ಇಳಿವಯಸ್ಸಿನಲ್ಲೂ ಭರ್ಜರಿಯಾಗಿ ಸ್ಟೆಪ್ಸ್ ಹಾಕಿದ ಮಾಧುರಿ.. ವಿಡಿಯೋ ವೈರಲ್ .

ಬಾಲಿವುಡ್ ನ ಖ್ಯಾತ ನಟಿ ಮಾಧುರಿ ದೀಕ್ಷಿತ್ ರವರಿಗೆ ಸದ್ಯ 55 ವರ್ಷ ವಯಸ್ಸು, ವಯಸ್ಸಾದರೂ ಈಕೆ ಹದಿಹರೆಯದ ಹುಡುಗಿಯರನ್ನು ನಾಚಿಸುವಂತೆ ನಟನೆ ಮಾಡುತ್ತಾರೆ. ಜೊತೆಗೆ ಸೋಷಿಯಲ್ ಮಿಡಿಯಾದಲ್ಲೂ ಸಹ ಸಕ್ರಿಯರಾಗಿರುವ ಈಕೆ ಹೆಚ್ಚು ಸುದ್ದಿಯಲ್ಲಿರುತ್ತಾರೆ. ಇದೀಗ ತಮ್ಮ ಇನ್ಸ್ಟಾ ರೀಲ್ಸ್ ನಲ್ಲಿ ಟ್ರೆಂಡಿಂಗ್ ಹಾಡೊಂದಕ್ಕೆ ನೃತ್ಯ ಆಡುವ ಮೂಲಕ ಸುದ್ದಿಯಾಗಿದ್ದಾರೆ.

ನಟಿ ಮಾಧುರಿ ದೀಕ್ಷಿತ್ ವಯಸ್ಸಾದರೂ ಸಹ ಗ್ಲಾಮರ್‍ ಮೈಂಟೈನ್ ಮಾಡುತ್ತಾ ಈಗಲೂ ಕೆಲವೊಂದು ಸಿನೆಮಾಗಳಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾ ಅಭಿಮಾನಿಗಳನ್ನು ರಂಜಿಸುತ್ತಿರುತ್ತಾರೆ. ಸಿನೆಮಾಗಳಲ್ಲಿ ಕಾಣಿಸಿಕೊಳ್ಳುವುದು ಕಡಿಮೆಯಾದರೂ ಸೋಷಿಯಲ್ ಮಿಡಿಯಾದಲ್ಲಂತೂ ಪುಲ್ ಆಕ್ಟೀವ್ ಆಗಿರುತ್ತಾರೆ. ನಟಿ ಮಾಧುರಿ ಇನ್ಸ್ಟಾ ಖಾತೆಯಲ್ಲಿ ಸದಾ ಆಕ್ಟೀವ್ ಇರುತ್ತಾರೆ. ಅದರಲ್ಲೇ ಕೆಲವೊಂದು ಚಟುವಟಿಎಕಗಳನ್ನು ಹಂಚಿಕೊಳ್ಳುತ್ತಾರೆ. ಟ್ರೆಂಡಿಂಗ್ ಹಾಡುಗಳಿಗೆ ಹಜ್ಜೆ ಹಾಕುತ್ತಾ ಅಭಿಮಾನಿಗಳನ್ನು ರಂಜಿಸುತ್ತಾರೆ. ಜೊತೆಗೆ ಅವರ ಕ್ಯೂಟ್ ಸ್ಮೈಲ್ ನ ವಿಡಿಯೋಗಳಂತೂ ಎಲ್ಲರನ್ನೂ ಫಿದಾ ಮಾಡುತ್ತವೆ.

