News

ಮದುವೆಯ ವೇಳೆ ಎಂಟ್ರಿ ಕೊಟ್ಟ ಮಾಜಿ lover ಮಾಡಿದ್ದೇನು ಗೊತ್ತ! ಈ ಭಯಾನಕ ಸ್ಟೋರಿ ನೋಡಿ

Love1

ನೆಲಮಂಗಲ ದಲ್ಲಿ ನಡೆದ ಘಟನೆ ಇದು ಸಿನೆಮಿಮ ರೀತಿಯಲ್ಲಿ ನಡೆದಿದೆ, ಒಂದು ಕಾಲದಲ್ಲಿ ನಾವು ಹಳೆಯ ಸಿನಿಮಾ ಗಳನ್ನು ನೋಡುವಾಗ ಇಂತ ದೃಶ್ಯ ಕಂಡುಬರುತ್ತಿದ್ದವು ಆದರೆ ಅದೆಲ್ಲ ಹಳೆ ಕಥೆ ಸಾರ್, ಅಂತ ದೃಶ್ಯಗಳನ್ನು ನಾವು ನಿಜ ಜೀವನದಲ್ಲಿ ನೋಡುವ ಕಾಲ ಬಂದಿದೆ. ವರ ಇನ್ನೇನು ವಧುವಿನ ಕೊರಳಿಗೆ ತಾಳಿ ಕಟ್ಟಬೇಕು ಅನ್ನೋವಷ್ಟರಲ್ಲಿ ಮುಹೂರ್ತದ ವೇಳೆಗೆ ಮದುವೆ ಮಂಟಪಕ್ಕೆ ಎಂಟ್ರಿ ಕೊಟ್ಟ ವಧುವಿನ ಪ್ರಿಯಕರ, ಆ ಪ್ರಿಯಕರನನ್ನ ಕಂಡೊಡನೆ ನಿಶ್ಚಿಯಿಸಿದ್ದ ಗಂಡಿನೊಂಡಿಗೆ ಮದುವೆ ಬೇಡ ಅಂದ ವಧು, ಈ ಕಾರಣದಿಂದ ರಣರಂಗವಾದ ಮದುವೆಯ ಮಂಟಪ.
ಇದು ಬೆಂಗಳೂರಿನ ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕು ಅರಿಶಿನಕುಂಟೆಯ ಶ್ರೀ ವಿಶ್ವ ವಿಜಯ ವಿಠಲ ಪ್ರಾರ್ಥನಾ ಮಂದಿರದಲ್ಲಿ ನಡೆದಿದೆ. ಗುರುಹಿರಿಯರು ನಿಶ್ಚಯಿಸಿದ್ದಂತೆ ನೆಲಮಂಗಲ ತಾಲೂಕಿನ ನಂದರಾಮಯ್ಯನಪಾಳ್ಯ ಗ್ರಾಮದ ಶ್ರೀರಂಗನಾಥ್ ಮತ್ತು ಬೆಂಗಳೂರು ಕಾಮಾಕ್ಷಿಪಾಳ್ಯದ ಪದ್ಮಪ್ರಿಯಾ ಎಂಬ ವಧುವರರ ಮದುವೆ ನೆರವೇರಬೇಕಿತ್ತು. ವರ ಶ್ರೀರಂಗನಾಥ್ ಇನ್ನೇನು ಪದ್ಮಪ್ರಿಯಾ ಕೊರಳಿಗೆ ತಾಳಿ ಕಟ್ಟಬೇಕು ಅನ್ನುವಷ್ಟರಲ್ಲಿ ಅವಳ ಲವರ್ ಬಂದುಬಿಟ್ಟಿದ್ದ.
