Kannada Cinema News

ಮಗಳು ಜಾನಕೀ ಧಾರಾವಾಹಿ ನಿಂತ ಮೇಲೆ ನಟಿ ಗಾನವಿ ಇವಾಗ ಏನ್ ಮಾಡ್ತಾ ಇದ್ದಾರೆ, ಎಲ್ಲಿದ್ದಾರೆ?

ಮಗಳು ಜಾನಕಿ ಕನ್ನಡದ ಟಾಪ್ ಧಾರಾವಾಹಿಗಳಲ್ಲಿ ಒಂದು! ಈ ಧಾರಾವಾಹಿಯನ್ನು ನಮ್ಮ TN ಸೀತಾರಾಮ್ ಅವರು ನಿರ್ದೇಶನ ಮಾಡಿದ್ದು ಇದರಲ್ಲಿ ಜಾನಕಿಯ ಪಾತ್ರವನ್ನು ಗಾನವಿ ಲಕ್ಷ್ಮಣ್ ಅವರು ಮಾಡಿದ್ದಾರೆ. ಮಗಳು ಜಾನಕೀ ಧಾರಾವಾಹಿಯಲ್ಲಿ ತಮ್ಮ ನಟನೆ ಯಿಂದ ಗಾನವಿ ಅವರು ಇಡೀ ಕರ್ನಾಟಕದ ಮನೆ ಮಾತಾಗಿದ್ದಾರೆ! 2018 ರಲ್ಲಿ ಶುರು ಆಗಿದ್ದ ಧಾರಾವಾಹಿ 2020 ರ ಲಾಕ್ ಡೌನ್ ಸಮಯದಲ್ಲಿ ಕಾರಣಾಂತರ ಗಳಿಂದ ಅಂತ್ಯ ವಾಗಿದೆ! ಹಾಗಾದ್ರೆ ಈಗ ಮಗಳು ಜಾನಕೀ ಖ್ಯಾತಿಯ ಗಾನವಿ ಲಕ್ಷ್ಮಣ್ ಎಲ್ಲಿದ್ದಾರೆ, ಏನ್ ಮಾಡ್ತಾ ಇದ್ದಾರೆ ಗೊತ್ತಾ! ಈ ಸುದ್ದಿ ಪೂರ್ತಿ ಓದಿರಿ

ಮಗಳು ಜಾನಕೀ ಸಮಯದಲ್ಲೇ ಗಾನವಿ ಅವರಿಗೆ ಸಾಕಷ್ಟು ಸಿನಿಮಾಗಳಿಗೆ ಆಫರ್ ಗಳು ಶುರು ಆಗಿತ್ತು. ಧಾರಾವಾಹಿ ನಿಂತ ಮೇಲೆ ಈಗ ಗಾನವಿ ಅವರು ನಮ್ಮ ರಿಷಬ್ ಶೆಟ್ಟಿ ಅವರ ಜೊತೆ ಒಂದು ಸಿನಿಮಾ ಮಾಡುತ್ತಿದ್ದಾರೆ. ಹೌದು ಆ ಸಿನಿಮಾದ ಹೆಸರು “ಹೀರೋ”. ಲಾಕ್ ಡೌನ್ ಸಮಯದಲ್ಲಿ ನಮ್ಮ ರಿಷಬ್ ಶೆಟ್ಟಿ ಮತ್ತು ಅವರ ತಂಡ ಒಂದು ಅದ್ಭುತ ಥ್ರಿಲ್ಲರ್ ಹಾಗು ಕಾಮಿಡಿ ಇರುವ ಕಥೆಯನ್ನು ಮಾಡಿಕೊಂಡು ಈಗ ಸಿನಿಮಾ ಚಿತ್ರೀಕರಣ ಕೂಡ ಮುಕ್ಕಾಲು ಬಾಗ ಮುಗಿದಿದೆ. ಲಾಕ್ ಡೌನ್ ಮುಗಿದ ಆದಮೇಲೆ ರಿಷಬ್ ಶೆಟ್ಟಿ, ಗಾನವಿ ಸೇರಿದಂತೆ ಎಲ್ಲಾ ಸಹ ಕಲಾವಿದರು ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ಮಾಡಿಕೊಂಡು ಬಂದಿದ್ದಾರೆ.

