭಿಮಾನಿಗಳು ನೀವಿಲ್ಲದೆ ಸೀರಿಯಲ್ ನೋಡಲು ಸಂತೋಷವಾಗುವುದಿಲ್ಲ, ಸೀರಿಯಲ್ ಬಿಟ್ಟು ಹೋಗಬೇಡಿ ಎಂದು ಕಮೆಂಟ್ಸ್ ಮಾಡುತ್ತಿದ್ದಾರೆ.

Trending

To Top