ಅವಳ ಲವರ್ ಬಂದ ತಕ್ಷಣವೇ ನನಗೆ ಈ ಮದುವೆ ಬೇಡ ಎಂದು ನುಡಿದ ವದು. ವಧು ಪದ್ಮಪ್ರಿಯ ಕಳೆದೊಂದು ವರ್ಷದಿಂದ ಫೇಸ್ ಬುಕ್ನಲ್ಲಿ ಪರಿಚಯವಾಗಿದ್ದ ಸಂಜು ಎಂಬಾತನನ್ನು ಪ್ರೀತಿಸುತ್ತಿದ್ಲು. ಪದ್ಮಪ್ರಿಯ ಪ್ರಿಯಕರ ಸಂಜು ಸಿನಿಮಾ ರಂಗದಲ್ಲಿ ಅಸಿಸ್ಟೆಂಟ್ ಡೈರೆಕ್ಟರ್ ಆಗಿ ಕೆಲಸ ಮಾಡ್ತಿದ್ದಾರೆ. ಆದ್ರೆ ಈ ವಿಚಾರ ಮನೆಯಲ್ಲಿ ಗೊತ್ತಿರಲಿಲ್ಲ. ವಧುವಿನ ಪೋಷಕರು ಶ್ರೀರಂಗನಾಥ್ ಅನ್ನೋ ಯುವಕನ ಜೊತೆಗೆ ಪದ್ಮಪ್ರಿಯಾ ವಿವಾಹ ನಿಶ್ಚಯಿಸಿದ್ದರು.ಅವರಿಬ್ಬರ ಪ್ರೀತಿಯನ್ನು ಮುಚ್ಚಿಟ್ಟಿದ್ದ ಪದ್ಮಪ್ರಿಯಾ ಮದುವೆ ಮಂಟಪದಲ್ಲಿ ಪ್ರಿಯಕರ ಸಂಜುವನ್ನು ನೋಡಿದ್ದ ತಕ್ಷಣ ತಾಳಿಕಟ್ಟಲು ಬಿಡಲಿಲ್ಲ. ಬಳಿಕ ಇವರಿಬ್ಬರ ಪ್ರೇಮ ಕಥೆ ಕೇಳಿದ ಮಧು ಪೋಷಕರು ಸಂಜುವಿಗೆ ಥಳಿಸಿದ್ದಾರೆ. ವಿಷಯ ತಿಳಿದು ಬಂದ ನೆಲಮಂಗಲ ಟೌನ್ ಪೊಲೀಸರು ಸಂಜುವನ್ನು ಠಾಣೆಗೆ ಕರೆದೊಯ್ಯುದಿದ್ದಾರೆ. ನಂತರ ಸಂಧಾನ ನಡೆಸಿ ಮುಚ್ಚಳಕೆ ಬರೆಸಿಕೊಂಡಿದ್ದಾರೆ.
ನಂತರ ಪ್ರೇಮಿ ಸಂಜು ಜೊತೆಯಲ್ಲೇ ವದು ಪದ್ಮಪ್ರಿಯಾರನ್ನು ನೆಲಮಂಗಲ ಉದ್ಬವ ಗಣಪತಿ ದೇವಸ್ಥಾನದಲ್ಲಿ ಇಷ್ಟವಿಲ್ಲದ ಮನಸ್ಸಿನಿಂದಲೇ ಪೋಷಕರು ಧಾರೆ ಎರೆದು ಕೊಟ್ಟಿದ್ದಾರೆ. ನೋಡಿದ್ರಲ್ಲಾ ಸ್ನೇಹಿತರೆ, ಈಗಿನ ಕಾಲದಲ್ಲಿ ನಮ್ಮ ಸಿನೆಮಾಗಳ ತಾರಾ ನಿಜವಾಗಿಯೂ ಆಗುತ್ತದೆ. ಏನೇ ಆಗಲಿ ನೀವು ಯಾರನ್ನಾದ್ರೂ ಇಷ್ಟ ಪಟ್ಟಿದ್ದಾರೆ ಅದನ್ನು ಮುಂಚೆಯೇ ನಿಮ್ಮ ತಂದೆ ತಾಯಿಗೆ ಹೇಳಬೇಕು. ಅವಾಗ ಇಂತಹ ತೊಂದರೆಗಳು ಆಗುವಿದಿಲ್ಲ ಕಣ್ರೀ. ಈ ಸುದ್ದಿ ಇಷ್ಟ ವಾದಲ್ಲಿ ಇದನ್ನು ಲೈಕ್ ಮಾಡಿ ಕಾಮೆಂಟ್ ಮಾಡಿ ಹಾಗು ಶೇರ್ ಮಾಡಿರಿ. ಈ ಸುದ್ದಿ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ತಪ್ಪದೆ ನಮಗೆ ತಿಳಿಸಿರಿ.

Trending

To Top