ಫೇಸ್ ಬುಕ್, ವಾಟ್ಸಾಪ್ ನಲ್ಲಿ ಹಾರ್ಟ್ ಎಮೋಜಿ ಕಳುಹಿಸಿರೀ ಜೋಕೆ, ಹುಡುಗಿಯರಿಗೆ ಹಾರ್ಟ್ ಎಮೋಜಿ ಕಳುಹಿಸಿದ್ರೆ ಜೈಲಂತೆ….!

ಈಗೇನಿದ್ದರೂ ಸೋಷಿಯಲ್ ಮಿಡಿಯಾ ಜಮಾನಾ ಎಂದೇ ಹೇಳಬಹುದಾಗಿದೆ. ಬಹುತೇಕ ಎಲ್ಲಾ ಜನರು ವಾಟ್ಟಾಪ್, ಫೇಸ್ ಬುಕ್ ಮೂಲಕ ತಮ್ಮ ಇಡೀ ದಿನವನ್ನೆ ಕಳೆಯುತ್ತಾರೆ. ಹದಿಹರೆಯದವರು, ಯುವಕರು, ಸ್ನೇಹಿತರು, ಲವರ್‍ ಗಳು ಹೀಗೆ ಅನೇಕರು ಸೋಷಿಯಲ್…

ಈಗೇನಿದ್ದರೂ ಸೋಷಿಯಲ್ ಮಿಡಿಯಾ ಜಮಾನಾ ಎಂದೇ ಹೇಳಬಹುದಾಗಿದೆ. ಬಹುತೇಕ ಎಲ್ಲಾ ಜನರು ವಾಟ್ಟಾಪ್, ಫೇಸ್ ಬುಕ್ ಮೂಲಕ ತಮ್ಮ ಇಡೀ ದಿನವನ್ನೆ ಕಳೆಯುತ್ತಾರೆ. ಹದಿಹರೆಯದವರು, ಯುವಕರು, ಸ್ನೇಹಿತರು, ಲವರ್‍ ಗಳು ಹೀಗೆ ಅನೇಕರು ಸೋಷಿಯಲ್ ಮಿಡಿಯಾ ಹೆಚ್ಚಾಗಿಯೇ ಬಳಸುತ್ತಾರೆ. ಈ ಸೋಷಿಯಲ್ ಮಿಡಿಯಾದ ಮೂಲಕವೇ ಚಾಟ್ ಮಾಡುತ್ತಾ ಪರಾಮರ್ಶಿಸಿಕೊಳ್ಳುತ್ತಿರುತ್ತಾರೆ. ವಿವಿಧ ಬಗೆಯ ಎಮೋಜಿಗಳ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿರುತ್ತಾರೆ. ಆದರೆ ಇದೀಗ ಹಾರ್ಟ್ ಎಮೋಜಿ ಕಳುಹಿಸಿದ್ರೇ ಜೈಲು ಶಿಕ್ಷೆಯಾಗಲಿದೆಯಂತೆ.

ಹೌದು ಇದು ವಿಚಿತ್ರ ಎನ್ನಿಸಿದರೂ ಸತ್ಯ. ಆದರೆ ಇದು ಭಾರತದಲ್ಲಲ್ಲ. ಬದಲಿಗೆ ಇಸ್ಲಾಮಿಕ್ ರಾಷ್ಟ್ರ ಕುವೈತ್ ನಲ್ಲಿ. ಸಾಮಾಜಿಕ ಜಾಲತಾಣಗಳ ಮೂಲಕ ಹಾರ್ಟ್ ಸಿಂಬಲ್ ಅನ್ನು ಹುಡುಗಿಗೆ ಕಳುಹಿಸಿದರೇ ಜೈಲು ಶಿಕ್ಷೆ ವಿಧಿಸಲಾಗುತ್ತದೆಯಂತೆ. ಹಾರ್ಟ್ ಎಮೋಜಿ ಕಳುಹಿಸುವುದು ದುಷ್ಕೃತ್ಯಕ್ಕೆ ಪ್ರಚೋದನೆ ಮಾಡುವಂತ ಅಪರಾಧವೆಂದು ಪರಿಗಣಿಸಲಾಗಿದ್ದು, ಅದು ಕಾನೂನು ರೀತ್ಯ ಶಿಕ್ಷಾರ್ಹ ಅಪರಾಧವಾಗಿದೆ. ಈ ಅಪರಾಧಕ್ಕೆ ಗುರಿಯಾದವರು ಎರಡು ವರ್ಷಗಳ ಜೈಲು ಶಿಕ್ಷೆ ಹಾಗೂ ಎರಡು ಸಾವಿರ ದಿನಾರ್‍ ಗಳಷ್ಟು ದಂಡ ಸಹ ವಿಧಿಸಲಾಗುತ್ತದೆ ಎಂದು ಕುವೈತ್ ವಕೀಲರೊಬ್ಬರು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಇನ್ನೂ ಸೌದಿ ಅರೇಬಿಯಾದಲ್ಲೂ ಸಹ ವಾಟ್ಸಾಪ್ ಮೂಲಕ ಹಾರ್ಟ್ ಸಿಂಬಲ್ ಕಳುಹಿಸುವುದು ಜೈಲು ಶಿಕ್ಷೆಗೆ ಕಾರಣವಾಗಬಹುದಂತೆ. ಸೌದಿ ಕಾನೂನಿನಂತೆ ಹಾರ್ಟ್ ಎಮೋಜಿಯನ್ನು ಕಳುಹಿಸಿದವರು ಒಂದು ಲಕ್ಷ ಸೌದಿ ರಿಯಾಲ್ ಜೊತೆಗೆ ಎರಡರಿಂದ ಐದು ವರ್ಷಗಳವರೆಗೆ ಜೈಲು ಶಿಕ್ಷೆಗೆ ಸಹ ಗುರಿಯಾಗಬೇಕಾಗುತ್ತದೆಯಂತೆ. ಈ ದೇಶದ ನ್ಯಾಯ ವ್ಯಾಪ್ತಿಯಲ್ಲಿ ರೆಡ್ ಹಾರ್ಟ್ ಸಿಂಬಲ್ ಕಳುಹಿಸುವುದು ಕಿರುಕುಳ ಎಂದು ಅರ್ಥೈಸಬಹುದೆಂದು ಸೌದಿಯಲ್ಲಿ ಸೈಬರ್‍ ಕ್ರೈಂ ತಜ್ಞರು ತಿಳಿಸಿದ್ದಾರಂತೆ.

ಒಟ್ಟಿನಲ್ಲಿ ಕೆಲವೊಂದು ರಾಷ್ಟ್ರಗಳಲ್ಲಿ ವಾಟ್ಸಾಪ್ ಮೂಲಕ ಹಾರ್ಟ್ ಎಮೋಜಿಗಳನ್ನು ಹುಡುಗಿಯರಿಗೆ ಕಳುಹಿಸಿದರೇ ಶಿಕ್ಷೆ, ದಂಡ ತೆರಬೇಕಾಗುತ್ತದೆ. ಆದ್ದರಿಂದ ಆ ರಾಷ್ಟ್ರಗಳಿಗೆ ಹೋಗುವಂತಹವರು ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದರೇ ಒಳ್ಳೆಯದು. ಇಲ್ಲವಾದರೇ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎನ್ನಲಾಗಿದೆ.