ಬೆಂಗಳೂರು: ಇತ್ತಿಚಿಗೆ ಮಾಲ್ಡೀವ್ಸ್ ತಾಣ ಸೆಲೆಬ್ರೆಟಿಗಳಿಗೆ ಅಚ್ಚುಮೆಚ್ಚಿನ ತಾಣವಾಗಿ ಮಾರ್ಪಾಡಾಗಿದೆ ಎನ್ನಲಾಬಹುದಾಗಿದೆ. ಇದಕ್ಕೆ ಕಾರಣ ಅನೇಕ ಸೆಲೆಬ್ರೆಟಿಗಳು ಮಾಲ್ಡೀವ್ಸ್ಗೆ ತೆರಳಿ ಎಂಜಾಯ್ ಮಾಡುತ್ತಿದ್ದಾರೆ. ಇದೀಗ ಸ್ಯಾಂಡಲ್ವುಡ್ನ ಮತ್ತೊಂದು ಜೋಡಿ ಮಾಲ್ಡೀವ್ಸ್ನಲ್ಲಿ ಸಖತ್ ಎಂಜಾಯ್ ಮಾಡುತ್ತಿದೆ.
ಇತ್ತೀಚಿಗಷ್ಟೆ ಹಸೆಮಣೆ ಏರಿದ ಸ್ಯಾಂಡಲ್ವುಡ್ನ ಸುಂದರ ಜೋಡಿ ಡಾಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ದಂಪತಿ ಹನಿಮೂನ್ಗಾಗಿ ಮಾಲ್ಡೀವ್ಸ್ಗೆ ತೆರಳಿದ್ದಾರೆ. ಕಳೆದ ಫೆ.೧೪ ಪ್ರೇಮಿಗಳ ದಿನದಂದು ಹಸೆಮಣೆ ಏರಿದ ಈ ಜೋಡಿ ಮಾಲ್ಡೀವ್ಸ್ ಪ್ರವಾಸದ ಕೆಲವೊಂದು ಪೊಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಸಖತ್ ವೈರಲ್ ಆಗುತ್ತಿವೆ.
ಇನ್ನೂ ಈ ಜೋಡಿ ಹನಿಮೂನ್ ಗಾಗಿ ಮಾಲ್ಡೀವ್ಸ್ಗೆ ತೆರಳಿದ್ದು, ಅಲ್ಲಿನ ಪ್ರಕೃತಿಯ ಸೌಂದರ್ಯವನ್ನು ಸವಿಯುತ್ತಿದ್ದಾರೆ. ಇದೀಗ ಇವರಿಬ್ಬರ ಕೆಲವೊಂದು ಪೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಪುಲ್ ವೈಟ್ ಅಂಡ್ ವೈಟ್ ಡ್ರೆಸ್ನಲ್ಲಿ ಪೋಸ್ ನೀಡಿರುವ ಈ ಯಂಗ್ ಕಂಪಲ್ಸ್ ಪೊಟೋಗಳಿಗೆ ಅಭಿಮಾನಿಗಳಿಂದ ಲೈಕ್ಸ್, ಕಾಮೆಂಟ್ಸ್ ಹರಿದುಬರುತ್ತಿದೆ.
ಫೆ.೧೪ ರಂದು ಅದ್ದೂರಿಯಾಗಿ ವಿವಾಹವಾದ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಮದುವೆಯ ಸಂಭ್ರಮಕ್ಕೆ ಅನೇಕ ಸಿನಿನಟರು, ಗಣ್ಯರು ಭೇಟಿ ನೀಡಿದ್ದು, ಶುಭ ಹಾರೈಸಿದ್ದರು. ಇನ್ನೂ ಈ ಜೋಡಿ ಲವ್ ಮಾಕ್ಟೇಲ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದು, ಈಗಾಗಲೇ ಚಿತ್ರದ ಅರ್ಧಕ್ಕೂ ಹೆಚ್ಚಿನ ಭಾಗದ ಶೂಟಿಂಗ್ ಮುಗಿದಿದ್ದು, ಶೀಗ್ರದಲ್ಲೇ ಉಳಿದ ಭಾಗದ ಚಿತ್ರೀಕರಣ ಪ್ರಾರಂಭವಾಗಲಿದೆ. ಮತ್ತೊಂದು ವಿಶೇಷವೆಂದರೇ ಈ ಜೋಡಿಯ ಮದುವೆಯ ದಿನದಂದೇ ಲವ್ ಮಾಕ್ಟೇಲ್-೨ ಚಿತ್ರದ ಹಾಡೊಂದನ್ನು ಸಹ ರಿಲೀಸ್ ಮಾಡಲಾಗಿತ್ತು.
