ಟ್ರೋಲರ್ ಗಳಿಗೆ ಡೊಂಟ್ ಕೇರ್ ಎಂದ ಮಲೈಕಾ, ನನ್ನ ಇಷ್ಟದಂತೆ ನಾನು ಬಟ್ಟೆ ಹಾಕೋದು ಎಂದ್ರು….!

ಸಿನೆಮಾ ಸೆಲೆಬ್ರೆಟಿಗಳಿಗೆ ಟ್ರೋಲ್ ಎಂಬುದು ಸರ್ವೇ ಸಾಮಾನ್ಯವಾಗಿದೆ. ಪ್ರತಿಯೊಂದು ವಿಚಾರಕ್ಕೂ ಸೆಲೆಬ್ರೆಟಿಗಳು ಟ್ರೋಲ್ ಗೆ ಗುರಿಯಾಗುತ್ತಿರುತ್ತಾರೆ. ಅದರಂತೆ ಇದೀಗ ಮಲೈಕಾ ಅರೋರಾ ಸಹ ಟ್ರೋಲ್ ಗೆ ಗುರಿಯಾಗಿದ್ದಾರೆ. ಬಾಲಿವುಡ್ ಸಿನಿರಂಗದಲ್ಲಿ ಬಹುತೇಕ ಎಲ್ಲಾ ನಟಿಯರೂ ಹೆಚ್ಚಾಗಿ ತಾವು ತೊಡುವ ಬಟ್ಟೆಗಳಿಂದಲೇ ಸುದ್ದಿಯಾಗಿ ಟ್ರೋಲ್ ಆಗುತ್ತಿರುತ್ತಾರೆ. ಆದರೆ ಮಲೈಕಾ ಟ್ರೋಲರ್‍ ಗಳಿಗೆ ಡೊಂಟ್ ಕೇರ್‍ ಎನ್ನತ್ತಾ, ನನ್ನ ಇಷ್ಟದಂತೆ ನಾನು ಬಟ್ಟೆ ಹಾಕೋದು ಎಂಬಂತೆ ಮತ್ತೆ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ.

ಬಾಲಿವುಡ್ ನಟಿ ಮಲೈಕಾ ಬೋಲ್ಡ್ ನೆಸ್ ಹಾಗೂ ಹಾಟ್ ನೆಸ್ ಗೆ ಫೇಮಸ್ ಆಗಿದ್ದಾರೆ. ಆಕೆ ಸದಾ ಹಾಟ್ ಪೊಟೋಗಳ ಮೂಲಕ ಹಾಗೂ ಆಕೆ ಧರಿಸುವ ಬಟ್ಟೆಗಳ ಮೂಲಕವೇ ಸುದ್ದಿಯಾಗುತ್ತಿರುತ್ತಾರೆ. ಇದೀಗ ಆಕೆ ಕೆಲವು ಪೊಟೋಗಳಲ್ಲಿ ಆಕೆ ಬಿಗ್ ಸೈಜ್ ಶರ್ಟ್ ಹಾಗೂ ಫ್ಯಾಂಟ್ ಲೆಸ್ ಆಗಿ ಪೋಸ್ ಕೊಟ್ಟಿದ್ದಾರೆ. ಜೊತೆಗೆ ಮೇಕಪ್ ಲೆಸ್ ಆಗಿಯೂ ಸಹ ಮಲೈಕಾ ತನ್ನ ಮನೆಯ ಬಳಿ ಕಾಣಿಸಿಕೊಂಡಿದ್ದಾರೆ. ಸದಾ ಆಕೆ ಧರಿಸುವ ಬಟ್ಟೆಗಳ ಕಾರಣಕ್ಕಾಗಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಆದರೆ ಆಕೆ ಮಾತ್ರ ಅದ್ಯಾವುದಕ್ಕೂ ಸಹ ಕೇರ್‍ ಮಾಡದೇ ತನ್ನ ಪಾಡಿಗೆ ತಾನು ವಿಭಿನ್ನ ಡ್ರೆಸ್ ಗಳನ್ನು ಧರಿಸುವ ಮೂಲಕ ಟ್ರೋಲರ್‍ ಗಳಿಗೆ ಶಾಕ್ ಹಾಗೂ ಆಹಾರವಾಗುತ್ತಲೇ ಇರುತ್ತಾರೆ.

