ವಿಕ್ರಮ್ ಚಿತ್ರದಲ್ಲಿ ಕಮಲ್ ಹಾಸನ್ ಗೆ ವಿಲನ್ ಫಹಾದ್!

ಚೆನೈ: ಮಲಯಾಳಂನ ಖ್ಯಾತ ನಟ ವಿಭಿನ್ನ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದ ಫಹಾದ್ ಫಾಸಿಲ್ ಸಕಲಕಲಾ ವಲ್ಲಭ ಎಂದೇ ಕರೆಯುವ ಕiಲ್ ಹಾಸನ್ ನಟಿಸಲಿರುವ ವಿಕ್ರಮ್ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸಲಿದ್ದಾರಂತೆ.

ಕಮಲ್ ಹಾಸನ್ ಬ್ಯಾನರ್ ನಡಿ ಕಾಲಿವುಡ್ ನ ಖ್ಯಾತ ನಿರ್ದೇಶಕ ಲೋಕೇಶ್ ಕನಗರಾಜ್ ಸಾರಥ್ಯದಲ್ಲಿ ಮೂಡಿಬರಲಿರುವ ವಿಕ್ರಮ್ ಸಿನೆಮಾದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹವಾ ಹುಟ್ಟಿಸಿದೆ. ಇನ್ನೂ ಚಿತ್ರಕ್ಕೆ ಸಂಬಂಧಿಸಿದಂತೆ ಪ್ರಿ ಪ್ರೊಡಕ್ಷನ್ ಕೆಲಸಗಳು ಸಹ ಪ್ರಾರಂಭವಾಗಿದೆ. ಚಿತ್ರದ ಖಳನಾಯಕನಾಗಿ ಮಲಯಾಳಂ ಚಿತ್ರಗಳಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸಿದಂತಹ ಫಹಾದ್ ಫಾಸಿಲ್ ಅಭಿನಯಿಸಲಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇನ್ನೂ ಈ ವಿಚಾರ ತಿಳಿದ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿದೆ. ಇನ್ನೂ ಫಹಾದ್ ಅನೇಕ ಮಲಯಾಳಂ ಚಿತ್ರಗಳಲ್ಲಿ ನಟಿಸಿ ಖ್ಯಾತಿ ಗಳಿಸಿದ್ದು, ಕೆಲವೊಂದು ಚಿತ್ರಗಳ ನಿರ್ಮಾಪಕರಾಗಿಯೂ ಜಯ ಗಳಿಸಿದ್ದಾರೆ.

ಇನ್ನೂ ಫಹಾದ್ ಈಗಾಗಲೇ ತಾವೇ ನಿರ್ಮಿಸಿದ್ದ ಕುಂಬಳಗಿ ನೈಟ್ಸ್, ಶಿವಕಾರ್ತಿಕೇಯನ್ ಹಾಗೂ ನಯನತಾರಾ ನಟನೆಯ ವಲ್ಲೈಕ್ಕಾರನ್ ಸಿನೆಮಾಗಳಲ್ಲೂ ವಿಲನ್ ಪಾತ್ರಗಳನ್ನು ಪೋಷಣೆ ಮಾಡಿದ್ದಾರೆ. ಮುಖ್ಯವಾಗಿ ೧೯೮೬ ರಲ್ಲಿಯೇ ಕಮಲ್ ಹಾಸನ್ ವಿಕ್ರಮ್ ಸಿನೆಮಾ ರಿಲೀಸ್ ಆಗಿತ್ತು, ಈ ಚಿತ್ರವನ್ನು ಸ್ವತಃ ಕಮಲ್ ಅವರೇ ಬರೆದಿದ್ದರು. ೩೪ ವರ್ಷಗಳ ಬಳಿಕ ಪುನಃ ಅದೇ ಟೈಟಲ್ ನೊಂದಿಗೆ ಸಿನೆಮಾ ಮಾಡುತ್ತಿರುವುದು ಸಿನೆಮಾ ಹೇಗಿರಬಹುದು ಎಂಬ ನಿರೀಕ್ಷೆ ಸಿನಿಪ್ರೇಕ್ಷಕರಲ್ಲಿ ಹೆಚ್ಚಾಗಿದೆ.

Previous articleಕಾಶ್ಮೀರದಲ್ಲಿ ನಡೆಯುತ್ತಿದೆ 777 ಚಾರ್ಲಿ ಕೊನೆಯ ಹಂತದ ಶೂಟಿಂಗ್
Next articleಸೂಪರ್ ಸ್ಟಾರ್ ರಜನಿಕಾಂತ್ ಹುಟ್ಟುಹಬ್ಬ: ಗಣ್ಯರಿಂದ ಶುಭಾಷಯ