Film News

ಮದಗಜ ಚಿತ್ರತಂಡದಿಂದ ಜಗಪತಿಬಾಬು ಗೆ ವಿಶೇಷ ಹುಟ್ಟುಹಬ್ಬದ ಶುಭಾಷಯ

ಬೆಂಗಳೂರು: ಇಂದು ದಕ್ಷಿಣ ಭಾರತದ ಖ್ಯಾತ ನಟ ಜಗಪತಿ ಬಾಬು ರವರ ಹುಟ್ಟುಹಬ್ಬದವಾಗಿದ್ದು, ಮದಗಜ ಚಿತ್ರತಂಡ ಜಗಪತಿ ಬಾಬು ರವರಿಗೆ ವಿಶೇಷ ರೀತಿಯಲ್ಲಿ ಶುಭಾಷಗಳನ್ನು ಕೋರಿದ್ದಾರೆ.

ನಟ ಜಗಪತಿ ಬಾಬು ರವರು ಇಂದಿಗೆ ೫೮ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಅಂದಹಾಗೆ ನಟ ಜಗಪತಿ ಬಾಬು ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಚಿತ್ರ ಮದಗಜ ಚಿತ್ರದಲ್ಲಿ ಖಳನಾಯಕನಾಗಿ ಅಭಿನಯಿಸುತ್ತಿದ್ದು, ಅವರ ಹುಟ್ಟುಹಬ್ಬದಂದು ಮದಗಜ ಚಿತ್ರದ ವಿಶೇಷವಾದ ಟೀಸರ್ ಹಾಗೂ ಜಗಪತಿ ಬಾಬು ಚಿತ್ರದಲ್ಲಿ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಕುರಿತು ಫಸ್ಟ್‌ಲುಕ್ ಸಹ ರಿಲೀಸ್ ಮಾಡಿದ್ದಾರೆ.

ಇನ್ನೂ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಮದಗಜ ಚಿತ್ರದಲ್ಲಿ ಜಗಪತಿ ಬಾಬು ಶ್ರೀಮುರಳಿಯನ್ನು ಎದುರಿಸಲಿದ್ದಾರೆ. ಇನ್ನೂ ಸದ್ಯ ಬಿಡುಗಡೆಯಾದ ಟೀಸರ್ ನಲ್ಲಿ ಜಗಪತಿಬಾಬು ಗೆಟಪ್ ಹಾಗೂ ಚಿತ್ರದ ಸಂಗೀತ ನಿರ್ದೇಶಕ ರವಿ ಬಸ್ರೂರು ನೀಡಿರುವ ಮ್ಯೂಸಿಕ್‌ಗೆ ಅಭಿಮಾನಿಗಳು ಫಿಧಾ ಆಗಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಉಮಾಪತಿ ನಿರ್ಮಾಣದ ರಾಬರ್ಟ್ ಚಿತ್ರದಲ್ಲೂ ಸಹ ಜಗಪತಿ ಬಾಬು ಕಾಣಿಸಿಕೊಂಡಿದ್ದು, ರಾಬರ್ಟ್ ಚಿತ್ರತಂಡ ಸಹ ಪೋಸ್ಟರ್ ರಿಲೀಸ್ ಮಾಡಿ ಶುಭಾಷಯಗಳನ್ನು ತಿಳಿಸಿದೆ. ಅಷ್ಟೇಅಲ್ಲದೇ ದಕ್ಷಿಣ ಭಾರತದಲ್ಲಿ ಫೇಮಸ್ ಆಗಿರುವ ಜಗಪತಿ ಬಾಬು ರವರಿಗೆ ತೆಲುಗು, ಕನ್ನಡ, ತಮಿಳು ಸೇರಿದಂತೆ ಅನೇಕ ಕಲಾವಿದರು, ನಟರು, ಅಭಿಮಾನಿಗಳು ಶುಭಾಷಯಗಳ ಸುರಿಮಳೆಗೈದಿದ್ದಾರೆ.

ಈಗಾಗಲೇ ಮದಗಜ ಸಿನೆಮಾದ ಟೀಸರ್ 3 ಭಾಷೆಗಳಲ್ಲಿ ಬಿಡುಗಡೆಯಾಗಿದ್ದು, ದಕ್ಷಿಣ ಭಾರತದಲ್ಲಿ ಸಖತ್ ಸದ್ದು ಮಾಡುತ್ತಿದೆ. ಇನ್ನೂ ಚಿತ್ರದ ಶೂಟಿಂಗ್ ಕೊನೆಯ ಹಂತದಲ್ಲಿದ್ದು, ಚಿತ್ರದಲ್ಲಿ ನಾಯಕಿಯಾಗಿ ಆಶಿಕಾ ರಂಗನಾಥ್ ಬಣ್ಣ ಹಚ್ಚಿದ್ದಾರೆ.

Trending

To Top