Film News

ಯುವರತ್ನ ಸಿನಿಮಾ ಬಗ್ಗೆ ನಟ ಮಹೇಶ್ ಬಾಬು ಹೇಳಿದ್ದೇನು !

“ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್” ಅವರ ಚಿತ್ರ “ಯುವರತ್ನ” ಅತ್ಯುತ್ತಮ ಸಾಮಾಜಿಕ ಸಂದೇಶವನ್ನು ಹೊಂದಿದ್ದು ರಾಜ್ಯದಂತ ಭರ್ಜರಿ ಪ್ರದರ್ಶನ ಕಾಣುತ್ತಿದೆ.ಮಹಾಮಾರಿಯ ಕಾರಣದಿಂದ ಅಭಿಮಾನಿಗಳು ಮಾಸ್ಕ್ ಧರಿಸಿಕೊಂಡು ಎಲ್ಲಾ ಮುಂಜಾಗೃತ ಕ್ರಮಗಳನ್ನು ಪಾಲಿಸುತ್ತ ಸಿನಿಮಾ ನೋಡುತ್ತಿದ್ದಾರೆ.ಯುವರತ್ನ ಚಿತ್ರ ತೆಲುಗು ಮತ್ತು ಕನ್ನಡದಲ್ಲಿ ಏಕಕಾಲದಲ್ಲಿ ಬಿಡುಗಡೆಯಾಗಿದ್ದಕ್ಕೆ ಆಂಧ್ರ ಮತ್ತು ತೆಲಂಗಣದಲ್ಲಿ ಸಹ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸಾಕಷ್ಟು ತೆಲುಗು ನಟರು ಕೂಡ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

“ಯುವರತ್ನ” ಚಿತ್ರ ಬಿಡುಗಡೆಯಾದ ನಂತರ ಒಳ್ಳೆಯ ವಿಮರ್ಶೆಯನ್ನು ಪಡೆದುಕೊಂದಿದೆ ಮತ್ತು ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಹೆಚ್ಚಿಸಿಕೊಳ್ಳುತ್ತಿದೆ. ಇದೀಗ ಚಿತ್ರದ ಬಗ್ಗೆ ತೆಲುಗು ಚಿತ್ರರಂಗದ ಸೂಪರ್ ಸ್ಟಾರ್ ನಟ ಮಹೇಶ್ ಬಾಬು ಅವರು ಮಾತನಾಡಿದ್ದಾರೆ. ಮಹೇಶ್ ಬಾಬುಅವರು ಹೇಳಿದ್ದೇನು ಗೊತ್ತಾ.. ತಿಳಿಯಲು ಮುಂದೆ ಓದಿ..

“ಯುವರತ್ನ ಚಿತ್ರದ ಬಗ್ಗೆ ಒಳ್ಳೆಯ ವಿಮರ್ಶೆಗಳು ಕೇಳಿಬರುತ್ತಿದೆ ಈ ಚಿತ್ರದಲ್ಲಿ ಸರ್ಕಾರಿ ಕಾಲೇಜುಗಳು ಮತ್ತು ಸಮಾಜದ ಬಗ್ಗೆ ಒಂದು ಉತ್ತಮ ಸಂದೇಶ ಇದೆ ಎಂಬುದನ್ನ ಕೇಳಿಪಟ್ಟಿದೆನೇ,ಆದಷ್ಟು ಬೇಗ ನಾನು ಕೂಡ ಈ ಸಿನಿಮಾ ನೋಡುತ್ತೇನೆ,ಪುನೀತ್ ಮತ್ತು ಅವರ ಕುಟುಂಬವನ್ನು ನಾನು ಇಷ್ಟ ಪಡುತೇನೆ, ಈ ಚಿತ್ರ ಇನ್ನಷ್ಟು ಹೆಚ್ಹೆಚ್ಚುದಾಖಲೆಗಳನ್ನು ಬರೆಯಲಿ ಎಂದು ಶುಭ ಹಾರೈಸಿದ್ದಾರೆ”.ಅದೇ ರೀತಿ “ಮಹೇಶ್ ಬಾಬು” ಅವರ ಅಭಿಮಾನಿಗಳು ಕೂಡ ಈ ಚಿತ್ರಕ್ಕೆ ಸಹಕಾರವನ್ನ ನೀಡಿದ್ದಾರೆ.

Trending

To Top