ನಟಿ ಮಲೈಕಾ ತಮ್ಮ ಮನೆಯ ಮುಂದೆ ಬಿಗ್ ಸೈಜ್ ಶರ್ಟ್ ಧರಿಸಿ ಪ್ಯಾಂಟ್ ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ಈ ಅವತಾರದಲ್ಲಿ ಕಾಣಿಸಿಕೊಂಡ ಈಕೆಯನ್ನು ನೋಡಿದ ಅನೇಕರು ಟ್ರೋಲ್ ಮಾಡಲು ಶುರು ಮಾಡಿದ್ದಾರೆ. ಜತೆಗೆ ಅಸಭ್ಯವಾಗಿ ಕಾಮೆಂಠ್ ಗಳನ್ನು ಸಹ ಮಾಡುತ್ತಿದ್ದಾರೆ. ಕೆಲವರು ಮಲೈಕಾರವರನ್ನು ವಿರೋಧಿಸಿದರೇ, ಮತ್ತೆ ಕೆಲವರು ಮಲೈಕಾ ಧೈರ್ಯವನ್ನು ಮೆಚ್ಚಿ ಆಕೆಯನ್ನು ಬೆಂಬಲಿಸಿದ್ದಾರೆ. ಇದೀಗ ಮಲೈಕಾ ನೀಲಿ ಹಾಗೂ ಬಿಳಿ ಶರ್ಟ್ ಹಾಗೂ ಅದೇ ಬಣ್ಣದ ಶಾರ್ಟ್ ನಲ್ಲೂ ಕಾಣಿಸಿಕೊಂಡಿದ್ದಾರೆ. ಕ್ಯಾಜುಯಲ್ ಚಪ್ಪಲಿ ಧರಿಸಿದ್ದಾರೆ. ಆತುರದಲ್ಲಿ ಹೋಗುತ್ತಿದ್ದ ನಟಿ ಮಲೈಕಾ ಕ್ಯಾಮೆರಾಮೆನ್ ಗೆ ಪೋಸ್ ಕೊಡಲು ಸಹ ಸಿದ್ದವಿರಲಿಲ್ಲ. ಸದ್ಯ ಆಕೆಯ ಪೋಸ್ ಗಳು ಸೋಷಿಯಲ್ ಮಿಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಸಹ ಆಗುತ್ತಿವೆ.

ಇನ್ನೂ ಮಲೈಕಾ ಅನೇಕ ದಿನಗಳಿಂದ ಸಿನೆಮಾಗಳಿಂದ ದೂರವೇ ಉಳಿದಿದ್ದಾರೆ. ಅನೇಕ ಸಿನೆಮಾಗಳಲ್ಲಿ ಐಟಂ ಸಾಂಗ್ ಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಸಹ ಮಲೈಕಾ ಗಳಿಸಿಕೊಂಡಿದ್ದಾರೆ. ಇದರ ಜತೆಗೆ ಆಗಾಗ ಕೆಲವೊಂದು ಕಿರುತೆರೆ ಶೋಗಳಲ್ಲಿ ಹಾಗೂ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಆಗಿಯೂ ಸಹ ಕಾಣಿಸಿಕೊಳ್ಳುತ್ತಿರುತ್ತಾರೆ. ಆದರೆ ಆಕೆಯ ಬಳಿ ಯಾವುದೇ ಸಿನೆಮಾಗಳ ಆಫರ್‍ ಗಳು ಇಲ್ಲ. ತನ್ನ ಅಭಿಮಾನಿಗಳಿಗೆ ಆಕೆ ಹತ್ತಿರವಾಗಿರಲು ಸೋಷಿಯಲ್ ಮಿಡಿಯಾದಲ್ಲಿ ಪೊಟೋಗಳನ್ನು ಸಹ ಶೇರ್‍ ಮಾಡುತ್ತಿರುತ್ತಾರೆ.

Previous articleಸಾಮಿ ಸಾಮಿ, ನಾಟು ನಾಟು ಹಾಡುಗಳಿಗೆ ಭರ್ಜರಿಯಾಗಿ ಸಿಗ್ನೇಚರ್ ಸ್ಟೆಪ್ಸ್ ಹಾಕಿದ ಮೆಗಾ ಡಾಟರ್ ನಿಹಾರಿಕಾ…!
Next articleಹೊಸ ಬ್ಯುಸಿನೆಸ್ ಶುರು ಮಾಡಿದ ಕಾಜಲ್, ಸಿನೆಮಾಗಳಿಂದ ದೂರ ಆಗ್ತಾರಾ ಕಾಜಲ್?