ಬೆಂಗಳೂರು: ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾದ ಮದಗಜ ಸಿನೆಮಾ ಕನ್ನಡದ ಟೀಸರ್ ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ದೊಡ್ಡ ಮಟ್ಟದಲ್ಲಿ ಹವಾ ಸೃಷ್ಟಿಸಿದೆ. ಇನ್ನೂ ನಟ ಶ್ರೀಮುರಳಿಯವರೇ ತೆಲುಗು ಭಾಷೆಯಲ್ಲೂ ಸಹ ಚಿತ್ರ ರಿಲೀಸ್ ಆಗುವ ಕುರಿತು ಸುಳಿವು ನೀಡಿದ್ದಾರೆ.
ಅಂದಹಾಗೆ ಮದಗಜ ತೆಲುಗು ವರ್ಷನ್ ಟೀಸರ್ ಗೆ ಹಿನ್ನೆಲೆ ಧ್ವನಿ ಕೊಟ್ಟರೋದು ಸಹ ರೋರಿಂಗ್ ಸ್ಟಾರ್ ಶ್ರೀಮುರಳಿ ಎಂಬುದು ವಿಶೇಷ. ಮದಗಜ ತೆಲುಗು ವರ್ಷನ್ ಟೀಸರ್ ರಿಲೀಸ್ ಕುರಿತು ತಮ್ಮ ಸ್ವಂತ ಟ್ವಿಟರ್ ನಲ್ಲಿಯೇ ದಿನಾಂಕ ಹಾಗೂ ಸಮಯವನ್ನು ಸಹ ಬಹಿರಂಗಗೊಳಿಸಿದರು.
ಇನ್ನೂ ಮದಗಜ ತೆಲುಗು ಭಾಷೆಗೆ ಹಿನ್ನೆಲೆ ಧ್ವನಿಯನ್ನು ಸಹ ಶ್ರೀಮುರಳಿ ರವರೇ ನೀಡಿದ್ದು, ಡಬ್ ಮಾಡುತ್ತಿರುವ ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇನ್ನೂ ಈ ಪೊಟೋಗಳಿಂದ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದಾರೆ ಕಾರಣವೆಂದರೇ ಬರೀ ಟೀಸರ್ ನಲ್ಲಿ ಮಾತ್ರ ಶ್ರೀಮುರಳಿ ವಾಯ್ಸ್ ಇರುತ್ತಾ ಅಥವಾ ಚಿತ್ರ ಪೂರ್ತಿ ಇರುತ್ತಾ ಎಂಬ ಕುತೂಹಲ ಸಹ ಹೆಚ್ಚಾಗಿದೆ ಎನ್ನಲಾಗಿದೆ.
ಮದಗಜ ಚಿತ್ರದ ಅಂತಿಮ ಹಂತದ ಚಿತ್ರೀಕರಣ ಮಾತ್ರ ಬಾಕಿಯಿದ್ದು, ಶ್ರೀಮುರಳಿ ಯವರ ಹುಟ್ಟುಹಬ್ಬದಂದು ಮದಗಜ ಕನ್ನಡ ಟೀಸರ್ ಬಿಡುಗಡೆಯಾಗಿತ್ತು. ಇನ್ನೂ ಜನವರಿ 1 ರಂದು 10.10 ನಿಮಿಷಕ್ಕೆ ಆನಂದ್ ಆಡಿಯೋದಲ್ಲಿ ತೆಲುಗು ವರ್ಷನ್ ಟೀಸರ್ ಬಿಡುಗಡೆಯಾಗಲಿದೆ.
