Film News

ರವಿಶಂಕರ್ ಗುರೂಜಿಯವರಿಂದ ಲವ್ ಯೂ ರಚ್ಚು ಚಿತ್ರಕ್ಕೆ ಚಾಲನೆ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಸ್ಟಾರ್ ನಟರಾದ ಅಜಯ್ ರಾವ್ ಹಾಗೂ ರಚಿತಾ ರಾಮ್ ರವರ ಲವ್ ಯೂ ರಚ್ಚು ಚಿತ್ರದ ಮೂಹೂರ್ತಕ್ಕೆ ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ರವಿಶಂಕರ್ ಗುರೂಜಿ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.

ಸ್ಯಾಂಡಲ್‌ವುಡ್‌ನಲ್ಲಿ ಅಜಯ್ ರಾವ್ ಹಾಗೂ ರಚಿತಾ ರಾಮ್ ರವರ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಮೊದಲ ಚಿತ್ರ ಇದಾಗಿದ್ದು, ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿಸಿದೆ. ಕೆಲವು ದಿನಗಳ ಹಿಂದೆಯಷ್ಟೆ ಚಿತ್ರದ ಘೋಷಣೆಯಾಗಿದ್ದು, ಮೂಹೂರ್ತ ಸಹ ರವಿಶಂಕರ್ ಗುರೂಜಿ ಸಾರಥ್ಯದಲ್ಲಿ ನೆರವೇರಿದ್ದು, ಶೀಘ್ರದಲ್ಲಿಯೇ ಚಿತ್ರೀಕರಣ ಸಹ ಪ್ರಾರಂಭವಾಗಲಿದೆಯಂತೆ.

ಈ ಕುರಿತು ನಟಿ ರಚಿತಾ ರಾಮ್ ಮಾತನಾಡಿ, ನನಗೆ ಚಿತ್ರದ ಟೈಟಲ್ ಕೇಳಿಯೇ ತುಂಬಾ ಖುಷಿಯಾಗಿದೆ. ಜೊತೆಗೆ ಈ ಚಿತ್ರದ ಮೂಹೂರ್ತವನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಲ್ಲಿ ಮಾಡಿದ್ದು, ಗುರೂಜಿ ಆರ್ಶಿವಾದದೊಂದಿಗೆ ನೆರವೇರಿದ್ದು ಇನಷ್ಟು ಖುಷಿ ತಂದಿದೆ. ಇದೇ ಮೊದಲ ಬಾರಿಗೆ ಗುರೂಜಿಯವರನ್ನು ಭೇಟಿಯಾಗಿದ್ದೇನೆ. ಜೊತೆಗೆ ನಟ ಅಜಯ್ ರಾವ್ ರವರಿಗೆ ಹುಟ್ಟುಹಬ್ಬದ ಶುಭಾಷಯಗಳು ಎಂದಿದ್ದಾರೆ. ಅಷ್ಟೇ ಅಲ್ಲದೇ ನಾನು ಮೊದಲ ಬಾರಿಗೆ ಈ ತಂಡದ ಜೊತೆ ಕೆಲಸ ಮಾಡುತ್ತಿದ್ದು, ಒಳ್ಳೆಯ ಲವ್ ಸ್ಟೋರಿ ಚಿತ್ರವಾಗಿದೆ. ಎಲ್ಲರ ಸಹಕಾರ ಬೆಂಬಲವಿರಲಿ ಎಂದಿದ್ದಾರೆ.

ಅಷ್ಟೇ ಅಲ್ಲದೇ ನಾಯಕ ನಟ ಅಜಯ್ ರಾವ್ ಟೈಟಲ್ ನಲ್ಲಿರುವಂತೆ ಒಳ್ಳೆಯ ಲವ್ ಸ್ಟೋರಿ ಆಧಾರಿತ ಚಿತ್ರವಾಗಿದೆ. ನನ್ನ ಹುಟ್ಟುಹಬ್ಬದಂದು ಚಿತ್ರದ ಮೂಹೂರ್ತ ಕಾರ್ಯಕ್ರಮ ನೆರವೇರಿದ್ದು ತುಂಬಾ ಸಂತಸವಾಗಿದೆ. ಹೊಸದಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಜೋಡಿ ಮಧ್ಯೆ ನಡೆಯುವಂತ ಸುಂದರವಾದ ಕಥೆಯನ್ನು ಈ ಸಿನೆಮಾ ಹೊಂದಿದ್ದು, ಎಲ್ಲರಿಗೂ ತುಂಬಾ ಇಷ್ಟವಾಗುತ್ತೆ ಎಂದಿದ್ದಾರೆ.

Trending

To Top