ರೋರಿಂಗ್ ಸ್ಟಾರ್ ಹುಟ್ಟುಹಬ್ಬದಂದು ರಿಲೀಸ್ ಆಯ್ತು ಮದಗಜ ಟೀಸರ್

ಬೆಂಗಳೂರು: ಸ್ಯಾಂಡಲ್ ವುಡ್ ನ ರೋರಿಂಗ್ ಸ್ಟಾರ್ ಶ್ರೀಮುರಳಿಗೆ ಇಂದು ಡಿಸೆಂಬರ್ 17 ಹುಟ್ಟುಹಬ್ಬದ ಸಂಭ್ರಮ ಜೊತೆಗೆ ತಾವು ಅಭಿನಯಿಸಿರುವ ಮದಗಜ ಸಿನೆಮಾದ ಫಸ್ಟ್ ಲುಕ್ ಟೀಸರ್ ಸಹ ಬಿಡುಗಡೆಯಾಗಿದೆ. ಇನ್ನೂ ಟೀಸರ್ ಬಿಡುಗಡೆ ಮಾಡಿದ್ದು ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್..

ಸ್ಯಾಂಡಲ್ ವುಡ್ ಬಹುನಿರೀಕ್ಷಿತ ಮದಗಜ ಚಿತ್ರದ ಫಸ್ಟ್ ಲುಕ್ ಟೀಸರ್ ರಿಲೀಸ್ ಆಗಿದ್ದು, ಸುಮಾರು ೧.೪೧ ನಿಮಿಷದ ಈ ಟೀಸರ್ ನಲ್ಲಿ ವಾರಣಾಸಿಯಲ್ಲಿ ಚಿತ್ರೀಕರಿಸಿದ ದೃಶ್ಯಗಳು. ಕೆಲವೊಂದು ಅದ್ಬುತ ಆಕ್ಷನ್ ಸೀನ್ ಗಳು, ಶ್ರೀಮುರಳಿಯವರ ಸೂಪರ್ ವಾಯ್ಸ್, ಕೊನೆಯಲ್ಲಿ ಮಾಸ್ ಲುಕ್ ನಲ್ಲಿ ಶ್ರೀಮುರಳಿ ಕಾಣಿಸಿಕೊಳ್ಳುತ್ತಾರೆ.

ಇನ್ನೂ ಮದಗಜ ಟೀಸರ್ ರಿಲೀಸ್ ಮಾಡಿ ಅಭಿಪ್ರಾಯ ವ್ಯಕ್ತಪಡಿಸಿದ ಪ್ರಶಾಂತ್ ನೀಲ್, ಸಿನೆಮಾ ರಂಗದಲ್ಲಿ ನಾನು 10 ವರ್ಷಗಳ ಅನುಭವ ಹೊಂದಿದ್ದು, ಮದಗಜ ಟೀಸರ್ ಅದ್ಬುತವಾಗಿದೆ. ಟೀಸರ್ ನಲ್ಲಿ ಶ್ರೀಮುರಳಿ ಘರ್ಜಿಸುತ್ತಿದ್ದಾರೆ ಅದೇ ರೀತಿ ಮುಂದಿನ ದಿನಗಳಲ್ಲಿ ಘರ್ಜಿಸುತ್ತಲೇ ಇರಬೇಕು. ಮದಗಜ ಚಿತ್ರ ತಂಡಕ್ಕೆ ಶುಭಾಷಯಗಳು ಎಂದಿದ್ದಾರೆ.

ಇನ್ನೂ ಸಿನೆಮಾದ ಚಿತ್ರೀಕರಣವನ್ನು ಬಹುತೇಕ ಕಾಶಿಯಲ್ಲಿ ಚಿತ್ರೀಕರಿಸಲಾಗಿದ್ದು, ಉಳಿದ ಭಾಗವನ್ನು ಮೈಸೂರು, ಬೆಂಗಳೂರುಗಳಲ್ಲಿ ಚಿತ್ರೀಕರಿಸಿದೆ. ಈ ಚಿತ್ರವನ್ನು ಮಹೇಶ್ ಕುಮಾರ್ ನಿರ್ದೇಶಿಸಿದ್ದು, ಉಪಮಾಪತಿ ಶ್ರೀನಿವಾಸ್ ಬಂಡವಾಳ ಹೂಡಿದ್ದಾರೆ. ಇನ್ನೂ ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್, ವಿಲನ್ ಪಾತ್ರದಲ್ಲಿ ತೆಲುಗು ಸ್ಟಾರ್ ನಟ ಜಗಪತಿಬಾಬು ಕಾಣಿಸಿಕೊಳ್ಳಲಿದ್ದಾರೆ.

ಇನ್ನೂ ಶ್ರೀಮುರಳಿ ತಮ್ಮ ಹುಟ್ಟುಹಬ್ಬವನ್ನು ಸರಳವಾಗಿ ಆಚರಣೆ ಮಾಡಿಕೊಂಡಿದ್ದಾರೆ. ಜೊತೆಗೆ ಅಭಿಮಾನಿಗಳಲ್ಲಿಯೂ ಮನವಿ ಮಾಡಿಕೊಂಡಿರುವ ಶ್ರೀಮುರಳಿ ಯಾರು ಮನೆಯ ಬಳಿ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಸಾಮಾಜಿಕ ಜಾಲಾತಾಣಗಳ ಮೂಲಕ ವಿಶ್ ಮಾಡಿ ಅಭಿಮಾನಿಗಳು ಸಂತಸ ಪಡುತ್ತಿದ್ದು, ಅನೇಕ Uಣ್ಯರು ಹಾಗೂ ತೆಲುಗು ನಟ ಜಗಪತಿ ಬಾಬು ಜನ್ಮದಿನದ ಶುಭಾಷಯಗಳು ಶ್ರೀಮುರಳಿ, ನೀವು ತುಂಬಾ ಕೂಲ್ ನಟ ಎಂದು ಭಾವಿಸುತ್ತೇನೆ. ನೀವು ತೋರಿ ಎಲ್ಲಾ ಕಾಳಜಿಗೆ ಧನ್ಯವಾದಗಳು ಎಂದು ವಿಶ್ ಮಾಡಿದ್ದಾರೆ.

Previous articleಮುತ್ತಪ್ಪ ರೈ ಚಿತ್ರದಲ್ಲಿ ನಾಯಕಿಯಾಗಿ ಮಲಯಾಳಂ ನಟಿ!
Next articleಘೋಷಣೆಯಾಯ್ತು ಹೊಂಬಾಳೆ ಫಿಲ್ಸ್ಮ ಹೊಸ ಚಿತ್ರದ ಹೆಸರು