Film News

ಸಂಕ್ರಾಂತಿಯಂದು ಮದಗಜ ತಮಿಳು ವರ್ಷನ್ ಟೀಸರ್ ಬಿಡುಗಡೆ!

ಬೆಂಗಳೂರು: ಉಮಾಪತಿ ಫಿಲಂಸ್ ಬ್ಯಾನರ್ ನಡಿ ನಿರ್ಮಾಣವಾಗಿರುವ ಶ್ರೀಮುರಳಿ ಅಭಿನಯದ ಮದಗಜ ಚಿತ್ರ ಈಗಾಗಲೇ ಕನ್ನಡ ಹಾಗೂ ತೆಲುಗು ಟೀಸರ್ ರಿಲೀಸ್ ಮಾಡಿ ಯೂಟೂಬ್ ನಲ್ಲಿ ಹವಾ ಸೃಷ್ಟಿಸಿದೆ.

ಇದೀಗ ಸಂಕ್ರಾಂತಿ ಹಬ್ಬದಂದು ತಮಿಳು ವರ್ಷನ್ ಟೀಸರ್ ಸಹ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಟ್ವಿಟರ್ ಖಾತೆಯಲ್ಲಿ ಮಾಹಿತಿ ಬಹಿರಂಗ ಮಾಡಿದ್ದಾರೆ. ಜನವರಿ ೧೪ ಸಂಕ್ರಾಂತಿ ಹಬ್ಬದಂದು ಸಂಜೆ ೫.೦೫ ಗಂಟೆಗೆ ತಮಿಳು ಭಾಷೆಯಲ್ಲಿ ಮದಗಜ ಟೀಸರ್ ಬಿಡುಗಡೆಯಾಗಲಿದೆ. ನಟ ಶ್ರೀಮುರಳಿಯವರೇ ಸ್ವತಃ ಟೀಸರ್ ಲಾಂಚ್ ಮಾಡುತ್ತಿರುವುದು ವಿಶೇಷವಾಗಿದೆ. ಇನ್ನೂ ಮದಗಜ ಚಿತ್ರ ಮೂಲಕ ರೋರಿಂಗ್ ಸ್ಟಾರ್ ಶ್ರೀಮುರಳಿ ಪ್ಯಾನ್ ಇಂಡಿಯಾ ಹಿರೋ ಎನ್ನಿಸಿಕೊಳ್ಳುತ್ತಿದ್ದಾರೆ.

ಹೊಸ ವರ್ಷದ ಅಂಗವಾಗಿ ತೆಲುಗು ಭಾಷೆಯಲ್ಲಿ ಮದಗಜ ಟೀಸರ್ ಬಿಡುಗಡೆಯಾಗಿತ್ತು, ಸಂಕ್ರಾಂತಿ ಹಬ್ಬದ ಪ್ರಯುಕ್ತ ತಮಿಳುನಾಡಿನಲ್ಲಿ ತಮಿಳು ಭಾಷೆಯಲ್ಲಿ ಮದಗಜ ಟೀಸರ್ ಬಿಡುಗಡೆಯಾಗುತ್ತಿದೆ. ಈಗಾಗಲೇ ಮದಗಜ ಚಿತ್ರದ ಶೂಟಿಂಗ್ ಬಹುತೇಕ ಮುಕ್ತಾಯಗೊಂಡಿದ್ದು, ಅಂತಿಮ ಹಂತದ ಶೂಟಿಂಗ್ ಮಾತ್ರ ಬಾಕಿಯಿದೆ. ಇನ್ನೂ ಉಮಾಪತಿ ಶ್ರೀನಿವಾಸ ಗೌಡ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ನಿರ್ದೇಶಕ ಮಹೇಶ್ ಕುಮಾರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ನಟಿ ಆಶಿಕಾ ರಂಗನಾಥ್ ಶ್ರೀಮುರಳಿ ಜೊತೆ ಬಣ್ಣ ಹಚ್ಚಿದ್ದಾರೆ.

Trending

To Top