ಮುಂಬೈ: ಸದಾ ತಮ್ಮ ಪೊಟೋಶೂಟ್ ಗಳ ಮೂಲಕ ಸುದ್ದಿಯಲ್ಲಿರುವಂತಹ ಬಾಲಿವುಡ್ ಹಾಟ್ ನಟಿ ಮಲೈಕಾ ಅರೋರಾ ಹಸಿರು ಉಡುಪಿನ ಹಾಟ್ ಹಾಟ್ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ನಟಿ ಮಲೈಕಾ ಅರೋರ ರವರ ಬಾಯ್ ಪ್ರೆಂಡ್ ಎಂತಲೇ ಕರೆಯಲಾಗುತ್ತಿರುವ ಅರ್ಜುನ್ ಕಪೂರ್ ರವರ ಜೊತೆ ಗೋವಾ ಪ್ರವಾಸಕ್ಕೆ ತೆರಳಿದ್ದು, ಜಾಲಿ ಟ್ರಿಪ್ ಸಂಭ್ರಮಿಸುತ್ತಿದ್ದಾರೆ. ಈ ವೇಳೆ ಶೂಟ್ ಮಾಡಲಾದ ಪೊಟೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
ಹಾಟ್ ಲುಕ್ ನಲ್ಲಿಯೇ ಅನೇಕ ಅಭಿಮಾನಿಗಳ ನಿದ್ದೆ ಕೆಡಿಸಿರುವಂತಹ ಮಲೈಕಾ ಗಿಡಗಳ ಮಧ್ಯೆ ಹಸಿರು ಬಣ್ಣದ ವಿಧ ವಿಧದ ಬಂಗಿಗಳಲ್ಲಿ ಪೊಟೋಗಳನ್ನು ತೆಗೆಸಿಕೊಂಡಿದ್ದಾರೆ. ಇನ್ನೂ ಮಲೈಕಾ ರವರ ಪೊಟೋಗಳಿಗೆ ನೆಟ್ಟಿಗರಿಂದ ಹಾಟ್ ಹಾಟ್ ಆಗಿಯೇ ಕಾಮೆಂಟ್ ಗಳು ಹರಿದುಬರುತ್ತಿದೆ. ಕೆಲವರು ಈ ಪೊಟೋಗಳು ಕಿಯಾರಾ ಅಡ್ವಾನಿ ರವರು ಮಾಡಿಸಿದ್ದಂತಹ ಕ್ಯಾಲೆಂಡರ್ ಪೊಟೋಶೂಟ್ ಎಂದು ಹೇಳುತ್ತಿದ್ದಾರಂತೆ.
ಅನೇಕ ಬಾರಿ ಟ್ರೋಲ್ ಮಾಡುವವರಿಗೆ ಮಲೈಕಾ ಅರೋರ ಆಹಾರವಾಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ಭಂಗಿಗಳಲ್ಲಿ ತೆಗೆದ ಪೊಟೋಗಳು ಹಂಚಿಕೊಳ್ಳುತ್ತಿರುತ್ತಾರೆ. ಇಂತಹ ಪೊಟೋಗಳಿಗೆ ಅನೇಕ ಕಾಮೆಂಟ್ ಗಳು ಬರುತ್ತಿದ್ದರೂ ಸಹ ಅವುಗಳ ಕಡೆ ಗಮನ ಕೊಡದೆ ಪೊಟೋಗಳನ್ನು ಶೇರ್ ಮಾಡುತ್ತಲೇ ಇರುತ್ತಾರೆ.
