Film News

ಡಿ.17 ಕ್ಕೆ ಮದಗಜ ಟೀಸರ್ ರಿಲೀಸ್!

ಬೆಂಗಳೂರು: ಉಗ್ರಂ ಚಲನಚಿತ್ರದ ಮೂಲಕ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಚಿತ್ರ ಮದಗಜ ಟೀಸರ್ ಇದೇ ತಿಂಗಳ 17 ರಂದು ಬಿಡುಗಡೆ ಮಾಡಲಿದ್ದು, ಖ್ಯಾತ ನಿರ್ದೇಶಕ ಪ್ರಶಾಂತ್ ನೀಲ್ ರವರು ಟೀಸರ್ ರಿಲೀಸ್ ಮಾಡುತ್ತಿರುವುದು ವಿಶೇಷವಾಗಿದೆ.

ಕೆಜಿಎಫ್ ಚಿತ್ರದ ಮೂಲಕ ವಿಶ್ವ ಮಟ್ಟದಲ್ಲಿ ಖ್ಯಾತಿ ಗಳಿಸಿರುವ ಪ್ರಶಾಂತ್ ನೀಲ್ ಸ್ವತಃ ನಟ ಶ್ರೀಮುರಳಿಯವರ ಭಾಮೈದ. ಶ್ರೀ ಮುರಳಿ ನಟಿಸಿದ ಹಲವು ಚಿತ್ರಗಳು ಸಕ್ಸಸ್ ನೀಡಿರಲಿಲ್ಲ. ಈ ವೇಳೆ ಶ್ರೀಮುರಳಿ ರವರಿಗೆ ಉಗ್ರಂ ಚಿತ್ರದ ಮೂಲಕ ಪುನರ್ ಜನ್ಮ ನೀಡಿದ್ದು ಪ್ರಶಾಂತ್ ನೀಲ್ ಎಂತಲೇ ಹೇಳಬಹುದು.

ಇನ್ನೂ ಮದಗಜ ಚಿತ್ರದ ಮೋಸ್ಟ್ ಎಕ್ಸ್ ಪೆಕ್ಟೆಡ್ ಟೀಸರ್ ನ್ನು ಬಿಡುಗಡೆ ಮಾಡುತ್ತಿರುವ ದಿನದಂತೆ ಅಂದರೇ ಡಿ.17 ರಂದೇ ಶ್ರೀ ಮುರಳಿಯವರ ಹುಟ್ಟುಹಬ್ಬವಾಗಿರುವುದರಿಂದ ಚಿತ್ರತಂಡ ಟೀಸರ್ ಬಿಡುಗಡೆ ಮೂಲಕ ವಿಶೇಷವಾಗಿ ಆಚರಿಸಲಿದ್ದಾರೆ. ಆ ಮೂಲಕ ಅಭಿಮಾನಿಗಳಿಗೂ ಭರ್ಜರಿ ಗಿಫ್ಟ್ ನೀಡಿದಂತಾಗುತ್ತದೆ ಎಂಬುದು ಚಿತ್ರತಂಡದ ಆಸೆಯಾಗಿದೆ. ಇನ್ನೂ ಟೀಸರ್ ಬಿಡುಗಡೆ ಕುರಿತು ಮದಗಜ ಚಿತ್ರದ ನಿರ್ದೇಶಕ ಅಯೋಗ್ಯ ಚಿತ್ರದ ಖ್ಯಾತಿಯ ಮಹೇಶ್ ಕುಮಾರ್ ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಪಡಿಸಿದ್ದಾರೆ. ಜೊತೆಗೆ ಪ್ರಶಾಂತ್ ನೀಲ್ ಸರ್ ರವರು ಟೀಸರ್ ರಿಲೀಸ್ ಮಾಡಲು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

ಈ ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಅಭಿನಯಿಸಲಿದ್ದು, ಮೊದಲ ಬಾರಿಗೆ ಶ್ರೀ ಮುರಳಿ ಜೊತೆ ಆಶಿಕಾ ಜೋಡಿಯಾಗಲಿದ್ದಾರೆ. ಇನ್ನೂ ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿದಿದ್ದು, ಮುಂದಿನ ವರ್ಷದಲ್ಲಿ ತೆರೆಮೇಲೆ ಕಾಣಿಸಿಕೊಳ್ಳಲಿದೆ.

Trending

To Top