ಕನ್ನಡ ಚಿತ್ರರಂಗದ ಡ್ರೀಮ್ ಗರ್ಲ್, ಮೋಹಕ ನಟಿ ಮಾಲಾಶ್ರೀ. 90ರ ದಶಕದಲ್ಲಿ ಹೀರೋಗಳಿಗೆ ಇದ್ದಷ್ಟೇ ಪ್ರಾಮುಖ್ಯತೆ ಮಾಲಾಶ್ರೀ ಅವರಿಗೂ ಇತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದರು ಮಾಲಾಶ್ರೀ..ಈ ಹಿರಿಯ ನಟಿ ಇತ್ತೀಚೆಗೆ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಹಳ ಸಕ್ರಿಯವಾಗಿ ಇಲ್ಲದೆ ಇದ್ದರು, ಆಗಾಗ ತಮ್ಮ ವೈಯಕ್ತಿಕ ಜೀವನದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಹಳೆಯ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
ಇತ್ತೀಚೆಗೆ ಮಾಲಾಶ್ರೀ ಅವರು ತಮ್ಮ ಸೀಮಂತ ಶಾಸ್ತ್ರದ ಫೋಟೋಗಳನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಮಾಲಾಶ್ರೀ ಅವರ ಮೊದಲ ಮಗಳು ಹುಟ್ಟಿದ್ದು, 2001ರಲ್ಲಿ. ಮೊದಲ ಮಗು ಹುಟ್ಟುವ ಮೊದಲು ನಡೆದ ಸೀಮಂತ ಶಾಸ್ತ್ರದ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದಲ್ಲಿ ಹಸಿರು ಸೀರೆಯುಟ್ಟು ಕಂಗೊಳಿಸುತ್ತಿರುವ ಮಾಲಾಶ್ರೀ ಅವರ ಜೊತೆ ಪತಿ ರಾಮು ಇದ್ದಾರೆ. ಈ ಫೋಟೋಗಳನ್ನು ನೋಡಿ ಬಹಳ ಸಂತೋಷರಾಗಿರುವ ಅಭಿಮಾನಿಗಳು ಲೈಕ್ಸ್ ಮತ್ತು ಕಮೆಂಟ್ಸ್ ಗಳ ಮಳೆ ಹರಿಸಿದ್ದಾರೆ.
ನಟಿ ಮಾಲಾಶ್ರೀ ಮೊದಲ ಬಾರಿಗೆ ಬಾಲನಟಿಯಾಗಿ ತೆಲುಗು ಸಿನಿಮಾಗಳಲ್ಲಿ ನಟಿಸಿದರು. ನಂತರ ತಮಿಳು ಸಿನಿಮಾಗಳಲ್ಲೂ ಬಾಲನಟಿಯಾಗಿ ನಟಿಸಿದರು. ಬಾಲನಟಿಯಾಗಿ ಸುಮಾರು 36 ಸಿನಿಮಾಗಳಲ್ಲಿ ನಟಿಸಿದ್ದಾರೆ. ನಂಜುಂಡಿ ಕಲ್ಯಾಣ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕಿಯಾಗಿ ಎಂಟ್ರಿ ಕೊಟ್ಟರು. ನಂತರ ನಡೆದಿದ್ದೆಲ್ಲವೂ ಇತಿಹಾಸ.ಕನ್ನಡ ಚಿತ್ರರಂಗದ ಡ್ರೀಮ್ ಗರ್ಲ್, ಮೋಹಕ ನಟಿ ಮಾಲಾಶ್ರೀ. 90ರ ದಶಕದಲ್ಲಿ ಹೀರೋಗಳಿಗೆ ಇದ್ದಷ್ಟೇ ಪ್ರಾಮುಖ್ಯತೆ ಮಾಲಾಶ್ರೀ ಅವರಿಗೂ ಇತ್ತು. ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಯಶಸ್ವಿ ನಟಿಯಾಗಿದ್ದರು ಮಾಲಾಶ್ರೀ..ಈ ಹಿರಿಯ ನಟಿ ಇತ್ತೀಚೆಗೆ ಇನ್ಸ್ಟಾಗ್ರಾಮ್ ಗೆ ಎಂಟ್ರಿ ಕೊಟ್ಟಿದ್ದಾರೆ. ಬಹಳ ಸಕ್ರಿಯವಾಗಿ ಇಲ್ಲದೆ ಇದ್ದರು, ಆಗಾಗ ತಮ್ಮ ವೈಯಕ್ತಿಕ ಜೀವನದ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ತಮ್ಮ ಹಳೆಯ ನೆನಪುಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಾರೆ.