“ಹೀರೋ” ಚಿತ್ರದಲ್ಲಿ ರಿಷಬ್ ಶೆಟ್ಟಿ ಹಾಗು ಗಾನವಿ ಲಕ್ಷ್ಮಣ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಇದಲ್ಲದೆ ಈ ಚಿತ್ರದಲ್ಲಿ ಪ್ರೋಮೊದ್ ಶೆಟ್ಟಿ ಹಾಗು ಉಗ್ರಂ ಮಂಜು ಅವರು ಕೂಡ ನಟಿಸಿದ್ದಾರೆ. ಸದ್ಯ ನಮ್ಮ ಗಾನವಿ ಅವರು ಹೀರೋ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಇದಲ್ಲದೆ ಗಾನವಿ ಅವರು ಸಾಕಷ್ಟು ಬೇರೆ ಕನ್ನಡ ಸಿನಿಮಾಗಳ, ಹೊಸ ಧಾರಾವಾಹಿಗಳ ಅವಕಾಶ ಕೂಡ ಬಂದಿದೆ. ಆದರೆ ಒಪ್ಪಿಕೊಂಡಿರುವ ಸಿನಿಮಾಗಳನ್ನು ಮೊದಲು ಮುಗಿಸಿ ನಂತರ ಧಾರಾವಾಹಿ ಕಡೆಗೆ ಹೋಗುತ್ತೇನೆ ಎಂದು ಗಾನವಿ ಅವರು ಹೇಳಿದ್ದಾರೆ. “ಹೀರೋ” ಚಿತ್ರದ ಒಂದು ವಿಡಿಯೋ ಇತ್ತೀಚಿಗಷ್ಟೇ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಈ ಕೆಳಗಿನ ವಿಡಿಯೋ ನೋಡಿ

ಮೂಲತಃ ಚಿಕ್ಕಮಗಳೂರಿನ ಅವರಾದ ಗಾನವಿ ಲಕ್ಷ್ಮಣ್ ಅವರು ಇದಲ್ಲದೆ ಮತ್ತೊಂದು ಕನ್ನಡ ಚಿತ್ರದಲ್ಲಿ ಕೂಡ ಕೆಲಸ ಮಾಡಿದ್ದಾರೆ. ಹೌದು ಗಾನವಿ ಅವರು ಗಿರೀಶ್ ನಿರ್ದೇಶನದ “ಭಾವಚಿತ್ರ” ಎಂಬ ಚಿತ್ರದಲ್ಲಿ ಕೂಡ ನಟಿಸಿದ್ದಾರೆ. ಈ ಚಿತ್ರ ಕೂಡ ಮುಗಿಯುವ ಹಂತಕ್ಕೆ ಬಂದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಾ ಇದೆ. ಇನ್ನೊಂದು ಕಡೆ ಸೀತಾರಾಮ್ ಅವರು ಮತ್ತೊಂದು ಧಾರಾವಾಹಿಯನ್ನು ಶುರು ಮಾಡುವ ಕೆಲಸದಲ್ಲಿ ಇದ್ದು, ಆ ಧಾರಾವಾಹಿ ಯಲ್ಲಿ ಕೂಡ ನಾವು ಗಾನವಿ ಲಕ್ಷ್ಮಣ್ ಅವರನ್ನು ಕಾಣಬಹುದು ಎನ್ನಲಾಗಿದೆ! ಈ ಸುದ್ದಿ ಇಷ್ಟವಾದಲ್ಲಿ ಇದನ್ನು ಲೈಕ್ ಮಾಡಿ ಶೇರ್ ಮಾಡಿ ಹಾಗು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಮೂಲಕ ನಮಗೆ ತಿಳಿಸಿರಿ.

Trending

To Top