ಹೈದರಾಬಾದ್: ಟಾಲಿವುಡ್ನ ಖ್ಯಾತ ನಟ ಪ್ರಿನ್ಸ್ ಮಹೇಶ್ಬಾಬು ಅಭಿನಯದ ಬಹುನಿರೀಕ್ಷಿತ ಚಿತ್ರ ಸರ್ಕಾರುವಾರಿ ಪಾಟ ಚಿತ್ರ ಮುಂದಿನ 2022 ರ ಸಂಕ್ರಾತಿ ಹಬ್ಬದಂದು ಬಿಡುಗಡೆಯಾಗಲಿದೆಯಂತೆ.
ಈಗಾಗಲೇ ದೊಡ್ಡ ದೊಡ್ಡ ಸ್ಟಾರ್ ನಟರ ಚಿತ್ರಗಳ ದಿನಾಂಕಗಳನ್ನು ಲಾಕ್ ಮಾಡಿಕೊಂಡಿದ್ದಾರೆ. ಇದೀಗ ಸರ್ಕಾರು ವಾರಿ ಪಾಟ ಚಿತ್ರ ಸಹ ಬಿಡುಗಡೆಯ ದಿನಾಂಕವನ್ನು ಲಾಖ್ ಮಾಡಿಕೊಂಡಿದೆ. ಕೊರೋನಾ ಲಾಕ್ಡೌನ್ ನಿಯಮಗಳು ಸಡಿಲಿಕೆ ಮಾಡುತ್ತಿದ್ದ ಹಾಗೆ ಬಿಗ್ ಬಜೆಟ್ ಹಾಗೂ ದೊಡ್ಡ ಸ್ಟಾರ್ ನಟರ ಚಿತ್ರಗಳು ಬಿಡುಗಡೆಯತ್ತ ಮುನ್ನೆಡೆಯುತ್ತಿದೆ.
ಕೆಲವು ದಿನಗಳ ಹಿಂದೆಯಷ್ಟೆ ಮಹೇಶ್ ಬಾಬು ರವರ ಸರ್ಕಾರುವಾರಿ ಪಾಟ ಚಿತ್ರದ ಶೂಟಿಂಗ್ ಪ್ರಾರಂಭವಾಗಿದ್ದು, ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇದೀಗ ಚಿತ್ರದ ಬಿಡುಗಡೆ ದಿನಾಂಕ ಘೋಷಣೆ ಮಾಡುವ ಮೂಲಕ ಪ್ರಿನ್ಸ್ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. 2022 ರ ಸಂಕ್ರಾಂತಿ ಹಬ್ಬದಂದು ಅದ್ದೂರಿಯಾಗಿ ತೆರೆಮೇಲೆ ಅಬ್ಬರಿಸಲಿದ್ದಾನೆ ಮಹೇಶ್ ಬಾಬು.
ಇನ್ನೂ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರದ ಬಿಡುಗಡೆ ದಿನಾಂಕವನ್ನು ಸಹ ಚಿತ್ರತಂಡ ಘೋಷಣೆ ಮಾಡಿದ್ದು, ಪೋಸ್ಟರ್ ವೈರಲ್ ಆಗುತ್ತಿದೆ. ಮಹೇಶ್ ಬಾಬು ಪೋಸ್ಟರ್ನಲ್ಲಿ ಖಡಕ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನೂ ಈ ಚಿತ್ರದಲ್ಲಿ ಮಹೇಶ್ ಬಾಬು ಜೊತೆ ಬಹುಬೇಡಿಕೆ ನಟಿ ಕೀರ್ತಿ ಸುರೇಶ್ ರೊಮ್ಯಾನ್ಸ್ ಮಾಡಲಿದ್ದಾರೆ. ಈ ಚಿತ್ರವನ್ನು ಟಾಲಿವುಡ್ ನಿರ್ದೇಶಕ ಪರುಶುರಾಮ್ ನಿರ್ದೇಶನ ಮಾಡುತತ್ಇದ್ದು, ಎಸ್.ಎಸ್.ತಮನ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕಳೆದ ಜನವರಿ 2020 ರಲ್ಲಿ ಸರಿಲೇರು ನೀಕೆವ್ವರು ಚಿತ್ರ ಬಿಡುಗಡೆ ಬಳಿಕ ಇಲ್ಲಿಯವರೆಗೂ ಅಭಿಮಾನಿಗಳ ಮುಂದೆ ಮಹೇಶ್ ಬಾಬು ಬಂದಿಲ್ಲ. ಇದೀಗ ಸರ್ಕಾರು ವಾರಿ ಪಾಟ ಚಿತ್ರದ ಮೂಲಕ 2022 ರಲ್ಲಿ ಅಭಿಮಾನಿಗಳ ಮುಂದೆ ಬರಲಿದ್ದಾರೆ.
