News

(video)ತಾಯಿ ಬಗ್ಗೆ ಜಾನಿ ಲೀವರ್ ಮಾತುಗಳನ್ನು ಕೇಳಿ ಭಾವುಕರಾದ ಸೃಜನ್ ಲೋಕೇಶ್! ಕಣ್ಣೀರಿನ ವಿಡಿಯೋ

maja

ನಮ್ಮ ತಂದೆ ತಾಯಿ ನಮಗೋಸ್ಕರ ಎಷ್ಟು ಕಷ್ಟ ಪಡುತ್ತಾರೆ, ನಮ್ಮ ಜೀವನವನ್ನು ರೂಪಿಸಲು ಎಷ್ಟೊಂದು ಕಷ್ಟಪಡುತ್ತಾರೆ ನಿಮಗೆ ಗೊತ್ತೇ ಇದೆ. ಆದರೆ ಈಗಿನ ಕಾಲದೇ ಪರಿಸ್ಥಿತಿ ಹೇಗಿದೆ ಗೊತ್ತ? ಮಕ್ಕಳು ಒಂದು ವಯ್ಯಸ್ಸಿಗೆ ಬರುವ ವರ್ಗೆ ತಂದೆ ತಾಯಿಯ ಜೊತೆಯಲ್ಲೇ ಇರುತ್ತಾರೆ. ಆದರೆ ತಾವು ಒಂದು ಹಂತಕ್ಕೆ ಬಂದ ಮೇಲೆ, ತಮ್ಮ ಶಿಕ್ಷಣ ಮುಗಿಸಿದ ಮೇಲೆ, ಮಕ್ಕಳು ತಮ್ಮ ತಂದೆ ತಾಯಿಯನ್ನು ತೊರೆದು ಬೇರೆ ಬೇರೆ ದೇಶಗಳಿಗೆ ಹೋಗುತ್ತಾರೆ, ಒಂದು ಮದುವೆ ಆದ ನಂತರ ಬೇರೆ ಕಡೆ ಮನೆ ಮಾಡಿ ತಮ್ಮ ತಂದೆ ತಾಯಿಯನ್ನು ಬಿಟ್ಟು ಬಿಡುತ್ತಾರೆ. ಎಲ್ಲಾ ಆದಮೇಲೆ ತಂದೆ ತಾಯಿಯ ಕೊನೆಯ ಕಾಲದಲ್ಲಿ ಅವರನ್ನು ಹೃದ್ದಾಶ್ರಮಕ್ಕೆ ಸೇರಿಸಿ ಬಿಡುತ್ತಾರೆ, ಕೊನೆಗೆ ತಂದೆ ತಾಯಿ ಅಲ್ಲೇ ತಮ್ಮ ಕೊನೆ ಮರಣ ಹೊಂದುತ್ತಾರೆ. ಕಾಲ ಎಷ್ಟು ಬದಲಾಗಿದೆ ಸ್ನೇಹಿತರೆ, ಈಗಿನ ಕಾಲದ ಮಕ್ಕಳು ತಮ್ಮ ತಂದೆ ತಾಯಿಗೆ ಡೋಂಟ್ care ಎನ್ನುತ್ತಾರೆ. ಯಾಕೆಲ್ಲ ಇಷ್ಟೆಲ್ಲಾ ಹೇಳುತ್ತಾ ಇದ್ದಿವಿ ಗೊತ್ತ? ಈ ಕಂಪ್ಲೀಟ್ ಸ್ಟೋರಿ ಓದಿರಿ
ಕನ್ನಡದ ಪ್ರಖ್ಯಾತ ರಿಯಾಲಿಟಿ ಶೋಗಳಲ್ಲಿ ನಮ್ಮ ಟಾಕಿಂಗ್ ಸ್ಟಾರ್ ಸೃಜನ್ ಲೋಕೇಶ್ ಅವರ ಮಜಾ ಟಾಕೀಸ್ ಕೂಡ ಒಂದು. ಮಜಾ ಟಾಕೀಸ್ ಹಾಸ್ಯ ಷೋ ಅನ್ನು ಸೃಜನ್ ಲೋಕೇಶ್ ಅವರ ಲೋಕೇಶ್ ಪ್ರೋಡ್ಯೂಕ್ಷನ್ಸ್ ಎಂಬ ಸಂಸ್ಥೆ ಯಿಂದ ನಿರ್ಮಾಣ ಮಾಡುತ್ತಿದ್ದಾರೆ. ಪ್ರತಿ ವಾರ ಈ ಶೋನಲ್ಲಿ ಬಹಳಷ್ಟು ಅದ್ಭುತ ಕಲಾವಿದರನ್ನು ಕರೆಸುತ್ತಾರೆ. ಇದೇ ರೀತಿ ಇತ್ತೀಚಿಗೆ ನಮ್ಮ ಕನ್ನಡದ ಮಜಾ ಟಾಕೀಸ್ ಶೋನಲ್ಲಿ ಬಾಲಿವುಡ್ ಹಾಸ್ಯ ದಿಗ್ಗಜರಾದ, ಜಾನಿ ಲೀವರ್ ಅವರು ಬಂದಿದ್ದರು. ಈ ಸಮಯದಲ್ಲಿ ಜಾನಿ ಲೀವರ್ ಅವರು ತಾಯಿಯ ಬಗ್ಗೆ, ತಾಯಿಗೋಸ್ಕರ ಮಾಡಿದ ಒಂದು ಚಿಕ್ಕ ದ್ರಿಶ್ಯ ವನ್ನು ನೋಡಿದ್ರೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾ ಗಳಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದೆ, ನೀವು ಈ ವಿಡಿಯೋವನ್ನು ನೋಡಲೇಬೇಕು, ಈ ಕೆಳಗಿನ ವಿಡಿಯೋ ತಪ್ಪದೆ ನೋಡಿರಿ
ಹಿಂದಿ ಚಿತ್ರಗಳಲ್ಲಿ ಸುಮಾರು 25 ವರ್ಷಕ್ಕೂ ಹೆಚ್ಚು ಸಮಯಗಳ ಕಾಲ ಕೆಲಸ ಮಾಡಿದ ಜಾನಿ ಲಿವರ್ ಅವರು ಬಹಳ ಅದ್ಭುತ ಕಲಾವಿದ. ಒಂದು ಕಾಲದಲ್ಲಿ ಚಿತ್ರಗಳಲ್ಲಿ ಇವರ ಸೀನ್ ಅನ್ನು ನೋಡಲು ಜನರು ವೇಟ್ ಮಾಡುತ್ತಿದ್ದರು. ಇದಲ್ಲದೆ ವಿಶೇಷ ಏನಪ್ಪಾ ಅಂದರೆ ನಮ್ಮ ಕನ್ನಡದ ಹಾಸ್ಯ ದಿಗ್ಗಜರಾದ ಸಾಧು ಕೋಕಿಲ ಹಾಗು ಜಾನಿ ಲೀವರ್ ಅವರು ಬಹಳ ಒಳ್ಳೆಯ ಸ್ನೇಹಿತರು. ಇತ್ತೀಚಿಗೆ ನಮ್ಮ ಬೆಂಗಳೂರಿನಲ್ಲಿ ಒಂದೇ ವೆದಿಕೆಯಲ್ಲಿ ಸಾಧು ಕೋಕಿಲ ಹಾಗು ಜಾನಿ ಲೀವರ್ ಅವರು ಕಾಣಿಸಿಕೊಂಡಿದ್ದರು. ಜಾನಿ ಲಿವರ್ ಅವರು ಹಿಂದಿ ಸೇರಿದಂತೆ, ತಮಿಳು, ಮರಾಠಿ ಹಾಗು ತೆಲುಗು ಭಾಷೆಯಲ್ಲಿ ಕೂಡ ಚಿತ್ರಗಳಲ್ಲಿ ನಟಿಸಿದ್ದಾರೆ.
