ಯುವಕನೊಬ್ಬ ನೀಡಿದ ಕಿರುಕುಳವನ್ನು ರಿವೀಲ್ ಮಾಡಿದ ಮಲಯಾಳಿ ಬ್ಯೂಟಿ ನಿತ್ಯಾ…!

ದಕ್ಷಿಣ ಭಾರತದಲ್ಲಿ ಸಾಲು ಸಾಲು ಸಿನೆಮಾಗಳ ಮೂಲಕ ಸ್ಟಾರ್‍ ಡಮ್ ದಕ್ಕಿಸಿಕೊಂಡ ನಟಿ ನಿತ್ಯಾ ಮೆನನ್, ಅಲಾ ಮೊದಲೈಂದಿ ಎಂಬ ಸಿನೆಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈಕೆ ಸಾಲು ಸಾಲು ಹಿಟ್ ಸಿನೆಮಾಗಳನ್ನು ನೀಡಿದ್ದಾರೆ. ತೆಲುಗು, ತಮಿಳು, ಮಲಯಾಳಂ ಮೂಲದ ಸಿನೆಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಹೆಚ್ಚಿಸಿಕೊಂಡಿದ್ದಾರೆ. ಇತ್ತೀಚಿಗಷ್ಟೆ ಅವರ ಮದುವೆಯ ಬಗ್ಗೆ ಕೆಲವೊಂದು ರೂಮರ್‍ ಗಳೂ ಸಹ ಹರಿದಾಡಿತ್ತು. ಇದೀಗ ಆಕೆ ಅನುಭವಿಸಿದ ಕಹಿ ಘಟನೆಯನ್ನು ಬಿಚ್ಚಿಟ್ಟಿದ್ದಾರೆ. ಅಷ್ಟಕ್ಕೂ ಅದು ಏನು ಎಂಬ ವಿಚಾರಕ್ಕೆ ಬಂದರೇ,

ನಿತ್ಯಾ ಮೆನನ್ ಬಹುಬೇಡಿಕೆಯುಳ್ಳ ನಟಿಯಾಗಿದ್ದಾರೆ. ಇತ್ತಿಚಿಗಷ್ಟೆ ಆಕೆ ಅಭಿನಯದ 19 (1) (A) ಎಂಬ ಸಿನೆಮಾ ಬಿಡುಗಡೆಯಾಗಿತ್ತು. ಈ ಸಿನೆಮಾ ಎಲ್ಲರ ಮೆಚ್ಚುಗೆಗೆ ಸಹ ಪಾತ್ರವಾಗಿದೆ. ಇನ್ನೂ ಈ ಸಿನೆಮಾದ ಪ್ರಚಾರದ ಸಮಯದಲ್ಲೇ ಆಕೆಯ ಮದುವೆಯ ಬಗ್ಗೆ ಕೆಲವೊಂದು ರೂಮರ್‍ ಗಳೂ ಸಹ ಬಂದಿದ್ದು, ಆ ರೂಮರ್‍ ಗಳಿಗೆ ಆಕೆಯೇ ಸ್ಪಷ್ಟನೆ ನೀಡಿದ್ದರು. ಇನ್ನೂ ನಾನು ಮದುವೆಯಾಗಲು ಸಿದ್ದವಿಲ್ಲ. ಮದುವೆ ಆಗುವ ಕ್ಷಣ ಬಂದರೇ ನಿಮಗೆ ತಿಳಿಸುತ್ತೇನೆ ಎಂದು ಹೇಳುವ ಮೂಲಕ ರೂಮರ್‍ ಗಳಿಗೆ ನಾಂದಿ ಹಾಡಿದ್ದರು. ಇದೀಗ ನಿತ್ಯಾ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ತನ್ನ ಜೀವನಲ್ಲಾದ ಅತ್ಯಂತ ಕಹಿ ಘಟನೆಯನ್ನು ಆಕೆ ಬಿಚ್ಚಿಟ್ಟಿದ್ದಾರೆ. ಆ ಕಹಿ ಘಟನೆಯನ್ನು ನೆನೆದು ಆಕೆ ಬೇಸರ ವ್ಯಕ್ತಪಡಿಸಿದ್ದಾರೆ. ಯುವಕನೊಬ್ಬ ಆಕೆಗೆ ವಿವಿಧ ರೀತಿಯಲ್ಲಿ ಕಿರುಕುಳ ನೀಡಿದ ಬಗ್ಗೆ ಮಾದ್ಯಮವೊಂದರ ಬಳಿ ಬಿಚ್ಚಿಟ್ಟಿದ್ದಾರೆ.

