Film News

ರಿಲೀಸ್ ಆಗಲಿದೆ ಮದಗಜ ತೆಲುಗು ವರ್ಷನ್ ಟೀಸರ್

ಬೆಂಗಳೂರು: ಅಯೋಗ್ಯ ಚಿತ್ರದ ಖ್ಯಾತಿಯ ಮಹೇಶ್ ಕುಮಾರ್ ನಿರ್ದೇಶನದ ಮದಗಜ ಚಿತ್ರದ ತೆಲುಗು ಟೀಸರ್ ಜನವರಿ 1 ರಂದು ರಿಲೀಸ್ ಆಗಲಿದೆ ಎಂಬ ಮಾಹಿತಿ ದೊರೆತಿದೆ.

ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ ಮದಗಜ ಚಿತ್ರ ಕನ್ನಡ ಭಾಷೆಯಲ್ಲಿ ಮಾತ್ರ ಹವಾ ಸೃಷ್ಟಿ ಮಾಡಿತ್ತು. ಇದೀಗ ತೆಲುಗು ಭಾಷೆಯಲ್ಲೂ ಸಹ ಮದಗಜನ ಆರ್ಭಟ ಶುರುವಾಗಲಿದೆ. ಆ ಮೂಲಕ ಆಂಧ್ರ-ತೆಲಂಗಾಣಕ್ಕೂ ಮದಗಜನ ಹವಾ ವಿಸ್ತಾರವಾಗಲಿದೆ ಎನ್ನಲಾಗುತ್ತಿದೆ.

ಇನ್ನೂ ಈ ಕುರಿತು ಮದಗಜ ಚಿತ್ರದ ನಾಯಕ ರೋರಿಂಗ್ ಸ್ಟಾರ್ ಶ್ರೀಮುರಳಿ ರವರೇ ತಮ್ಮ ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಜನವರಿ 1 ರಂದು ಬೆಳಿಗ್ಗೆ 10.10 ನಿಮಿಷಕ್ಕೆ ಆನಂದ್ ಆಡಿಯೋದಲ್ಲಿ ಮದಗಜ ಟೀಸರ್ ರಿಲೀಸ್ ಆಗಲಿದೆ ಎಂಬ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನೂ ಈಗಾಗಲೇ ಮದಗಜ ಸಿನೆಮಾ ಶೂಟಿಂಗ್ ಅಂತಿಮ ಹಂತದಲ್ಲಿದ್ದು, ಶೀಘ್ರವೇ ತೆರೆಮೇಲೆ ಕಾಣಿಸಿಕೊಳ್ಳಲಿದೆ. ಈ ಚಿತ್ರವನ್ನು ಉಮಾಪತಿ ಶ್ರೀನಿವಾಸ ಗೌಡ ನಿರ್ಮಾಣ ಮಾಡುತ್ತಿದ್ದು, ಶ್ರೀಮುರಳಿಗೆ ನಾಯಕಿಯಾಗಿ ಆಶಿಕಾ ರಂಗನಾಥ್ ನಟಿಸುತ್ತಿದ್ದಾರೆ. ಶ್ರೀಮುರಳಿ ಹುಟ್ಟುಹಬ್ಬದಂದು ಮದಗಜ ಟೀಸರ್ ಬಿಡುಗಡೆ ಮಾಡಿತ್ತು ಚಿತ್ರತಂಡ. ಇದೀಗ ಹೊಸ ವರ್ಷಕ್ಕೆ ಮುಂದೆ ತೆಲುಗು ವರ್ಷನ್ ಟೀಸರ್ ಬಿಡುಗಡೆಯಾಗಲಿದೆ.

Trending

To Top