ನಿಮಗೆಲ್ಲ ಗೊತ್ತಿಲ್ಲದೇ ಇರುವ ವಿಷ್ಯ ಏನಪ್ಪಾ ಅಂದರೆ, ಜಾನಿ ಲೀವರ್ ಅವರು ಅದ್ಭುತವಾಗಿ ಕನ್ನಡ ಮಾತಾಡುತ್ತಾರೆ. ಇವರು ಹೇಳುವ ಪ್ರಕಾರ ನಮ್ಮ ಕನ್ನಡದ ಸಾಧು ಕೋಕಿಲ ಅವರೇ ಇವರಿಗೆ ಕನ್ನಡ ಭಾಷೆಯಲ್ಲಿ ಹೇಳಿಕೊಟ್ಟಿದ್ದಾರೆ. ಇತ್ತೀಚಿಗೆ ಮಜಾ ಟಾಕೀಸ್ ನಲ್ಲಿ ಜಾನಿ ಲೀವರ್ ಅವರು ತಾಯಿಯ ಬಗ್ಗೆ ಒಂದು ಅದ್ಭುತವಾದ ನಟನೆಯನ್ನು ಮಾಡಿದ್ದಾರೆ. ಈ ವಿಡಿಯೋವನ್ನು ನೋಡಿದ್ರೆ ನಿಜಕ್ಕೂ ನಿಮ್ಮ ಕಣ್ಣಲ್ಲಿ ನೀರು ಬರುತ್ತದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾ ಪಟ್ಟೆ ವೈರಲ್ ಆಗಿದ್ದು ಬರೊಬ್ಬರು 20 ಲಕ್ಷಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ನೋಡಿದ್ದಾರೆ.
ನಿಮ್ಮಲ್ಲಿ ನಮ್ಮ ಒಂದು ವಿನಂತಿ. ನೀವು ಎಷ್ಟಾದರೂ ದುಡ್ಡು ಮಾಡಿ, ಎಷ್ಟಾದರೂ ದೊಡ್ಡವರಾಗಿ, ನಿಮ್ಮ ತಂದೆ ತಾಯಿಯನ್ನು ಮಾತ್ರ ಮರೆಯಬೇಡಿ. ಅವರು ನಿಮಗೋಸ್ಕರ ತಮ್ಮ ಜೀವನವನ್ನು ಮುಡಿಪಾಗಿ ಇಡುತ್ತಾರೆ, ಕೊನೆ ಪಕ್ಷ ನೀವು ಅವರ ಕೊನೆ ಕಾಲದಲ್ಲಿ ಅವರ ಜೊತೆ ಇದ್ದು, ಅವರನ್ನು ಚನ್ನಾಗಿ ನೋಡಿಕೊಳ್ಳಿ ಸ್ನೇಹಿತರೆ. ನಿಮ್ಮ ತಂದೆ ತಾಯಿಯನ್ನು ಸರಿಯಾಗಿ ನೋಡಿಕೊಳ್ಳದೆ ಇದ್ರೆ, ನೀವು ದೇವರ ಮುಂದೆ ಕೂತು ಎಷ್ಟು ಪೂಜೆ ಮಾಡಿದರು ಅದು ವ್ಯರ್ತ! ತಂದೆ ತಾಯಿಯೇ ನಿಜವಾದ ದೇವರು! ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಕನ್ನಡ ಚಿತ್ರಗಳ ಬಗ್ಗೆ, ಕನ್ನಡ ನಾಡಿನ ಬಗ್ಗೆ, ಕನ್ನಡ ರಿಯಾಲಿಟಿ ಶೋಗಳ ಬಗ್ಗೆ, ಕನ್ನಡ ಧಾರಾವಾಹಿಗಳ ಬಗ್ಗೆ, ಎಲ್ಲಾ ಮಾಹಿತಿಗಾಗಿ ನಮ್ಮ ಪೇಜನ್ನು ತಪ್ಪದೆ ಲೈಕ್ ಮಾಡಿರಿ. ಈ ವಿಡಿಯೋ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top