Film News

ಮಗಳ ಹೆಸರಲ್ಲಿ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ ಲೂಸ್ ಮಾದ

ಬೆಂಗಳೂರು: ಕೆಲವು ವರ್ಷಗಳ ಹಿಂದೆ ಸಖತ್ ಫೇಮಸ್ ಆಗಿದ್ದ, ಕನ್ನಡ ಚಿತ್ರರಂಗದ ಯುವ ನಟ ಲೂಸ್ ಮಾದ ಎಂದು ಕರೆಯಲಾಗುವ ಯೋಗಿ ತಮ್ಮ ಮಗಳ ಹೆಸರಿನಲ್ಲಿ ಚಲನಚಿತ್ರ ನಿರ್ಮಾಣ ಸಂಸ್ಥೆಯನ್ನು ಸ್ಥಾಪಿಸಿದ್ದಾರೆ ಎನ್ನಲಾಗಿದೆ.

ಸಿನೆಮಾ ರಂಗದಲ್ಲಿ ಅನೇಕ ಏಳು-ಬೀಳುಗಳನ್ನು ಕಂಡ ಯೋಗಿ, ಛಲ ಬಿಡದೇ ಹೊಸ ಸಾಹಸಕ್ಕೆ ಕೈ ಹಾಕಿದ್ದು, ತಮ್ಮ ಮಗಳ ಹೆಸರಿನಲ್ಲಿ ನಿರ್ಮಾಣ ಸಂಸ್ಥೆ ಪ್ರಾರಂಭಿಸಿದ್ದು, ಶ್ರೀನಿಕಾ ಎಂಬ ಹೆಸರನ್ನಿಟ್ಟಿದ್ದಾರೆ. ಕೆಲವು ವರ್ಷಗಳಿಂದ ಸಿನೆಮಾಗಳಲ್ಲಿ ಅವಕಾಶ ಕಡಿಮೆ ಆಗಿದ್ದು, ಇದರಿಂದ ವಿಚಲಿತರಾಗ ಯೋಗಿ ಈ ಹೊಸ ಸಾಹಸಕ್ಕೆ ಕೈ ಹಾಕಿದ್ದಾರೆ.

ಇನ್ನೂ ಈ ನಿರ್ಮಾಣ ಸಂಸ್ಥೆಯಲ್ಲಿ ಮೊದಲ ಸಿನೆಮಾ ಕೂಡ ಘೋಷಣೆ ಮಾಡಿದ್ದಾರೆ. ಸ್ವತಃ ಯೋಗಿ ನಾಯಕನಾಗಿ ನಟಿಸುತ್ತಿರುವ ಕಂಸ ಎಂಬ ಚಿತ್ರ ಶ್ರೀನಿಕಾ ಸಂಸ್ಥೆ ನಿರ್ಮಾಣ ಮಾಡಲಿದೆಯಂತೆ. ಜೊತೆಗೆ ಈ ಚಿತ್ರ ತಮಿಳಿನಲ್ಲೂ ಬಿಡುಗಡೆಯಾಗಲಿದ್ದು, ಈ ಸಿನೆಮಾ ವನ್ನು ಆಪಲ್ ಕೇಕ್ ಚಿತ್ರದ ನಿರ್ದೇಶಕ ರಂಜಿತ್ ಕುಮಾರ್ ಗೌಡ ನಿರ್ದೇಶಿಸಲಿದ್ದಾರೆ.

ಇನ್ನೂ ಈ ಕುರಿತು ಯೋಗಿ ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾನು ಸುಮಾರು ವರ್ಷಗಳಿಂದ ಸಿನೆಮಾ ರಂಗದಲ್ಲಿದ್ದೇನೆ. ನಟನೆಗೂ ಭಿನ್ನವಾದದ್ದು ಏನಾದರೂ ಮಾಡಬೇಕೆಂಬ ಮನಸ್ಸಿನಿಂದ ನನ್ನ ಮಗಳ ಹೆಸರಿನಲ್ಲಿ ನಿರ್ಮಾಣ ಸಂಸ್ಥೆಯನ್ನು ಪ್ರಾರಂಭ ಮಾಡಿದ್ದೇನೆ. ಕಂಸ ಸಿನೆಮಾದ ಕಥೆ ಭೂಗತ ಲೋಕ ಹಾಗೂ ಪ್ರೀತಿಯ ವಿಷಯವನ್ನು ಆಧರಿಸಿದ್ದು, ನನ್ನ ಮೊದಲ ಸಿನೆಮಾ ನಂದ ಲವ್ಸ್ ನಂದಿತ ಸಿನೆಮಾವನ್ನು ನೆನಪು ಮಾಡಿದೆ ಎಂದಿದ್ದಾರೆ.

Trending

To Top