Saturday, May 21, 2022
HomeEntertainmentಅಪ್ಪು ನೆನೆದು ಭಾವುಕರಾದ ನಟಿ ಮಾಲಾಶ್ರೀ ಹೇಳಿದ್ದೇನು ನೋಡಿ

ಅಪ್ಪು ನೆನೆದು ಭಾವುಕರಾದ ನಟಿ ಮಾಲಾಶ್ರೀ ಹೇಳಿದ್ದೇನು ನೋಡಿ

ನಟಿ ಮಾಲಾಶ್ರೀ ಈ ವರ್ಷ ತಮ್ಮ ಜೀವನದ ಅತ್ಯಂತ ನೋವಿನ ಕ್ಷಣಗಳನ್ನ ಕಂಡಿದ್ದಾರೆ. ತಮ್ಮ ಪತಿ ನಿರ್ಮಾಪಕ ರಾಮು ಅವರು ಈ ವರ್ಷ ಏಪ್ರಿಲ್ ತಿಂಗಳಲ್ಲಿ ಕೋವಿಡ್ ಸೋಂಕಿನಿಂದ ನಿಧನ ಹೊಂದಿದ್ದರು. ಕೋಟಿ ರಾಮು ಎಂದೇ ಖ್ಯಾತರಾಗಿದ್ದ ಕನ್ನಡದ ಖ್ಯಾತ ಹಾಗೂ ಜನಪ್ರಿಯ ನಿರ್ಮಾಪಕ ರಾಮು ಅವರು ಬಿಟ್ಟು ಹೋಗಿದ್ದ ಜವಾಬ್ದಾರಿಗಳನ್ನು ಮಾಲಾಶ್ರೀ ಅವರು ಇದೀಗ ಹೆಗಲಿಗೆ ಹೇರಿಸಿಕೊಂಡಿದ್ದಾರೆ. ಪತಿಯನ್ನು ಕಳೆದುಕೊಂಡು ಮೊದಲೇ ದುಃಖದಲ್ಲಿದ್ದ ಮಾಲಾಶ್ರೀ ಅವರಿಗೆ ಅಪ್ಪು ಅವರ ನಿಧನ ಬಹಳ ದುಃಖವನ್ನು ಉಂಟುಮಾಡಿತು.

ಅಪ್ಪು ಮತ್ತು ಮಾಲಾಶ್ರೀ ಅವರು ಬಾಲ್ಯದ ಗೆಳೆಯರು, ಚಿಕ್ಕವಯಸ್ಸಿನಿಂದಲೂ ಒಳ್ಳೆಯ ಒಡನಾಟ ಹೊಂದಿದ್ದರು. ಅಪ್ಪು ನಿಧನರಾಗುವುದಕ್ಕೂ ಮುಂಚೆ ತಮ್ಮೊಂದಿಗೆ ಆಡಿದ ಸ್ಪೂರ್ತಿದಾಯಕ ಮಾತುಗಳನ್ನು ಮಾಲಾಶ್ರೀ ಅವರು ನೆನಪಿಸಿಕ್ಕೊಂಡಿದ್ದಾರೆ. ಅಪ್ಪು ನಿಧನರಾಗುವ ಮೂರು ದಿನ ಮುಂಚೆ ನಾನು ಅವರನ್ನು ಒಂದು ಮದುವೆಯಲ್ಲಿ ಭೇಟಿಯಾಗಿದ್ದೆ.

ರಾಮು ಅವರ ನಿಧನದ ಬಳಿಕ ನಾನು ಹೋಗಿದ್ದ ಮೊದಲ ಮದುವೆ ಅದು. ಅಪ್ಪು ನನ್ನ ನೋಡಿ ಕೂಡಲೇ ತಬ್ಬಿಕೊಂಡು ನೀವು ಹೀಗಿರಬಾರದು ನೀವು ಈ ದುಃಖದಿಂದ ಆದಷ್ಟು ಬೇಗ ಹೊರ ಬರಬೇಕು. ನಾನು ನಿಮ್ಮನ್ನು ದುರ್ಗಿ, ಚಾಮುಂದಿಯಂತೆ ನೋಡಬೇಕು ರಾಮು ಅವರು ಇಲ್ಲ ಎಂದುಕೊಳ್ಳಬೇಡಿ ಅವರು ಯಾವಾಗಲೂ ನಮ್ಮ ಸುತ್ತ ಇದ್ದಾರೆ. ಈ ದುಃಖದಿಂದ ಹೊರಗೆ ಬನ್ನಿ ಎಂದಿದ್ದರು ಎಂದು ಅವರನ್ನು ನೆನಪು ಮಾಡಿಕೊಂಡಿದ್ದಾರೆ.

- Advertisement -

You May Like

More