ನಟಿ ಮಾಧುರಿ ದೀಕ್ಷಿತ್ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡಿಂಗ್ ನಲ್ಲಿರುವ ಮೈ ಮನಿ ಡೋನ್ಟ್ ಜಿಗಲ್ ಜಿಗಲ್ ಎಂಬ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಟಿಕ್ ಟಾಕ್ ನಲ್ಲಿ ಮೈ ಮನಿ ಡೋನ್ಟ್ ಜಿಗಲ್ ಜಿಗಲ್ ಹಾಡು ಟ್ರೆಂಡಿಂಗ್ ಆಗಿತ್ತು. ಇನ್ನೂ ಈ ಹಾಡಿಗೆ ಮಾತುಗಳನ್ನು ಸೇರಿಸಿ 2022ರಲ್ಲಿ ಮರುಸೃಷ್ಟಿ ಮಾಡಿದ್ದು ವೈರಲ್ ಆಗಿತ್ತು. ಲೂಯಿಸ್ ಥೇರಾಕ್ಸ್ ಎಂಬಾತ ಈ ಹಾಡನ್ನು ಸೃಷ್ಟಿಸಿದ್ದರು. ಇನ್ನೂ ಈ ಹಾಡು ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅನೇಕ ಸೆಲೆಬ್ರೆಟಿಗಳು ಈ ಹಾಡಿಗೆ ಸಿಂಪಲ್ ಆಗಿ ಹೆಜ್ಜೆ ಹಾಕುತ್ತಾ ಎಲ್ಲರನ್ನೂ ರಂಜಿಸಿದ್ದಾರೆ. ಇನ್ನೂ ಮಾಧುರಿ ದೀಕ್ಷಿತ್ ಸಹ ಈ ಹಾಡಿಗೆ ಹೆಜ್ಜೆ ಹಾಕಿದ್ದು, ಈ ವಿಡಿಯೋ ಸಖತ್ ವೈರಲ್ ಆಗುತ್ತಿದೆ.

ಮಾಧುರಿ ದೀಕ್ಷಿತ್ ತಮ್ಮ ಇನ್ಸ್ಟಾಗ್ರಾಂ ನಲ್ಲಿ ಹಂಚಿಕೊಂಡ ಈ ವಿಡಿಯೋ ಸುಮಾರು ಎರಡು ಮಿಲಿಯನ್ ಗೂ ಅಧಿಕ ವೀಕ್ಷಣೆ ಕಂಡಿದ್ದು, ಎರಡು ಲಕ್ಷಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಮಾಧುರಿ ಅಭಿಮಾನಿಗಳು ವಿವಿಧ ರೀತಿಯ ಕಾಮೆಂಟ್ ಗಳನ್ನು ಹಾಕಿದ್ದಾರೆ. ಸದ್ಯ ನಟಿ ಮಾಧುರಿ ಕೆಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದಿ ಫೇಮ್ ಗೇಮ್ ಎಂಬ ಸಿರೀಸ್ ಮೂಲಕ ಒಟಿಟಿಗೆ ಎಂಟ್ರಿಕೊಟ್ಟಿದ್ದರು. ಸದ್ಯ ಅಮೇಜಾನ್ ಪ್ರೈಮ್ ನಿರ್ಮಾಣ ಮಾಡುತ್ತಿರುವ ಮಜಾಮಾ ಎಂಬ ಸಿನೆಮಾದಲ್ಲಿ ಈಕೆ ನಟಿಸುತ್ತಿದ್ದಾರೆ. ಈ ಸಿನೆಮಾ ಸಲಿಂಗಕಾಮದ ಕಥೆಯನ್ನು ಆಧರಿಸಿ ನಿರ್ಮಾಣ ಆಗುತ್ತಿದ್ದು, ಮಾಧುರಿ ಸಲಿಂಗಕಾಮಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾಎ ಎಂದು ಸುದ್ದಿಗಳು ಹರಿದಾಡುತ್ತಿವೆ.

Previous articleಬಾಲಿವುಡ್ ನಟಿಯರನ್ನೂ ಮೀರಿ ಟಾಪ್ ರೇಟಿಂಗ್ಸ್ ಪಡೆದುಕೊಂಡ ನಟಿ ಸಮಂತಾ….
Next articleಮದುವೆ ಕುರಿತು ನಟಿ ಶ್ರುತಿ ಹಾಸನ್ ಶಾಕಿಂಗ್ ರಿಯಾಕ್ಷನ್……