ಚೆನೈ: ಅನೇಕ ಅಡೆತಡೆಗಳ ನಡುವೆ ಮಾಸ್ಟರ್ ಚಿತ್ರ ಇಂದು ಬಿಡುಗಡೆಯಾಗಿದ್ದು, ಅದ್ದೂರಿ ಓಪನ್ ಪಡೆದುಕೊಂಡಿದೆ. ಈ ಪ್ರತಿಕ್ರಿಯೆಗೆ ಮಾಸ್ಟರ್ ಚಿತ್ರತಂಡ ಪುಲ್ ಖುಷ್ ಆಗಿದೆ ಇದರ ನಡುವೆಯೇ ಚಿತ್ರದ ನಿರ್ಮಾಪಕರಿಗೆ ಅಘಾತ ಎದುರಾಗಿದೆ.
ಹೌದು ಮಾಸ್ಟರ್ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಕಾಪಿರೈಟ್ ಕಾನೂನು ಉಲ್ಲಂಘನೆ ಮಾಡಿರುವ ಆರೋಪದಲ್ಲಿ ಚಿತ್ರದ ನಿರ್ಮಾಪಕ ಜೇವಿಯರ್ ಬ್ರಿಟ್ಟೊ ವಿರುದ್ದ ಕೇಸು ದಾಖಲಿಸುವಂತೆ ಮದ್ರಾಸ್ ಹೈಕೋರ್ಟ್ ಸೂಚನೆ ನೀಡಿದೆ ಎನ್ನಲಾಗಿದೆ. ಅಂದಹಾಗೆ ಮಾಸ್ಟರ್ ಚಿತ್ರದ ಆಡಿಯೋ ರಿಲೀಸ್ ಮಾಚ್ 2020 ಮಾಹೆಯಲ್ಲಿ ನಡೆದಿತ್ತು. ಈ ಚಿತ್ರದಲ್ಲಿ ವಿಜಯ್ ನಟಿಸಿದ್ದಂತಹ ಸಿನೆಮಾಗಳ ಹಾಡುಗಳನ್ನು ಬಳಸಿಕೊಳ್ಳಲಾಗಿತ್ತು. ಇದಕ್ಕಾಗಿ ಅನುಮತಿಯಿಲ್ಲದೇ ಬೇರೆ ಸಿನೆಮಾಗಳ ಹಾಡುಗಳನ್ನು ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಖಾಸಗಿ ಸಂಸ್ಥೆಯೊಂದು ನೀಡಿದ ದೂರಿನ ಮೇರೆಗೆ ಕೇಸ್ ದಾಖಲಾಗಿದ್ದು, ಇದೀಗ ಮಾಸ್ಟರ್ ಚಿತ್ರದ ನಿರ್ಮಾಪಕರ ವಿರುದ್ದ ಎಫ್.ಐ.ಆರ್ ದಾಖಲಿಸುವಂತೆ ಕೋರ್ಟ್ ಸೂಚಿಸಿದೆ.
ಇನ್ನೂ ಬೆಳ್ಳಂಬೆಳಗ್ಗೆ ಯೇ ನಟಿ ಕೀರ್ತಿ ಸುರೇಶ್ ಮಾಸ್ಟರ್ ಚಿತ್ರವನ್ನು ವೀಕ್ಷಣೆ ಮಾಡಿದ್ದು, ಈ ವಿಚಾರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಗೊಳಿಸಿದ್ದಾರೆ. ಸುಮಾರು ಒಂದು ವರ್ಷದಿಂದ ಕಾದು ಕುಳಿತ ಬಳಿಕ ಚಿತ್ರಮಂದಿರದಲ್ಲಿ ಸಿನೆಮಾ ವೀಕ್ಷಣೆ ಮಾಡಿರುವ ಸಂತಸವನ್ನು ಬಣ್ಣಿಸಲು ಸಾಧ್ಯವಾಗುತ್ತಿಲ್ಲ. ಈ ಸಿನೆಮಾಗಿಂತ ಉತ್ತಮವಾದ ಸಿನೆಮಾ ಯಾವುದು ಇಲ್ಲ, ಅದುವೇ ಮಾಸ್ಟರ್ ಸಿನೆಮಾ ಎಂದು ಬರೆದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.
ಇನ್ನೂ ಕೊರೋನಾ ಲಾಕ್ ಡೌನ್ ಬಳಿಕ ಮೊಟ್ಟ ಮೊದಲಿಗೆ ಬಿಡುಗಡೆಯಾದ ಬಿಗ್ ಬಜೆಟ್ ಸಿನೆಮಾ ಇದಾಗಿದ್ದು, ಚಿತ್ರಮಂದಿರಗಳಲ್ಲಿ ತಮ್ಮ ಮೆಚ್ಚುಗೆಯ ನಟನ ಚಿತ್ರ ನೊಡಿ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ. ಜೊತೆಗೆ ವಿಜಯ್ ಹಾಗೂ ವಿಜಯ್ ಸೇತುಪತಿಯವರ ನಟನೆ ಅದ್ಬುತವಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