ನಟಿ ನಿತ್ಯಾ ಮೆನನ್ ಗೆ ಕಿರುಕುಳ ನೀಡಿದ್ದು ಸಿನೆಮಾಗಳ ವಿಮರ್ಶೆ ಮಾಡುತ್ತಾ ಖ್ಯಾತಿ ಪಡೆದ ಯುವಕನೊಬ್ಬನಿಂದ ಅಂತೆ. ಆತನಿಂದ ನಿತ್ಯಾ ತುಂಬಾ ಕಿರುಕಳ ಅನುಭವಿಸಿದ್ದಾರಂತೆ. ಸುಮಾರು ದಿನಗಳಿಂದ ಆತ ನಿತ್ಯಾಗೆ ಕಿರುಕುಳ ನೀಡುತ್ತಿದ್ದಾನಂತೆ. ಆತ ಸಾರ್ವಜನಿಕವಾಗಿಯೇ ನನ್ನ ಬಗ್ಗೆ ಮಾತನಾಡುತ್ತಿದ್ದಾನೆ ಎಂದು ನಿತ್ಯಾ ಬೇಸರ ವ್ಯಕ್ತಪಡಿಸಿದ್ದಾರೆ. ಇನ್ನೂ ಆ ಯುವಕನ ವಿರುದ್ದ ದೂರು ನೀಡುವಂತೆ ಅನೇಕರು ನನಗೆ ಹೇಳಿದ್ದರು. ನಾನೇ ಬೇಡ ಎಂದು ಸುಮ್ಮನಾಗಿದ್ದೇನೆ. ಸುಮಾರು ಆರು ವರ್ಷಗಳಿಂದ ನನಗೆ ಕಿರುಕುಳ ನೀಡುತ್ತಿದ್ದ, ಜೊತೆಗೆ ನನ್ನ ಪೋಷಕರ ಹೆಸರುಗಳನ್ನು ಹೇಳಿ ಅವರಿಗೂ ಹಿಂಸೆ ಕೊಟ್ಟಿದ್ದಾನೆ. ತುಂಬಾ ಕ್ರೂರವಾಗಿ ಆ ಯುವಕ ಮಾತನಾಡುತ್ತಾನೆ. ಇಲ್ಲಿಯವರೆಗೂ ಆತನ ಮೂವತ್ತಕ್ಕೂ ಹೆಚ್ಚು ನಂಬರ್‍ ಗಳನ್ನು ಸಹ ಬ್ಲಾಕ್ ಮಾಡಿದ್ದೇನೆ. ಅವನ ಮಾತುಗಳನ್ನು ನಂಬುವವರು ಮೂರ್ಖರು ಎಂದಿದ್ದಾರೆ ನಿತ್ಯಾ ಮೆನನ್.

ಇನ್ನೂ ನಿತ್ಯಾ ಮೆನನ್ ಗೆ ಕಿರುಕುಳ ಕೊಟ್ಟ ವ್ಯಕ್ತಿಯನ್ನು ಸಂತೋಷ್ ವಾರ್ಕಿ ಎಂದು ಹೇಳಲಾಗುತ್ತಿದೆ. ಈ ಹಿಂದೆ ಸಹ ನಿತ್ಯಾ ರವರನ್ನು ಮದುವೆಯಾಗಲು ಆಕೆಯ ಮನೆಗೆ ಹೋದಿದ್ದಾಗಿ ಸೇರಿದಂತೆ ಕೆಲವೊಂದು ವಿಚಾರಗಳನ್ನೂ ಸಹ ಆತ ಸೋಷಿಯಲ್ ಮಿಡಿಯಾದಲ್ಲಿ ಹಂಚಿಕೊಂಡಿದ್ದ. ಬಳಿಕ ನಾನು ನಿತ್ಯಾ ರವರನ್ನು ಮದುವೆ ಆಗುವುದಿಲ್ಲ. ಅವರೇ ಬಂದು ಮದುವೆಯಾಗು ಎಂದು ಕೇಳಿದರೂ ನಾನು ಆಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾಗಿ, ನಿತ್ಯಾ ಒಳ್ಳೆಯವರಾಗಿದ್ದರೇ, ತಮ್ಮ ಮೊಬೈಲ್ ನಂಬರ್‍ ನೀಡುತ್ತಿದ್ದರು ಎಂದು ಪೋಸ್ಟ್ ಮಾಡಿದ್ದ. ನನ್ನ ನಿಜವಾದ ಪ್ರೀತಿಯನ್ನು ತಿಳಿಯದ ಆಕೆ ಮುಂದಿನ ದಿನಗಳಲ್ಲಿ ನೋವು ಅನುಭವಿಸುತ್ತಾರೆ ಎಂದಿದ್ದ. ಇನ್ನೂ ಸಂತೋಷ್ ವಾರ್ಕಿ ಎಂಬಾತ ಕೇರಳ ಸಾಮಾಜಿಕ ಜಾಲತಾಣಗಳಲ್ಲಿ ಫೇಮ್ ಹೊಂದಿರುವ ಯುವಕನಾಗಿದ್ದಾನೆ. ಆಗಾಗ ಸಿನೆಮಾಗಳ ಬಗ್ಗೆ ವಿಮರ್ಶೆ ಮಾಡುತ್ತಿರುತ್ತಾರೆ. ಈತ ನೀಡುವ ಕಿರುಕುಳದ ಬಗ್ಗೆಯೇ ನಿತ್ಯಾ ಮಾತನಾಡಿದ್ದಾರೆ ಎನ್ನಲಾಗಿದೆ.

Previous articleಮಾದಕ ನೋಟದ ಮೂಲಕ ಯುವಕರನ್ನು ಮಂತ್ರ ಮುಗ್ದರನ್ನಾಗಿ ಮಾಡಿದ ನಟಿ ನೇಹಾ ಶರ್ಮಾ…!
Next articleಕನ್ನಡ ರಾಜ್ಯೋತ್ಸವ ದಿನದಂದು ಅಪ್ಪುಗೆ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ….!